ಈಶಾನ್ಯದವರು ಚೀನಿಗಳ ತರ, ದಕ್ಷಿಣದವರು ಆಫ್ರಿಕಾದವರಂತೆ ಕಾಣುತ್ತಾರೆ: ಸ್ಯಾಮ್ ಪಿತ್ರೋಡಾ

Date:

ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಭಾರತದ ವೈವಿದ್ಯತೆಯ ಬಗ್ಗೆ ನೀಡಿದ ಹೇಳಿಕೆ ಎಲ್ಲಡೆ ವೈರಲ್‌ ಆಗುತ್ತಿದೆ.

- Advertisement -

“ನಾವು ಭಾರತದಂತಹ ವೈವಿದ್ಯತೆ ದೇಶವನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಬಹುದು.ಈಶಾನ್ಯ ಭಾರತದಲ್ಲಿರುವವರು ಚೀನಿಗಳಂತೆ, ಪಶ್ಚಿಮ ಭಾಗದವರು ಅರಬ್ಬರಂತೆ,ಉತ್ತರದವರು ಶ್ವೇತ ವರ್ಣದವರಂತೆ ಹಾಗೂ ದಕ್ಷಿಣದವರು ಆಫ್ರಿಕಾದವರಂತೆ ಕಾಣುತ್ತಾರೆ. ಇದು ಅಂತಹ ದೊಡ್ಡ ವಿಷಯವಾಗುವುದಿಲ್ಲ. ನಾವೆಲ್ಲರು ಸೋದರ ಸೋದರಿಯರು” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಸ್ಯಾಮ್‌ ಪಿತ್ರೋಡಾ ಅವರು ಪ್ರಜಾಪ್ರಭುತ್ವದ ವಿಶ್ವದಲ್ಲಿ ಭಾರತ ಹೇಗೆ ಅದ್ಭುತವಾಗಿದೆ ಎಂಬುದರ ಬಗ್ಗೆ ಉದಾಹರಣೆಯನ್ನು ನೀಡಿದರು. ಭಾರತೀಯರು 75 ವರ್ಷದ ಪ್ರಜಾಪ್ರಭುತ್ವದಲ್ಲಿ  ಅಲ್ಲಲ್ಲಿ ಕೆಲವೊಂದು ಹೊಡೆದಾಟಗಳನ್ನು ಬಿಟ್ಟರೆ ಜನರು ತುಂಬ ಸಂತೋಷದ ವಾತಾವರಣದೊಂದಿಗೆ ಒಟ್ಟಾಗಿ ಜೀವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್: ಅಮೆರಿಕ ತಂಡದಲ್ಲಿ ಕನ್ನಡಿಗ ಕ್ರಿಕೆಟರ್‌ಗೆ ಸ್ಥಾನ

ದೇಶದ ಜನರು ವಿವಿಧ ಭಾಷೆಗಳು, ಉಡುಪುಗಳು ಹಾಗೂ ಆಹಾರವನ್ನು ಗೌರವಿಸುತ್ತಾರೆ. ಇಂತಹ ಭಾರತದಲ್ಲಿ ನಾನು ನಂಬಿಕೆ ಹೊಂದಿದ್ದೇನೆ. ಪ್ರತಿಯೊಬ್ಬರಿಗೂ ವಾಸಿಸಲು ಸ್ಥಳವಿದ್ದು, ಎಲ್ಲರೂ ರಾಜಿ ಮಾಡಿಕೊಂಡು ಬದುಕುತ್ತಾರೆ ಎಂದು ಸ್ಯಾಮ್‌ ಪಿತ್ರೋಡಾ ಹೇಳಿದರು.

“ಭಾರತವು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಭ್ರಾತೃತ್ವದೊಂದಿಗೆ ಬೇರೂರಿದೆ. ಆದರೆ ಈಗ ಸ್ವಾತಂತ್ರ್ಯವು ರಾಮ ನವಮಿ, ರಾಮ ದೇಗುಲದೊಂದಿಗೆ ಸವಾಲು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಮಯದಲ್ಲೂ ದೇಗುಲಕ್ಕೆ ತೆರಳುತ್ತಾರೆ. ಅವರು ಭಾರತದ ನಾಯಕರಂತೆ ಮಾತನಾಡದೆ, ಬಿಜೆಪಿಯವರಂತೆ ಮಾತನಾಡುತ್ತಾರೆ” ಎಂದು ಪಿತ್ರೋಡಾ ತಿಳಿಸಿದರು.

ಸ್ಯಾಮ್‌ ಪಿತ್ರೋಡಾ ಈ ಮೊದಲು ಪಿತ್ರಾರ್ಜಿತ ತೆರಿಗೆಯ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಬಿಜೆಪಿ ನಾಯಕರು ಪಿತ್ರೋಡಾ ಅವರ ಪಿತ್ರಾರ್ಜಿತ ತೆರಿಗೆಯ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ ಮೂವರ ಬಲಿ, 7 ಮನೆಗಳಿಗೆ ಬೆಂಕಿ

ದೀರ್ಘಕಾಲದಿಂದ ಜನಾಂಗೀಯ ಸಂಘರ್ಷಕ್ಕೆ ಈಡಾಗಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್‌ಪೋಕ್ಪಿ...

ದೆಹಲಿ ಪ್ರತಿಭಟನೆ | ವಶಕ್ಕೆ ಪಡೆದ ನೂರಾರು ಪ್ರತಿಭಟನಾಕಾರರನ್ನು ಸ್ಟೇಡಿಯಂಗೆ ದಬ್ಬಿದ ಪೊಲೀಸರು

ದೆಹಲಿಯ ವಿವಿಧ ಪ್ರದೇಶಗಳಿಂದ CJP ನೂರಾರು ಕಾರ್ಯಕರ್ತರು ಸೇರಿದಂತೆ ಹಲವು ನಾಗರಿಕರು...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ದೆಹಲಿಯಲ್ಲಿ ಮೂವರು ಮಾಜಿ ಸಿಎಂ – ಮಮತಾ, ಪಿಣರಾಯಿ, ಕೇಜ್ರಿವಾಲ್ – ಬಂಧನ

ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ...

ಅ.12ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಪ್ರತಿಭಟನೆ: ಕೆ.ಸಿ. ವೇಣುಗೋಪಾಲ್

ಜನರ ಮತದಾನದ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟವು ಸೋಮವಾರ ನವದೆಹಲಿಯಲ್ಲಿ...