ಬೆಂಗಳೂರು, ಚೆನ್ನೈ, ದೆಹಲಿ, ಲಖನೌ ನಂತರ ಈಗ ಗುಜರಾತ್‌ನ ಅಹಮದಾಬಾದ್ ನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್‌ನ ದೆಹಲಿ ಪಬ್ಲಿಕ್ ಶಾಲೆ ಹಾಗೂ ಆನಂದ್ ನಿಕೇತನ್ ರೀತಿಯ ಅನೇಕ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಬಾಂಬ್ ನಿರೋಧಕ ದಳ ಬೆದರಿಕೆ ಬಂದ ಶಾಲೆಗಳಿಗೆ ದೌಡಾಯಿಸಿ ಪತ್ತೆ ಕಾರ್ಯ ನಡೆಸುತ್ತಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಕಳೆದ ವಾರ ದೆಹಲಿ ಎನ್‌ಸಿಆರ್ ಹಾಗೂ ಲಖನೌದ 15ಕ್ಕೂ ಅಧಿಕ ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆ ಸ್ವೀಕರಿಸಲಾಗಿತ್ತು. ಬೆದರಿಕೆ ಹಿನ್ನಲೆ ಕಾರಣ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ನಂತರದಲ್ಲಿ ಪೊಲೀಸರು ಇದನ್ನು ಹುಸಿ ಕರೆ ಎಂದು ತಿಳಿಸಿದ್ದರು.
ದೆಹಲಿಗೆ ಬಂದ ಬೆದರಿಕೆಯ ಐಪಿ ಅಡ್ರಸ್ ಹುಡುಕಿದ ನಂತರ ಇದು ರಷ್ಯಾದಿಂದ ಬಂದ ಬೆದರಿಕೆಯಾಗಿತ್ತು. ವಿಪಿಎನ್ ಮೂಲಕ ಮರೆ ಮಾಡಿ ಐಪಿ ಅಡ್ರಸ್ ಬಳಸಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
