ಕೆ ಎಲ್ ರಾಹುಲ್ ನಾಯಕನ ಹುದ್ದೆ ತೊರೆಯುವ ಸಾಧ್ಯತೆ: ಮುಂದಿನ ವರ್ಷ ತಂಡಕ್ಕೆ ಸೇರ್ಪಡೆ ಅಸಂಭವ

Date:

Advertisements

ಸನ್ ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2024ರ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಹೀನಾಯವಾಗಿ ಸೋತ ನಂತರ ತಂಡದ ನಾಯಕ ಕೆ ಎಲ್‌ ರಾಹುಲ್ ನಾಯಕತ್ವ ಸ್ಥಾನವನ್ನು ತೊರೆಯುವ ಸಾಧ್ಯತೆಯಿದೆ.

ಲಖನೌ ಸೋತ ನಂತರ ತಂಡದ ಮಾಲೀಕ ಸಂಜೀವ್‌ ಗೋಯಂಕಾ ರಾಹುಲ್‌ ಅವರೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಎಸ್‌ಆರ್‌ಹೆಚ್‌ ವಿರುದ್ಧ ಲಖನೌ ಪರಾಭವಗೊಂಡ ನಂತರ ತಂಡದ ಪ್ಲೇಆಫ್‌ ಹಾದಿ ದುರ್ಗಮವಾಗಿದೆ. 2022ರ ಹರಾಜಿನಲ್ಲಿ ಲಖನೌ ತಂಡ ಕೆ ಎಲ್‌ ರಾಹುಲ್‌ ಅವರನ್ನು ದಾಖಲೆಯ 17 ಕೋಟಿ ರೂ. ನೀಡಿ ಕೊಂಡುಕೊಂಡಿತ್ತು.

ಸಂಜೀವ್‌ ಗೋಯಂಕಾ ಈ ಮೊದಲು ಪುಣೆ ಸೂಪರ್‌ಜೈಂಟ್ಸ್‌ ತಂಡದ ಮಾಲೀಕರಾಗಿದ್ದರು. ಆಗ ಪುಣೆ ತಂಡದಲ್ಲಿ ಎಂ ಎಸ್‌ ಧೋನಿ ನಾಯಕರಾಗಿದ್ದರು. ಧೋನಿಯನ್ನು ಕೂಡ ಕಳಪೆ ಪ್ರದರ್ಶನದಿಂದಾಗಿ ನಾಯಕತ್ವದಿಂದ ಕೈಬಿಟ್ಟು ಸ್ಟೀವ್‌ ಸ್ಮಿತ್‌ ಅವರನ್ನು ನೇಮಕ ಮಾಡಿಕೊಂಡಿದ್ದರು. ಪುಣೆ ತಂಡವನ್ನು ಕೈಬಿಟ್ಟ ನಂತರ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಮಾಲೀಕರಾಗಿದ್ದರು. ಕಳಪೆಯಾಟವಾಡಿದರೆ ನಾಯಕತ್ವವನ್ನು ಬದಲಿಸುವುದು ಸಾಮಾನ್ಯವಾಗಿದೆ ಎಂಬುದು ಈ ನಿದರ್ಶನಗಳಿಂದ ತಿಳಿಯುತ್ತದೆ.

Advertisements

ಒಂದು ವೇಳೆ ಕೆ ಎಲ್‌ ರಾಹುಲ್‌ ನಾಯಕತ್ವದಿಂದ ನಿರ್ಗಮಿಸಿದರೆ, ಉಪನಾಯಕನಾಗಿರುವ ನಿಕಲಸ್‌ ಪೂರನ್‌ ಮುಂದಿನ ಎರಡು ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ದೃಶ್ಯದಲ್ಲಿ ವಿಐಪಿ ಗ್ಯಾಲರಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಮಾಲೀಕರಾದ ಸಂಜೀವ್‌ ಗೋಯಂಕಾ ಅವರೊಂದಿಗೆ ಆಕ್ರೋಶಭರಿತವಾಗಿ ಮಾತನಾಡುತ್ತಿದ್ದರು. ಮಾಲೀಕರ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ರಾಹುಲ್ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಗೋಯಂಕಾ ಮಾತು ಮುಂದುವರೆಸುತ್ತಿದ್ದರು. ದೃಶ್ಯ ಮಾತ್ರ ಕಾಣಿಸುತ್ತಿದ್ದರಿಂದ ಏನು ಮಾತನಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿರಲಿಲ್ಲ.

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ತಂಡ 10 ವಿಕೆಟ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು. ಎಲ್‌ಎಸ್‌ಜಿ ತಂಡ ನೀಡಿದ 165 ರನ್‌ಗಳ ಸವಾಲನ್ನು ಬೆನ್ನಟ್ಟಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಕೇವಲ 9.4 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿತು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್‌ ಶರ್ಮಾ ಅವರ ಭರ್ಜರಿ ಆಟದಿಂದ ಎಲ್‌ಎಸ್‌ಜಿ ಸುಲಭವಾಗಿ ಗುರಿಯನ್ನು ಸಾಧಿಸಿತು. ಇಷ್ಟು ಕಡಿಮೆ ಓವರ್‌ಗಳಲ್ಲಿ ಗೆಲುವು ಸಾಧಿಸಿದ್ದು, ಟಿ20 ಮಾದರಿಯಲ್ಲಿ ದಾಖಲೆಯಾಗಿ ಪರಿಣಮಿಸಿದೆ.

ಟ್ರಾವಿಸ್‌ ಹೆಡ್‌ ಕೇವಲ 30 ಚೆಂಡುಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ಗಳೊಂದಿಗೆ 89 ರನ್‌ ಬಾರಿಸಿದರೆ, ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 6 ಸಿಕ್ಸರ್‌, 8 ಬೌಂಡರಿಯೊಂದಿಗೆ 75 ರನ್‌ ಸಿಡಿಸಿದರು.

ಈ ಸೋಲಿನೊಂದಿಗೆ ಎಲ್‌ಎಸ್‌ಜಿ ತಂಡ ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ. ನೆಟ್‌ ರನ್‌ರೇಟ್‌ ಕಡಿಮೆಯಿರುವ ಕಾರಣ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಪ್ಲೇಆಫ್‌ ಸುತ್ತಿಗೆ ಪ್ರವೇಶಿಸುವುದು ಕಷ್ಟವಾಗಿದೆ. ಕೆಕೆಆರ್‌ ಹಾಗೂ ರಾಜಸ್ಥಾನ್‌ 11 ಪಂದ್ಯಗಳನ್ನು ಆಡಿ 8 ಗೆಲುವಿನೊಂದಿಗೆ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಹೈದರಾಬಾದ್‌ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳಿಗೆ ಪ್ಲೇಆಫ್‌ ಹಾದಿ ಸುಲಭ ಸಾಧ್ಯತೆಯಿದೆ.

ತಲಾ 12 ಅಂಕ ಗಳಿಸಿರುವ ಲಖನೌ, ಚೆನ್ನೈ, ದೆಹಲಿ ಪ್ಲೇಆಫ್‌ ಹಾದಿಗೆ ಪೈಪೋಟಿ ನಡೆಸಬೇಕಿದೆ. ಎಲ್ಲ ತಂಡಗಳ ಲೀಗ್‌ ಹಂತದ ಪಂದ್ಯಗಳು ಇನ್ನು ಮುಗಿಯದ ಕಾರಣ ಮೊದಲ ನಾಲ್ಕು ಸ್ಥಾನ ಗಳಿಸಲು ಪ್ರತಿ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X