ಬೆಂಗಳೂರು ಮೂಲದ ಹೋಟೆಲ್ ರಾಮೇಶ್ವರಂ ಕೆಫೆ ಹೈದರಾಬಾದ್‌ನ ಮೇದಾಪುರ್ ಶಾಖೆಯ ಮೇಲೆ ಆಹಾರ ಗುಣಮಟ್ಟ ಇಲಾಖೆ ದಾಳಿ ನಡೆಸಿದ್ದು, ಅವಧಿ ಮೀರಿದ ಆಹಾರ ಪದಾರ್ಥಗಳು, ಯಾವುದೇ ಕಂಪನಿಯ ಗುರುತು ಇಲ್ಲದ ಆಹಾರ ಪಾದಾರ್ಥಗಳು ಕಂಡುಬಂದಿವೆ.
ಆಹಾರ ಗುಣಮಟ್ಟ ಇಲಾಖೆಯು ನಡೆಸಿದ ದಾಳಿಯಲ್ಲಿ ಅವಧಿ ಮೀರಿದ 100 ಕೆಜಿ ಉದ್ದಿನ ಬೇಳೆ, 10 ಕೆ ಜಿ ಮೊಸರು ಹಾಗೂ 8 ಲೀಟರ್ ಹಾಲು ಪತ್ತೆಯಾಗಿದೆ. ದಾಳಿಯ ಸಂದರ್ಭದಲ್ಲಿ 450 ಕೆಜಿ ಯಾವುದೇ ಕಂಪನಿಯ ಲೇಬಲ್ ಹೊಂದಿರದ ಕಚ್ಚಾ ಅಕ್ಕಿ, 20 ಕೆಜಿ ಅಲಸಂದೆ ಕಾಳು ಹಾಗೂ 300 ಕೆಜಿ ಬೆಲ್ಲವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ದಾಳಿ ನಡೆಸುವ ಸಂದರ್ಭದಲ್ಲಿ ರಾಮೇಶ್ವರ ಕಫೆಯಲ್ಲಿ ಆಹಾರ ನಿರ್ವಹಣೆಗಾಗಿ ವೈದ್ಯಕೀಯ ದೇಢೀಕರಣ ಪ್ರಮಾಣಪತ್ರ ಕೂಡ ಸಲ್ಲಿಸಲಾಗಿಲ್ಲ. ಕಸದ ಡಬ್ಬಿಯನ್ನು ಕೂಡ ಸರಿಯಾಗಿ ಮುಚ್ಚಿರಲಾಗಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರವೇ ಬರಲಿ, ನೆರೆಯೇ ಇರಲಿ, ಭರವಸೆಗಳಿಗೆ ಬರವಿಲ್ಲ
ಆಹಾರ ಗುಣಮಟ್ಟ ಇಲಾಖೆಯ ಅಧಿಕಾರಿಗಳು ಇಂದು ಹೈದರಾಬಾದ್‌ನ ಹಲವು ಕಡೆಗಳಲ್ಲಿರುವ ಹೋಟಲ್‌ಗಳ ಮೇಲೆ ದಾಳಿ ನಡೆಸಿದ್ದು, ಬಹುತೇಕ ಹೆಸರುವಾಸಿಯಾದ ಹೋಟಲ್‌ಗಳಲ್ಲಿ ಸ್ವಚ್ಛತೆ ಗುಣಮಟ್ಟವನ್ನು ಕಾಯ್ದುಕೊಂಡಿರಲಿಲ್ಲ. ಸ್ವಚ್ಛತೆ ಕಾಯ್ದುಕೊಳ್ಳದ ಹೋಟಲ್‌ಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಈ ವರ್ಷದ ಜನವರಿಯಲ್ಲಿ ಹೈದರಾಬಾದ್‌ನ ಮೇದಾಪುರ ಪ್ರದೇಶದಲ್ಲಿ ತನ್ನ ಶಾಖೆಯನ್ನು ಆರಂಭಿಸಿತ್ತು.
ಇತ್ತೀಚಿಗೆ ಮಾರ್ಚ್ 1 ರಂದು ಬೆಂಗಳೂರಿನ ಕುಂದಲಹಳ್ಳಿ ಶಾಖೆಯ ರಾಮೇಶ್ವರಂ ಕಫೆಯಲ್ಲಿ ಬಾಂಬ್ ಸ್ಫೋಟವುಂಟಾಗಿ 10 ಮಂದಿ ಗಾಯಗೊಂಡಿದ್ದರು. ಘಟನೆಗೆ ಕಾರಣರಾದವರನ್ನು ಎನ್‌ಐಎ ಬಂಧಿಸಿತ್ತು.
