ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ

Date:

Advertisements
ಕಳ್ಳರು ಯಾವಾಗಲೂ ಬುದ್ಧಿವಂತರಾಗಿರುತ್ತಾರೆ, ಜನರನ್ನು ವಂಚಿಸಲು ಹೊಸ ಮಾರ್ಗಗಳ ಮೊರೆ ಹೋಗುತ್ತಾರೆ. ಅದೇ ರೀತಿ ಮೋದಿಯವರು ಕೂಡ. ವೃತ್ತಿವಂತ ರಾಜಕಾರಣಿಗಳು ಬಳಸಿದ ಭ್ರಷ್ಟ ಮಾರ್ಗ ಬಿಟ್ಟು, ಬಾಂಡ್ ಮಾರ್ಗ ಹಿಡಿದರು. ಇಬ್ಬರ ಅಂತಿಮ ಗುರಿ- ಅಧಿಕಾರ ಹಿಡಿಯುವುದು. ಆದರೆ ದಾರಿ ಬೇರೆ, ಅಷ್ಟೇ.

‘ನಮಗೆ ಮಕ್ಕಳಿಲ್ಲ, ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ಅವರ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಚುನಾವಣೆ ಎದುರಿಸುತ್ತಿದ್ದರೆ, ಮೋದಿ ಮತ್ತು ಯೋಗಿ ನಿಮ್ಮ ಮಕ್ಕಳ ಏಳಿಗೆಗೆ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ಉತ್ತರ ಪ್ರದೇಶದ ಎಟಾವಾದ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದಾರೆ.

1974ರಲ್ಲಿ ತೆರೆಕಂಡ, ಡಾ. ರಾಜಕುಮಾರ್ ನಟಿಸಿದ್ದ ‘ಸಂಪತ್ತಿಗೆ ಸವಾಲ್’ ಎಂಬ ಚಿತ್ರದ ಒಂದು ದೃಶ್ಯದಲ್ಲಿ ಸಾಹುಕಾರ್ ಸಿದ್ದಪ್ಪ ಊರಿನ ಜನರನ್ನು ಉದ್ದೇಶಿಸಿ, ‘ಮಹಾ ಜನಗಳೇ ನೀವೆಲ್ಲ ನಮಗೆ ಮಕ್ಕಳಿದ್ದಂತೆ, ನಾವು ನಿಮಗೆ ತಂದೆ ಇದ್ದಂತೆ’ ಎನ್ನುತ್ತಾರೆ.

ಸಾಹುಕಾರ್ ಸಿದ್ದಪ್ಪನ ಮಾತಿಗೆ ಬಡಯುವಕ ಭದ್ರ, ‘ಮಹಾಜನಗಳೇ ನಮ್ ಸಾವ್ಕಾರ್ ಸಿದ್ಧಪ್ಪನೋರು ಹೇಳುದ್ರು… ನೀವೆಲ್ಲರೂ ನನಗೆ ಮಕ್ಕಳಿದ್ದ ಹಾಗೆ, ನಾವು ನಿಮಗೆ ತಂದೆ ಇದ್ದ ಹಾಗೇ ಅಂತ. ಇದ್ ಯಾವ ಗ್ರಹಚಾರ ನಮಗೆ? ಬ್ಯಾಡಿ ಬ್ಯಾಡೀ… ನಾವು ಇವರಿಗೆ ಮಕ್ಕಳಾಗಿ ಉಳುಕೊಳ್ಳುವಂಥ ಪುಣ್ಯ ಬ್ಯಾಡ. ಯಾಕಂದ್ರೆ ಈ ಮಾತಿನ ಅರ್ಥ ಬಹಳಾ ದೂರಕ್ಕೆ ಎಳಕ್ಕೊಂಡು ಹೋಗುತ್ತೆ. ಆದ್ದರಿಂದ ನಮ್ಮ ನಮ್ಮ ತಂದೆ ತಾಯಿಗಳಿಗೆ ನಾವು ಮಕ್ಕಳಾಗಿ ಉಳುಕ್ಕೊಂಬಿಟ್ರೆ ಸಾಕು. ಏನಪ್ಪಾ ಏನಂತಿರಾ?’ ಎನ್ನುತ್ತಾರೆ.

Advertisements

ಬೇರೆಯವರು ‘ನಮ್ಮ ಮಕ್ಕಳು’ ಎಂದಾಗ ಆಗುವ ಆಭಾಸವನ್ನು 1974ರಲ್ಲಿಯೇ ರಾಜಕುಮಾರ್ ಸರಳವಾಗಿ, ಸ್ಪಷ್ಟವಾಗಿ ನಮ್ಮೆದೆಗೆ ದಾಟಿಸಿದ್ದಾರೆ. ರಾಜ್ ಹೇಳಿ 50 ವರ್ಷಗಳ ನಂತರ, ಸಾಹುಕಾರ್ ಸಿದ್ದಪ್ಪನ ವೇಷದಲ್ಲಿರುವ ಮೋದಿ, ಮತ್ತೆ ‘ನಮ್ಮ ಮಕ್ಕಳ’ ಬಗ್ಗೆ ಮಾತನಾಡಿದ್ದಾರೆ.

ಮೋದಿಯವರು ಈಗ ಮಕ್ಕಳನ್ನು ಏಕೆ ಎಳೆದು ತರುತ್ತಿದ್ದಾರೆಂದರೆ, ನನಗೆ ಮತ್ತು ಯೋಗಿಗೆ ಮಕ್ಕಳು-ಮರಿ ಇಲ್ಲ, ಸ್ವಾರ್ಥಿಗಳಲ್ಲ, ಹಣ-ಆಸ್ತಿಗಾಗಿ ಆಸೆ ಪಡುವವರಲ್ಲ, ದೇಶಸೇವೆ ಬಿಟ್ಟು ಬೇರೆ ಗೊತ್ತಿಲ್ಲ ಎಂಬ ಸಂದೇಶ ಸಾರಲು. ಸ್ವಾರ್ಥಿಗಳೇ ತುಂಬಿ ತುಳುಕುತ್ತಿರುವ ಸಮಾಜದಲ್ಲಿ, ಈ ಕಾಲದಲ್ಲೂ ‘ಇಂಥವರು ಇದ್ದಾರೆಯೇ’ ಎಂದು ಬೆರಗು ಹುಟ್ಟಿಸಲು.

ಭಾರತೀಯರು ಭಾವನಾತ್ಮಕ ಜೀವಿಗಳು. ವಾಟ್ಸಾಪ್ ಯೂನಿವರ್ಸಿಟಿಗೆ ಬಲಿಯಾಗಿ, ಯೋಚಿಸುವುದನ್ನೇ ಕಳೆದುಕೊಂಡವರು. ಸಾರ್ವಜನಿಕ ಬದುಕಿನಲ್ಲಿರುವವರು ದುಡ್ಡು ಕಾಸಿಗೆ ಕೈಯೊಡ್ಡುವವರಲ್ಲ ಎಂದಾಕ್ಷಣ ಅವರನ್ನು ಬಲವಾಗಿ ನಂಬುತ್ತಾರೆ. ಅವರು ಹೇಳಿದ್ದು-ಮಾಡಿದ್ದು ಎಲ್ಲ ನಮಗಾಗಿಯೇ ಎಂದು ಭಾವಿಸಿ, ಅವರ ಪರ ನಿಲ್ಲುತ್ತಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಜ್ವಲ್ ಪ್ರಕರಣ, ಒಕ್ಕಲಿಗರ ನಾಯಕತ್ವ ಮತ್ತು ಮನುಷ್ಯತ್ವ

ಆದರೆ, ಮೋದಿಯವರು ಎಲ್ಲಿ ನಿಂತು ಮಾತನಾಡುತ್ತಿದ್ದಾರೆ- ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದಲ್ಲಿರುವ ಸರ್ಕಾರ ಯಾರದು- ಯೋಗಿಯವರದು. ಯೋಗಿಯ ಉತ್ತರ ಪ್ರದೇಶದಲ್ಲಿ ವಂಶ ಪಾರಂಪರ್ಯ ರಾಜಕಾರಣದ ವಿರುದ್ಧ ದೊಡ್ಡ ಗಂಟಲಿನಲ್ಲಿ ಮಾತನಾಡುವ ಮೋದಿ; ಶಿವಮೊಗ್ಗದ ಪ್ರಚಾರ ಭಾಷಣದಲ್ಲಿ ಯಡಿಯೂರಪ್ಪ ಮತ್ತು ಮಕ್ಕಳ ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಮೈಸೂರಿನಲ್ಲಿ ದೇವೇಗೌಡ ಮತ್ತವರ ಪರಿವಾರದ ವಿರುದ್ಧ ಬಾಯಿ ಬಿಡುವುದಿಲ್ಲ. ಇದು ಮೋದಿಯ ಸೋಗಲಾಡಿತನ ಅನ್ನದೇ ವಿಧಿ ಇಲ್ಲ.

ಮನೆ, ಮಕ್ಕಳು, ಮಡದಿ ಇಲ್ಲದ ಹಲವು ರಾಜಕೀಯ ನಾಯಕರನ್ನು ದೇಶ ಕಂಡಿದೆ. ಬಿಜೆಪಿಯ ಬ್ರಹ್ಮಚಾರಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಳ ಬದುಕು; ಮನೆ, ಮಡದಿ, ಮಕ್ಕಳಿದ್ದೂ ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಅವರ ಸರಳತೆ, ಪ್ರಾಮಾಣಿಕತೆ- ಸಾರ್ವಜನಿಕ ಬದುಕಿಗೊಂದು ಮಾದರಿಯಾಗಿ ನಿಲ್ಲುವಂಥದ್ದು. ಇವರಿಬ್ಬರೇ ಅಲ್ಲ, ಈ ರೀತಿ ಬದುಕಿದವರ ಬಹಳ ದೊಡ್ಡ ಪಟ್ಟಿಯೇ ನಮ್ಮ ಕಣ್ಣಮುಂದಿದೆ.

ಆದರೆ, ಮೋದಿ ಮತ್ತು ಯೋಗಿ ಅವರಂಥಲ್ಲ. ಆ ಪಟ್ಟಿಗೆ ಸೇರುವ ರಾಜಕೀಯ ನಾಯಕರಲ್ಲ. ಇವರು ವೃತ್ತಿವಂತ ರಾಜಕಾರಣಿಗಳಿಗಿಂತಲೂ ದುಷ್ಟರು ಮತ್ತು ಭ್ರಷ್ಟರು ಎನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಚೆಕ್‌ನಲ್ಲಿ ಹಣ ಪಡೆದು ದೇಶಾದ್ಯಂತ ಸುದ್ದಿಯಾದರು. ಜೈಲಿಗೂ ಹೋಗಿಬಂದರು. ಆದರೆ ಮೋದಿಯವರು, ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದರು. ಯಡಿಯೂರಪ್ಪನವರು ಚೆಕ್ ಮೂಲಕ ಪಡೆದ ಹಣವನ್ನು ವಿನಿಯೋಗಿಸಿ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದರು. ಮೋದಿಯವರು ಕೂಡ ಬಾಂಡ್ ಮೂಲಕ ಸಂಗ್ರಹಿಸಿದ ಹಣ ವಿನಿಯೋಗಿಸಿ ಗೆದ್ದು ಅಧಿಕಾರಕ್ಕೇರಿದರು. ಇಬ್ಬರ ಅಂತಿಮ ಗುರಿ- ಅಧಿಕಾರ ಹಿಡಿಯುವುದು. ಆದರೆ ದಾರಿ ಬೇರೆ.

ಕಳ್ಳರು ಯಾವಾಗಲೂ ಬುದ್ಧಿವಂತರಾಗಿರುತ್ತಾರೆ, ಜನರನ್ನು ವಂಚಿಸಲು ಹೊಸ ಮಾರ್ಗಗಳ ಮೊರೆ ಹೋಗುತ್ತಾರೆ. ಅದೇ ರೀತಿ ಮೋದಿಯವರು ಕೂಡ. ವೃತ್ತಿವಂತ ರಾಜಕಾರಣಿಗಳು ಬಳಸಿದ ಭ್ರಷ್ಟ ಮಾರ್ಗ ಬಿಟ್ಟು, ಬಾಂಡ್ ಮಾರ್ಗ ಹಿಡಿದರು, ಅಷ್ಟೇ.

ಭಾರತೀಯರ ಮನಸ್ಥಿತಿಯನ್ನು ಅರಿತಿರುವ ಮೋದಿ, ಉತ್ತರ ಪ್ರದೇಶದಲ್ಲಿ ವಂಶ ಪಾರಂಪರ್ಯ ರಾಜಕಾರಣದ ವಿರುದ್ಧ ಮಾತನಾಡುತ್ತಾರೆ. ಬೇರೆ ರಾಜ್ಯಗಳಲ್ಲಿ ಗೋ ಹತ್ಯೆ ಮಹಾ ಪಾಪ ಎನ್ನುವ ಮೋದಿ, ಗೋವಾದಲ್ಲಿ ಗೋ ಮಾಂಸ ತಿನ್ನುವುದು ತಪ್ಪಲ್ಲ ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಶಿಂದೆ-ಅಜಿತ್ ಪವಾರ್ ಪಕ್ಕ ನಿಂತು ಭ್ರಷ್ಟಮುಕ್ತ ಭಾರತ ಮಾಡುತ್ತೇನೆ ಎಂದು ಬಡಬಡಿಸುತ್ತಾರೆ. ಎಐಎಂಐಎಂನ ನಾಯಕ ಅಸಾದುದ್ದಿನ್ ಒವೈಸಿಯನ್ನು ಅಪ್ಪಿಕೊಂಡು, ಮುಸ್ಲಿಮರು ಭಯೋತ್ಪಾದಕರು, ನುಸುಳುಕೋರರು ಎನ್ನುತ್ತಾರೆ. ಕಾಂಗ್ರೆಸ್ ಆಸ್ತಿ ತೆರಿಗೆ ಜಾರಿಗೆ ತಂದು, ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿ ಮುಸ್ಲಿಮರಿಗೆ ಹಂಚುತ್ತದೆ ಎನ್ನುವ ಮೋದಿಯವರು, ಅಂಬಾನಿ-ಅದಾನಿಗಳಿಗೆ ಅನುಕೂಲ ಮಾಡಿಕೊಡಲು ಕಾರ್ಪೊರೇಟ್ ತೆರಿಗೆ ಕಡಿತ ಮಾಡುತ್ತಾರೆ. 400 ಸ್ಥಾನ ಗೆಲ್ಲುವುದು ಸಂವಿಧಾನವನ್ನು ಬದಲಿಸಲಿಕ್ಕೆ ಎಂದು ಬಹಿರಂಗವಾಗಿ ಹೇಳುತ್ತಲೇ, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನಿಸಿತು ಎಂದು ಹಳೇ ಕಾಲದ ಕತೆ ಹೇಳುತ್ತಾರೆ. ಅಮೃತಕಾಲದತ್ತ ದೇಶ ಮುನ್ನುಗ್ಗುತ್ತಿದೆ ಎನ್ನುವ ಮೋದಿಯೇ, ದೇಶದಲ್ಲಿ 80 ಕೋಟಿ ಬಡವರಿದ್ದಾರೆ ಎಂಬ ಅಂಕಿ ಅಂಶವನ್ನೂ ನೀಡುತ್ತಾರೆ.

ಇದೇ ರೀತಿ, ಇವತ್ತಿನ ಮೋದಿಯವರ ‘ನಮಗೆ ಮಕ್ಕಳಿಲ್ಲ, ನಿಮ್ಮ ಮಕ್ಕಳ ಏಳಿಗೆಗಾಗಿ’ ಎನ್ನುವ ಮಾತು ಕೂಡ ಸುಳ್ಳಿನಿಂದ, ಸೋಗಲಾಡಿತನದಿಂದ ಕೂಡಿದ್ದು ಎನ್ನುವುದನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ. ಅಧಿಕಾರದಿಂದ ಕೆಳಗಿಳಿಸಿ, ಮೊದಲು ಮಡದಿ ಜಶೋದಾ ಬೆನ್ ಬಗ್ಗೆ ಮಾತಾಡು ಎನ್ನಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X