ಬೆಂಗಳೂರು | ಅತಿ ಎತ್ತರದ ವೀಕ್ಷಣಾ ಗೋಪುರ; ವಿನ್ಯಾಸ ಚಿತ್ರಿಸಲು ಅಂದಾಜು ವೆಚ್ಚ ₹4.57 ಕೋಟಿ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 250ಮೀ ಎತ್ತರದ ಟವರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು,  ವಿವರವಾದ ಯೋಜನಾ ವರದಿ (ಡಿಪಿಆರ್) ರೂಪಿಸಲು ಸಲಹೆಗಾರರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯ್ಕೆ ಮಾಡಿದೆ.

ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ವೀವ್ ಡೆಕ್ ವಿಡಿಯೋವನ್ನು ವೀಕ್ಷಿಸಿದ ನಂತರ ಈ ಯೋಜನೆಯು ಮತ್ತಷ್ಟು ವೇಗವನ್ನು ಪಡೆದುಕೊಂಡಿದೆ. ಸ್ಕೈ ಡೆಕ್‌ಗಾಗಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಎನ್‌ಜಿಇಎಫ್ ಮತ್ತು ಯಶವಂತಪುರದ ಸೋಪ್ ಫ್ಯಾಕ್ಟರಿ ಎರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಿ ಬಿಬಿಎಂಪಿ ಅಧಿಕಾರಿಗಳು ಫೈನಲ್ ಮಾಡಿದ್ದರು.

ಈ ಪೈಕಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇರುವ ಎನ್‌ಜಿಇಎಫ್​ನ ಪ್ರದೇಶವನ್ನು ಬಹುತೇಕ ಅಂತಿಮ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಜಾಗಗಳನ್ನು ಪರಿಗಣಿಸಲಾಗುತ್ತದೆ. ಯೋಜನೆಗೆ ಅನುಕೂಲವಾಗುವಂತೆ ಬಿಬಿಎಂಪಿ ಡಿಪಿಆರ್‌ ಸಿದ್ಧಪಡಿಸಲು ₹3 ಕೋಟಿ ಮೀಸಲಿಟ್ಟಿದೆ.

Advertisements

ವೀಕ್ಷಣಾ ಗೋಪುರವು ಬೆಂಗಳೂರಿನ ವೈಮಾನಿಕ ನೋಟವನ್ನು ಒದಗಿಸುವ ಮೂಲಕ ಸಮಗ್ರ ಪ್ರವಾಸಿ ತಾಣವಾಗಲು ಸಜ್ಜಾಗಿದೆ. ಅದರ ಪ್ರಾಥಮಿಕ ಕಾರ್ಯವನ್ನು ಮೀರಿ, ವಾಹನ ನಿಲುಗಡೆ, ರೆಸ್ಟೋರೆಂಟ್‌ಗಳು, ಥಿಯೇಟರ್ ಮತ್ತು ಸ್ಕೈ ಗಾರ್ಡನ್‌ನಂತಹ ಸೌಕರ್ಯಗಳನ್ನು ಹೊಂದಿರುತ್ತದೆ. ಮೇಲಿನ ವಿಭಾಗವು ರೋಲರ್-ಕೋಸ್ಟರ್ ಸ್ಟೇಷನ್, ಎಕ್ಸಿಬಿಷನ್ ಹಾಲ್, ಸ್ಕೈ ಲಾಬಿ, ಬಾರ್ ಮತ್ತು ವಿಐಪಿಗಳಿಗಾಗಿ ವಿಶೇಷ ಸ್ಥಳ ಒಳಗೊಂಡಿರುತ್ತದೆ.

ಚೀನಾದ ಶಾಂಘೈನಲ್ಲಿನ ‘ಶಾಂಘೈ ಟವರ್‌’ ಯೋಜನೆಯನ್ನು ಪ್ರೇರಣೆಯಾಗಿಟ್ಟುಕೊಂಡು ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್‌ (ಎಲ್) ಎಯು ಸಂಸ್ಥೆಯು ವಿಶ್ವ ವಿನ್ಯಾಸ ಸಂಸ್ಥೆ ಸಹಯೋಗದಲ್ಲಿ ಸ್ಕೈಡೆಕ್‌ (ವೀಕ್ಷಣಾ ಗೋಪುರ) ನಿರ್ಮಿಸಲು ವಿನ್ಯಾಸ ಸಿದ್ಧಪಡಿಸಿದೆ.

10 ಎಕರೆ ಜಾಗದಲ್ಲಿ 360 ಮೀಟರ್‌ ಎತ್ತರದ ವೀಕ್ಷಣಾ ಗೋಪುರ ನಿರ್ಮಾಣ ಮಾಡಲು ಸಿದ್ಧತೆಗಳು ನಡೆದಿವೆ. ಯೋಜನೆ ಕಾರ್ಯಗತವಾದರೆ ನಾಗರಿಕರು ಆಕಾಶದಿಂದ ಕಾಣುವ ಬೆಂಗಳೂರಿನ ಸೌಂದರ್ಯವನ್ನು ಸವಿಯಬಹುದು. ಸ್ಕೈ ಡೆಕ್ ಯೋಜನೆಯು ಆಲದ ಮರದ ರಚನೆಯಲ್ಲಿರಲಿದ್ದು, 250 ಮೀಟರ್ ಎತ್ತರವಿರಲಿದೆ. ರೆಂಬೆ ಕೊಂಬೆಗಳು, ನೇತಾಡುವ ಬೇರುಗಳು ಮತ್ತು ಹೂವುಗಳನ್ನು ಹೊಂದಿರುವ ಆಲದ ಮರದ ರಚನೆಯಿಂದ ಸ್ಫೂರ್ತಿ ಪಡೆದಿದೆ. ಇಲ್ಲಿ ಹಲವಾರು ಬಗೆಯ ಮನರಂಜನಾ ಚಟುವಟಿಕೆಗಳು ಇರಲಿವೆ. ಫನ್ ಸೌಲಭ್ಯಗಳು, ಶಾಪಿಂಗ್ ಪ್ರದೇಶ, ರೆಸ್ಟೋರೆಂಟ್‌ಗಳು, ಥಿಯೇಟರ್ ಮತ್ತು ಸ್ಕೈ ಗಾರ್ಡನ್ ಕೂಡಾ ಇರಲಿದೆ.

ಶಾಂಘೈ ಟವರ್‌ 600 ಮೀಟರ್‌ ಎತ್ತರದಲ್ಲಿದ್ದು, ಬೆಂಗಳೂರಿನ ಗೋಪುರ ಅಷ್ಟು ಎತ್ತರದಲ್ಲಿ ನಿರ್ಮಾಣವಾಗದಿದ್ದರೂ ದೇಶದ  ಅತಿ ಎತ್ತರದ ವೀಕ್ಷಣಾ ಗೋಪುರವಾಗಲಿದೆ. ಗೋಪುರ ನಿರ್ಮಾಣಕ್ಕೆ ತಗಲುವ ವೆಚ್ಚ, ಅಗತ್ಯ ಸೌಲಭ್ಯಗಳ ನಿರ್ಮಾಣ  ಕುರಿತು ಸರ್ಕಾರ ಕಾರ್ಯ ಯೋಜನೆ ರೂಪಿಸುತ್ತಿದೆ.

ಆದಾಗ್ಯೂ, ‘ಕೆಲಸದ ಸಂಕೀರ್ಣತೆ’ಯನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ, ವಿನ್ಯಾಸ ರಚನೆಗಾಗಿ ಮೂಲ ಅಂದಾಜು ₹2.62 ಕೋಟಿಗೆ ಬದಲಾಗಿ ₹4.57 ಕೋಟಿ ಖರ್ಚು ಮಾಡಲು ಉದ್ದೇಶಿಸಿದೆ.

ಆಸ್ಟ್ರಿಯಾ-ಪ್ರಧಾನ ಕಚೇರಿಯ ಆರ್ಕಿಟೆಕ್ಚರ್ ಸಂಸ್ಥೆ ಕೂಪ್ ಹಿಮ್ಮೆಲ್ಬ್(ಎಲ್) ಜೊತೆ ಒಪ್ಪಂದ ಮಾಡಿಕೊಂಡಿರುವ ಬೆಂಗಳೂರು ಮೂಲದ ಡಿಸೈನ್ಟ್ರೀ ಸರ್ವಿಸ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್, ಯೋಜನೆಯ ವಿನ್ಯಾಸದ ಗುತ್ತಿಗೆಯನ್ನು ಪಡೆದುಕೊಂಡಿದೆ.

ಹೊಸ ಪ್ರವಾಸಿ ಆಕರ್ಷಣೆಯಾಗಿ ವಿನ್ಯಾಸಗೊಳಿಸಲಾದ 250 ಮೀಟರ್ ಟವರ್‌ಗೆ ಆರಂಭದಲ್ಲಿ ₹100 ಕೋಟಿ ವೆಚ್ಚ ಎಂದು ಅಂದಾಜಿಸಲಾಗಿತ್ತು, ಬಿಬಿಎಂಪಿ ಕೇವಲ ವಿನ್ಯಾಸಕ್ಕಾಗಿ ₹2.62 ಕೋಟಿ ವೆಚ್ಚವಾಗಲಿದೆ ಎಂದಿದೆ. ಈಗ ಈ ಯೋಜನೆಯು 350 ಕೋಟಿ ವೆಚ್ಚದಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವರ್ಷದಿಂದ ವರ್ಷಕ್ಕೆ 23.7% ಬಾಡಿಗೆ ಏರಿಕೆ : ದೇಶದಲ್ಲಿ ಮೂರನೇ ಸ್ಥಾನ

“ಇದು ಒಂದು ತೀವ್ರವಾದ ಎಂಜಿನಿಯರಿಂಗ್ ಪ್ರಯತ್ನವಾಗಿದೆ. ಗೋಪುರವು ವಿಶಿಷ್ಟವಾದ ಮತ್ತು ಸಂಕೀರ್ಣವಾದ ವಾಸ್ತುಶಿಲ್ಪದ ವಿನ್ಯಾಸವನ್ನು ಹೊಂದಿದೆ. ಇದು ವ್ಯಾಪಕವಾದ ಮಣ್ಣಿನ ಪರಿಶೋಧನೆ ಮತ್ತು ಪರೀಕ್ಷೆಯ ಅಗತ್ಯವಿರುತ್ತದೆ. ಸಂಕೀರ್ಣವಾದ ಮುಂಭಾಗದ ಕೆಲಸದ ಅಗತ್ಯವಿರುತ್ತದೆ. ಹೆಚ್ಚುವರಿಯಾಗಿ, 250 ಮೀಟರ್‌ಗಳ ರಚನೆಯ ಗಮನಾರ್ಹ ಎತ್ತರದಿಂದಾಗಿ ಹೆಚ್ಚಿನ ಎಲಿವೇಟರ್ ಅನ್ನು ಸ್ಥಾಪಿಸುವುದು ಸವಾಲಾಗಿದೆ” ಎಂದು ಸಲಹೆಗಾರರು ಬಿಡ್ ಮೊತ್ತವನ್ನು ಕಡಿಮೆ ಮಾಡಲು ಮಾತುಕತೆಯ ಸಮಯದಲ್ಲಿ ಹೇಳಿದರು.

ಸದ್ಯ ಜಗತ್ತಿನಲ್ಲಿ ದುಬೈನ ಬುರ್ಜ್ ಖಲೀಫಾ (828 ಮೀಟರ್)‌, ಶಾಂಘೈನ ಶಾಂಘೈ ಟವರ್ (632 ಮೀಟರ್)‌, ಚೀನಾದ ಶೆಂಜೆನ್‌ನ ಪಿಂಗ್‌ ಆನ್‌ ಫೈನಾನ್ಸ್‌ ಸೆಂಟರ್‌ (599 ಮೀಟರ್)‌, ಚೀನಾದ ಗುಂವಾಂಗ್ಶುವಿನ ಕ್ಯಾಂಟನ್‌ ಟವರ್‌ (597 ಮೀಟರ್)‌, ದಕ್ಷಿಣ ಕೊರಿಯಾದ ಲಾಟ್ಟೆ ವರ್ಲ್ಡ್‌ ಟವರ್‌ (555 ಮೀಟರ್)‌ ವಿಶ್ವದ ಎತ್ತರದ ವೀಕ್ಷಣಾ ಗೋಪುರಗಳಾಗಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

Download Eedina App Android / iOS

X