ಎವರೆಸ್ಟ್, ಎಂಡಿಹೆಚ್ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದ ನೇಪಾಳ

Date:

ಸಿಂಗಾಪುರ ಹಾಗೂ ಹಾಂಕಾಂಗ್‌ ನಂತರ ನೇಪಾಳ ಕೂಡ ಎವರೆಸ್ಟ್ ಹಾಗೂ ಎಂಡಿಹೆಚ್ ಮಸಾಲೆ ಪದಾರ್ಥಗಳನ್ನು ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿರುವ ವರದಿಗಳ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನಿಷೇಧವೇರಿದೆ.

ಕ್ಯಾನ್ಸರ್ ಉಂಟುಮಾಡುವ ಎತಿಲೇನ್‌ ಆಕ್ಸೈಡ್‌ ಅಂಶ ಪತ್ತೆಯಾಗಿರುವ ಕಾರಣದಿಂದ ಭಾರತದ ಎರಡು ಮಸಾಲೆ ಪದಾರ್ಥಗಳಾದ ಎವರೆಸ್ಟ್ ಹಾಗೂ ಎಂಡಿಹೆಚ್‌ ಉತ್ಪನ್ನಗಳನ್ನು ನೇಪಾಳದ ಆಹಾರ ತಂತ್ರಜ್ಞಾನ ಹಾಗೂ ಗುಣಮಟ್ಟ ನಿಯಂತ್ರಣ ಮಂಡಳಿ ಪರೀಕ್ಷೆಗೊಳಪಡಿಸಲು ಆರಂಭಿಸಿದೆ.

“ಎವರೆಸ್ಟ್ ಹಾಗೂ ಎಂಡಿಹೆಚ್‌ ಬ್ರಾಂಡ್‌ನ ಮಸಾಲೆ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದ್ದೇವೆ. ನಾವು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಕೂಡ ನಿಷೇಧಿಸಿದ್ದೇವೆ. ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಕ ಪತ್ತೆಯಾದ ವರದಿಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ನೇಪಾಳ ಆಹಾರ ತಂತ್ರಜ್ಞಾನ ಇಲಾಖೆಯ ವಕ್ತಾರರಾದ ಕೃಷ್ಣ ಮಹಾರಾಜನ್ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

“ಇವೆರೆಡು ನಿರ್ದಿಷ್ಟ ಉತ್ಪನಗಳಲ್ಲಿ ರಾಸಾಯನಿಕವಿರುವ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ. ನಿಷೇಧವು ಅಂತಿಮ ವರದಿ ಬರುವವರೆಗೂ ಜಾರಿಯಲ್ಲಿರುತ್ತದೆ” ಎಂದು ಮಹಾರಾಜನ್‌ ತಿಳಿಸಿದ್ದಾರೆ.

ಎಂಡಿಹೆಚ್‌ ಹಾಗೂ ಎವರೆಸ್ಟ್ ಪದಾರ್ಥಗಳನ್ನು ನ್ಯೂಜಿಲೆಂಡ್, ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿಯೂ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ಮಧ್ಯ ಪೂರ್ವ ದೇಶಗಳು ಸೇರಿ ಹಲವು ದೇಶಗಳಿಗೆ ಭಾರತ ಮೂಲದ ಎಂಡಿಹೆಚ್‌ ಹಾಗೂ ಎವರೆಸ್ಟ್ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಹಾಂಕಾಂಗ್‌ ಹಾಗೂ ಸಿಂಗಾಪುರ ದೇಶಗಳು ಈ ಉತ್ಪನ್ನಗಳನ್ನು ನಿಷೇಧಿಸಿದ್ದವು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

18ನೇ ಲೋಕಸಭೆ | ಸಂಸದರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕದ ಕೇಂದ್ರ ಸಚಿವರು

ಕೇಂದ್ರ ಸಚಿವರಾಗಿ ನೇಮಕಗೊಂಡಿರುವ ರಾಜ್ಯದ ಸಂಸದರಾದ ಹೆಚ್.ಡಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ,...

ರಷ್ಯಾ | ಗುಂಡಿನ ದಾಳಿ; ಪೊಲೀಸರು, ನಾಗರಿಕರು ಸೇರಿ 15ಕ್ಕೂ ಹೆಚ್ಚು ಮಂದಿ ಹತ್ಯೆ

ರಷ್ಯಾದ ದಕ್ಷಿಣ ರಾಜ್ಯವಾದ ಡಾಗೆಸ್ತಾನ್‌ನಲ್ಲಿ ಭಾನುವಾರ ಶಸ್ತ್ರಸಜ್ಜಿತ ಉಗ್ರಗಾಮಿಗಳ ದಾಳಿಯಿಂದಾಗಿ 15ಕ್ಕೂ...

ರಕ್ತದೊತ್ತಡ, ಸಕ್ಕರೆ ಪ್ರಮಾಣ ಇಳಿಕೆ; ಆದರೆ ಅನಿರ್ದಿಷ್ಟಾವಧಿ ಉಪವಾಸ ಮುಂದುವರಿಸುತ್ತೇನೆ: ಅತಿಶಿ

ರಕ್ತದೊತ್ತಡ, ಸಕ್ಕರೆ ಪ್ರಮಾಣ ಇಳಿಕೆಯಾಗುತ್ತಿದೆ, ಆದರೆ ದೆಹಲಿಯ 28 ಲಕ್ಷ ಜನರಿಗೆ...

ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ: ವಿಪಕ್ಷಗಳ ವಿರೋಧ

ವಿಪಕ್ಷಗಳ ತೀವ್ರ ವಿರೋಧದ ನಡುವೆ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್‌ ಅವರು...