ಕೋವಿಶೀಲ್ಡ್ ಲಸಿಕೆಯಿಂದಾಗಿ ರಕ್ತ ಹೆಪ್ಪುಗಟ್ಟಬಹುದು ಮತ್ತು ದೇಹದಲ್ಲಿ ಪ್ಲೇಟ್‌ಲೆಟ್ ಪ್ರಮಾಣ ಕಡಿಮೆಯಾಗಬಹುದು ಎಂದು ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದ ಮುಂದೆ ಒಪ್ಪಿಕೊಂಡ ಬಳಿಕ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಲು ಭಾರತದ ದಂಪತಿಗಳು ಸಜ್ಜಾಗಿದ್ದಾರೆ.
ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕವೇ ನಮ್ಮ ಮಗಳು ಸಾವನ್ನಪ್ಪಿದ್ದು ಎಂದು ಪೋಷಕರು ಆರೋಪಿಸಿದ್ದು, ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.
ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ‘ಕೋವಿಶೀಲ್ಡ್’ ಎಂಬ ಹೆಸರಿನಲ್ಲಿ ತಯಾರಿಸಿದೆ. ಈ ಕೋವಿಶೀಲ್ಡ್ ಅಡ್ಡಪರಿಣಾಮದ ಬಗ್ಗೆ ವರದಿಯಾದ ಬಳಿಕ ಈ ಬಗ್ಗೆ ಎಸ್‌ಐಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Thanks to @Teensthack for this article. 🙏
I missed to tell Teena that today (May 1st) is Karunya’s birthday and she was the first wedding anniversary gift to me and my wife from the heavens. 😭
Perhaps due to editorial/space constraints few core points I gave missed to make… pic.twitter.com/bjJjHOc1aM
— Venugopalan Govindan (@gvenugopalan) May 1, 2024
2021 ರಲ್ಲಿ ತನ್ನ 20 ವರ್ಷದ ಮಗಳು ಕಾರುಣ್ಯಳನ್ನು ಕಳೆದುಕೊಂಡ ತಂದೆ ವೇಣುಗೋಪಾಲನ್ ಗೋವಿಂದನ್ ಎಕ್ಸ್ ಪೋಸ್ಟ್‌ನಲ್ಲಿ ಸಂಸ್ಥೆಯ ವಿರುದ್ಧ ಮೊಕದ್ದಮೆಗೆ ಸಜ್ಜಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ಅಡ್ಡ ಪರಿಣಾಮ: ನಟ ಪುನೀತ್ ರಾಜ್‌ಕುಮಾರ್ ಸಾವಿಗೆ ಲಸಿಕೆ ಕಾರಣವೇ?
“15 ಯುರೋಪಿಯನ್ ದೇಶಗಳು ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಸಾವುಗಳ ಕಾರಣ ಕೋವಿಶೀಲ್ಡ್ ಲಸಿಕೆಯ ಬಳಕೆಯನ್ನು ನಿರ್ಬಂಧಿಸಿದ ನಂತರ ಸೀರಮ್ ಇನ್‌ಸ್ಟಿಟ್ಯೂಟ್ ಲಸಿಕೆ ಪೂರೈಕೆಯನ್ನು ನಿಲ್ಲಿಸಬೇಕಿತ್ತು. ನೊಂದ ಪೋಷಕರು ನ್ಯಾಯಕ್ಕಾಗಿ ವಿವಿಧ ನ್ಯಾಯಾಲಯಗಳಲ್ಲಿ ಹೋರಾಟ ನಡೆಸುತ್ತಿದ್ದರೂ ವಿಚಾರಣೆ ನಡೆಯುತ್ತಿಲ್ಲ” ಎಂದು ವೇಣುಗೋಪಾಲನ್ ಆರೋಪಿಸಿದ್ದಾರೆ.
@SerumInstIndia & @adarpoonawalla will have to answer for their sins. For the lives lost.
Also the Govt authorities that approved the rollout when there was zero need as the COVID waves had subsided (see the graphs) and watched from the sidelines when more than 100 deaths were… pic.twitter.com/jcUBwdW70S
— Venugopalan Govindan (@gvenugopalan) May 1, 2024
“ನಾವು ನ್ಯಾಯವನ್ನು ಪಡೆಯದಿದ್ದರೆ, ನ್ಯಾಯಕ್ಕಾಗಿ ಮತ್ತು ಸಾರ್ವಜನಿಕ ಆರೋಗ್ಯದ ಹೆಸರಿನಲ್ಲಿ ನಡೆಸಲಾದ ಈ ದುಷ್ಕೃತ್ಯ ಮತ್ತೆ ನಡೆಯುವುದನ್ನು ತಡೆಯಲು ನಾವು ಯಾವುದೇ ಮತ್ತು ಎಲ್ಲಾ ಅಪರಾಧಿಗಳ ವಿರುದ್ಧ ಹೊಸದಾಗಿ ಪ್ರಕರಣಗಳನ್ನು ದಾಖಲಿಸುತ್ತೇವೆ. ಎಂಟು ಸಂತ್ರಸ್ತ ಕುಟುಂಬ ನಮ್ಮನ್ನು ಸಂಪರ್ಕಿಸಿದೆ. ನಾನು ಅವರೆಲ್ಲರ ಸಾಮಾನ್ಯ ಭಾವನೆಗಳನ್ನು ಪ್ರತಿಧ್ವನಿಸುತ್ತಿದ್ದೇನೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಮಾಯ; ಕೋವಿಶೀಲ್ಡ್ ಎಫೆಕ್ಟ್ ಎಂದ ನೆಟ್ಟಿಗರು
2021 ರಲ್ಲಿ ತನ್ನ ಮಗಳು ರಿಥೈಕಾ (18) ಅನ್ನು ಕಳೆದುಕೊಂಡ ರಚನಾ ಗಂಗೂ ಮತ್ತು ಗೋವಿಂದನ್ ಅವರು ತಮ್ಮ ಮಗಳ ಸಾವಿನ ಬಗ್ಗೆ ತನಿಖೆ ನಡೆಸಲು ವೈದ್ಯಕೀಯ ಮಂಡಳಿಯನ್ನು ನೇಮಿಸುವಂತೆ, ವ್ಯಾಕ್ಸಿನೇಷನ್‌ಗಳ ಪರಿಣಾಮದ ಪತ್ತೆಗೆ ಪ್ರೋಟೋಕಾಲ್ ಸಿದ್ಧಪಡಿಸುವಂತೆ ಕೋರಿ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟವಾದ ಕೊರೋನಾ ಲಸಿಕೆ ಕೆಲವು ಅಪರೂಪದ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಈ ಲಸಿಕೆಯಿಂದಾಗಿ ರಕ್ತ ಹೆಪ್ಪುಗಟ್ಟುವ ಮತ್ತು ಪ್ಲೇಟ್‌ಲೆಟ್ ಪ್ರಮಾಣ ಕಡಿಮೆಯಾಗುವ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಅಥವಾ ಟಿಟಿಎಸ್ ಎಂಬ ರೋಗ ಉಂಟಾಗಬಹುದು ಎಂದು ಕೊನೆಗೂ ಈ ಲಸಿಕೆ ತಯಾರಿಸಿದ ಸಂಸ್ಥೆ ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ.