ಕೋವಿಶೀಲ್ಡ್ ಅಡ್ಡಪರಿಣಾಮವು ಭಾರೀ ಚರ್ಚೆಗೆ ಗ್ರಾಸವಾಗಿರುವ ನಡುವೆ ಈ ಲಸಿಕೆಯನ್ನು ಅಭಿವೃದ್ಧಿಸಿ ಪಡಿಸಿದ ಸಂಸ್ಥೆ ಅಸ್ಟ್ರಾಜೆನೆಕಾ ಜಾಗತಿಕವಾಗಿ ತನ್ನ ಕೋವಿಡ್ ಲಸಿಕೆಯನ್ನು ಹಿಂಪಡೆದುಕೊಳ್ಳಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಕೋವಿಶೀಲ್ಡ್ ಲಸಿಕೆಯಿಂದಾಗಿ ರಕ್ತ ಹೆಪ್ಪುಗಟ್ಟಬಹುದು ಮತ್ತು ದೇಹದಲ್ಲಿ ಪ್ಲೇಟ್‌ಲೆಟ್ ಪ್ರಮಾಣ ಕಡಿಮೆಯಾಗಬಹುದು. ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಅಥವಾ ಟಿಟಿಎಸ್ ಎಂಬ ರೋಗ ಉಂಟಾಗಬಹುದು ಎಂದು ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ಪಡೆದ ಬಳಿಕ ನಮ್ಮ ಮಗಳ ಸಾವು; ದಂಪತಿ ಆರೋಪ: ಅಸ್ಟ್ರಾಜೆನೆಕಾ ವಿರುದ್ಧ ಮೊಕದ್ದಮೆಗೆ ಸಜ್ಜು
ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ತಯಾರಿಸಿದೆ.
ವಾಣಿಜ್ಯ ಕಾರಣದಿಂದಾಗಿ ಜಾಗತಿಕವಾಗಿ ಕೋವಿಡ್ ಲಸಿಕೆಯನ್ನು ಹಿಂಪಡೆಯಲಾಗುವುದು ಎಂದು ಅಸ್ಟ್ರಾಜೆನೆಕಾ ಹೇಳಿಕೊಂಡಿದೆ. ಲಸಿಕೆಯನ್ನು ಇನ್ನು ಮುಂದೆ ಉತ್ಪಾದಿಸಲಾಗುವುದಿಲ್ಲ ಮತ್ತು ಇನ್ನು ಮುಂದೆ ಬಳಸಲಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ಲಸಿಕೆ ಪಡೆದವರು ಎಚ್ಚರವಹಿಸಬೇಕಾದ್ದು ಎಲ್ಲಿ?
ಅಸ್ಟ್ರಾಜೆನೆಕಾದ ಕೋವಿಡ್ ಲಸಿಕೆಯು ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳಲ್ಲಿ ಜಾಗತಿಕವಾಗಿ ಮಾರಾಟವಾಗುತ್ತದೆ. ಈ ಲಸಿಕೆಯಿಂದ ಸಾವು, ನೋವು ಉಂಟಾಗಿದೆ ಎಂದು ಆರೋಪಿಸಲಾಗಿದ್ದು, ಸಂಸ್ಥೆಯು ವಿರುದ್ಧ 100 ಮಿಲಿಯನ್ ಪೌಂಡ್ ಮೊಕದ್ದಮೆ ಎದುರಿಸುತ್ತಿದೆ.
ಯುಕೆಯಲ್ಲಿ ನಡೆದ ಸುಮಾರು 81 ಸಾವುಗಳಿಗೆ ಕೋವಿಶೀಲ್ಡ್‌ನಿಂದಾಗಿ ಉಂಟಾದ ಟಿಟಿಎಸ್ ಕಾರಣ ಎಂದು ಆರೋಪಿಸಲಾಗಿದೆ. ಆದರೆ ಈಗ ಕೋವಿಶೀಲ್ಡ್ ಲಸಿಕೆ ಹಿಂಪಡೆಯುತ್ತಿರುವ ಅಸ್ಟ್ರಾಜೆನೆಕಾ ನ್ಯಾಯಾಲಯದ ಪ್ರಕರಣಕ್ಕೂ ಈ ನಿರ್ಧಾರಕ್ಕೂ ಸಂಬಂಧವನ್ನು ಅಲ್ಲಗಳೆದಿದೆ.