ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ಮೇ 10ರಂದು ಪ್ರಾರಂಭವಾಗಿದ್ದು ಪ್ರಸ್ತುತ ಯಾತ್ರಿಕರ ಪ್ರಮಾಣವು ದುಪ್ಪಟ್ಟಾಗಿದೆ. ಮೊದಲ ಐದು ದಿನಗಳಲ್ಲಿ 11 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ವರದಿ ಮಾಡಿದೆ.
ಯಾವುದೇ ವೈದ್ಯಕೀಯ ಸ್ಥಿತಿಯ, ತೊಂದರೆಯ ಬಗ್ಗೆ ಪಾರದರ್ಶಕವಾಗಿ ಬಹಿರಂಗಪಡಿಸುವಂತೆ ಯಾತ್ರಾರ್ಥಿಗಳ ಬಳಿ ಗರ್ವಾಲ್ ಕಮಿಷನರ್ ವಿನಯ್ ಶಂಕರ್ ಪಾಂಡೆ ವಿನಂತಿಸಿದ್ದಾರೆ. ಸಮಗ್ರ ಆರೋಗ್ಯ ತಪಾಸಣೆ ಕ್ರಮಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದ ಅಮರನಾಥ ಯಾತ್ರಾರ್ಥಿಗಳು ಸುರಕ್ಷಿತ: ಮುಖ್ಯಮಂತ್ರಿ ಸಿದ್ದರಾಮಯ್ಯ
“ಎಲ್ಲಾ ಭಕ್ತರ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಹಾಗೆಯೇ ಭಕ್ತರ ವೈದ್ಯಕೀಯ ಇತಿಹಾಸವನ್ನು ವಿವರಿಸಲು ಫಾರ್ಮ್ಗಳನ್ನು ಒದಗಿಸಲಾಗುತ್ತಿದೆ” ಎಂದು ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.
“ಭಕ್ತರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿದೆ. ನಾಲ್ಕು ಧಾಮಗಳು ಅಧಿಕ ಎತ್ತರದಲ್ಲಿದೆ. ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವುದು ಸವಾಲಾಗಿರುತ್ತದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಮಪಾತ | ಕೇದಾರನಾಥ ಯಾತ್ರೆ ಸ್ಥಗಿತ; ಆರೆಂಜ್ ಅಲರ್ಟ್
“ಇಲ್ಲಿಯವರೆಗೆ, ವಿವಿಧ ಸ್ಥಳಗಳಲ್ಲಿ 11 ವ್ಯಕ್ತಿಗಳ ನಿಧನವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಹೆಚ್ಚಾಗಿ ಉಸಿರಾಟ ಅಥವಾ ಇತರ ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿರುವ ವೃದ್ಧರು ಸಾವನ್ನಪ್ಪಿದ್ದಾರೆ” ಎಂದು ಮಾಹಿತಿ ನೀಡಿದರು.
In view of the huge crowd of pilgrims in the Char Dham Yatra, Uttarakhand Chief Secretary Radha Raturi has extended the ban on VIP darshan till May 31, so that all the devotees can easily visit the four Dhams. pic.twitter.com/u2GX19Ap8n
— ANI (@ANI) May 17, 2024
ಚಾರ್ ಧಾಮ್ ಯಾತ್ರೆಯಲ್ಲಿ ಯಾತ್ರಾರ್ಥಿಗಳ ಸಂಖ್ಯೆಯು ಭಾರೀ ಪ್ರಮಾಣದಲ್ಲಿ ಅಧಿಕವಾದ ಕಾರಣದಿಂದಾಗಿ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರತುರಿ ಅವರು ವಿಐಪಿ ದರ್ಶನದ ಮೇಲಿನ ನಿಷೇಧವನ್ನು ಮೇ 31ರವರೆಗೆ ವಿಸ್ತರಿಸಿದ್ದಾರೆ.
ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥ ಧಾಮಕ್ಕೆ ಮೇ 10ರಂದು ತೀರ್ಥಯಾತ್ರೆ ಪ್ರಾರಂಭವಾಗಿದೆ. ಮೇ 12ರಂದು ಬದರಿನಾಥ ಧಾಮದ ಬಾಗಿಲು ತೆರೆದಿದೆ. ಈಗಾಗಲೇ 1.55 ಲಕ್ಷ ಯಾತ್ರಿಕರು ಕೇದಾರನಾಥಕ್ಕೆ, 70,000 ಕ್ಕೂ ಹೆಚ್ಚು ಯಮುನೋತ್ರಿಗೆ ಮತ್ತು 63,000 ಕ್ಕೂ ಹೆಚ್ಚು ಯಾತ್ರಿಕರು ಗಂಗೋತ್ರಿಗೆ ಪ್ರಯಾಣಿಸಿದ್ದಾರೆ. ಕೇವಲ ಮೂರು ದಿನಗಳಲ್ಲಿ, ಬದರಿನಾಥ ಧಾಮ್ 45,000 ಯಾತ್ರಿಕರು ಆಗಮಿಸಿದ್ದಾರೆ.