ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಭಾರತದ ವೈವಿದ್ಯತೆಯ ಬಗ್ಗೆ ನೀಡಿದ ಹೇಳಿಕೆ ಎಲ್ಲಡೆ ವೈರಲ್ ಆಗುತ್ತಿದೆ.
“ನಾವು ಭಾರತದಂತಹ ವೈವಿದ್ಯತೆ ದೇಶವನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಬಹುದು.ಈಶಾನ್ಯ ಭಾರತದಲ್ಲಿರುವವರು ಚೀನಿಗಳಂತೆ, ಪಶ್ಚಿಮ ಭಾಗದವರು ಅರಬ್ಬರಂತೆ,ಉತ್ತರದವರು ಶ್ವೇತ ವರ್ಣದವರಂತೆ ಹಾಗೂ ದಕ್ಷಿಣದವರು ಆಫ್ರಿಕಾದವರಂತೆ ಕಾಣುತ್ತಾರೆ. ಇದು ಅಂತಹ ದೊಡ್ಡ ವಿಷಯವಾಗುವುದಿಲ್ಲ. ನಾವೆಲ್ಲರು ಸೋದರ ಸೋದರಿಯರು” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಹೇಳಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರು ಪ್ರಜಾಪ್ರಭುತ್ವದ ವಿಶ್ವದಲ್ಲಿ ಭಾರತ ಹೇಗೆ ಅದ್ಭುತವಾಗಿದೆ ಎಂಬುದರ ಬಗ್ಗೆ ಉದಾಹರಣೆಯನ್ನು ನೀಡಿದರು. ಭಾರತೀಯರು 75 ವರ್ಷದ ಪ್ರಜಾಪ್ರಭುತ್ವದಲ್ಲಿ ಅಲ್ಲಲ್ಲಿ ಕೆಲವೊಂದು ಹೊಡೆದಾಟಗಳನ್ನು ಬಿಟ್ಟರೆ ಜನರು ತುಂಬ ಸಂತೋಷದ ವಾತಾವರಣದೊಂದಿಗೆ ಒಟ್ಟಾಗಿ ಜೀವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್: ಅಮೆರಿಕ ತಂಡದಲ್ಲಿ ಕನ್ನಡಿಗ ಕ್ರಿಕೆಟರ್‌ಗೆ ಸ್ಥಾನ
ದೇಶದ ಜನರು ವಿವಿಧ ಭಾಷೆಗಳು, ಉಡುಪುಗಳು ಹಾಗೂ ಆಹಾರವನ್ನು ಗೌರವಿಸುತ್ತಾರೆ. ಇಂತಹ ಭಾರತದಲ್ಲಿ ನಾನು ನಂಬಿಕೆ ಹೊಂದಿದ್ದೇನೆ. ಪ್ರತಿಯೊಬ್ಬರಿಗೂ ವಾಸಿಸಲು ಸ್ಥಳವಿದ್ದು, ಎಲ್ಲರೂ ರಾಜಿ ಮಾಡಿಕೊಂಡು ಬದುಕುತ್ತಾರೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದರು.
“ಭಾರತವು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಭ್ರಾತೃತ್ವದೊಂದಿಗೆ ಬೇರೂರಿದೆ. ಆದರೆ ಈಗ ಸ್ವಾತಂತ್ರ್ಯವು ರಾಮ ನವಮಿ, ರಾಮ ದೇಗುಲದೊಂದಿಗೆ ಸವಾಲು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಮಯದಲ್ಲೂ ದೇಗುಲಕ್ಕೆ ತೆರಳುತ್ತಾರೆ. ಅವರು ಭಾರತದ ನಾಯಕರಂತೆ ಮಾತನಾಡದೆ, ಬಿಜೆಪಿಯವರಂತೆ ಮಾತನಾಡುತ್ತಾರೆ” ಎಂದು ಪಿತ್ರೋಡಾ ತಿಳಿಸಿದರು.
ಸ್ಯಾಮ್ ಪಿತ್ರೋಡಾ ಈ ಮೊದಲು ಪಿತ್ರಾರ್ಜಿತ ತೆರಿಗೆಯ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಬಿಜೆಪಿ ನಾಯಕರು ಪಿತ್ರೋಡಾ ಅವರ ಪಿತ್ರಾರ್ಜಿತ ತೆರಿಗೆಯ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದರು.
