ಲೋಕಸಭೆ ಚುನಾವಣೆಯ ಆರನೇ ಹಂತವು ಶ್ರೀಮಂತಿಕೆಯ ಕದನಕ್ಕೆ ಸಾಕ್ಷಿಯಾಗಲಿದ್ದು ಶೇ.39ರಷ್ಟು ಅಭ್ಯರ್ಥಿಗಳು ಕೋಟ್ಯಾಧಿಪತಿಗಳಲ್ಲಿ ಬಿಜೆಪಿಯ ನವೀನ್ ಜಿಂದಾಲ್ ಟಾಪ್‌ನಲ್ಲಿದ್ದಾರೆ.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ, 866 ಅಭ್ಯರ್ಥಿಗಳಲ್ಲಿ 338 (ಶೇ. 39) ಕೋಟ್ಯಾಧಿಪತಿಗಳಾಗಿದ್ದು, ಸರಾಸರಿ ಆಸ್ತಿ ಮೌಲ್ಯ 6.21 ಕೋಟಿ ರೂಪಾಯಿ ಆಗಿದೆ. ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನ ಇಂದು ನಡೆಯುತ್ತಿದೆ.
ಬಿಹಾರ ಮತ್ತು ಬಂಗಾಳದಲ್ಲಿ ತಲಾ ಎಂಟು, ದೆಹಲಿಯಲ್ಲಿ ಏಳು, ಹರಿಯಾಣದಲ್ಲಿ 10, ಜಾರ್ಖಂಡ್‌ನಲ್ಲಿ 4, ಉತ್ತರ ಪ್ರದೇಶದಲ್ಲಿ 14 ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿಯಲ್ಲಿ ಮತದಾನ ನಡೆಯುತ್ತಿದೆ. ಒಡಿಶಾದಲ್ಲಿ 42 ವಿಧಾನಸಭಾ ಕ್ಷೇತ್ರಗಳು ಮತ್ತು ಆರು ಲೋಕಸಭಾ ಸ್ಥಾನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| 58 ಕ್ಷೇತ್ರಗಳಲ್ಲಿ ಆರನೇ ಹಂತದ ಮತದಾನ ಆರಂಭ: ಕನ್ಹಯ್ಯ, ಸಂಬಿತ್ ಪಾತ್ರ ಕಣದಲ್ಲಿ
ಅಭ್ಯರ್ಥಿಗಳಲ್ಲಿ ಸಂಪತ್ತಿನ ಪಾಲು
ಶೇಕಡ 14ರಷ್ಟು ಅಭ್ಯರ್ಥಿಗಳು 5 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ ಮತ್ತು 13% ರಷ್ಟು ಅಭ್ಯರ್ಥಿಗಳು 2-5 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಶೇಕಡ 22ರಷ್ಟು ಅಭ್ಯರ್ಥಿಗಳು 50 ಲಕ್ಷದಿಂದ 5 ಕೋಟಿ ರೂಪಾಯಿಯಷ್ಟು ಆಸ್ತಿ ಹೊಂದಿದ್ದಾರೆ. ಶೇಕಡ 25ರಷ್ಟು ಅಭ್ಯರ್ಥಿಗಳಲ್ಲಿ 10 ಲಕ್ಷದಿಂದ 50 ಲಕ್ಷ ರೂಪಾಯಿ ನಡುವೆ ಆಸ್ತಿ ಹೊಂದಿದ್ದಾರೆ ಮತ್ತು ಶೇಕಡ 26ರಷ್ಟು ಜನರು 10 ಲಕ್ಷಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ.
ರಾಜ್ಯವಾರು ಕೋಟ್ಯಾಧಿಪತಿ ಅಭ್ಯರ್ಥಿಗಳು
ಪ್ರತಿ ರಾಜ್ಯದಲ್ಲಿ ಕೋಟ್ಯಾಧಿಪತಿ ಅಭ್ಯರ್ಥಿಗಳ ಸಂಖ್ಯೆಯನ್ನು ಪರಿಶೀಲಿಸಿದಾಗ, ಹರಿಯಾಣ ಒಟ್ಟು 223 ಅಭ್ಯರ್ಥಿಗಳಲ್ಲಿ 102 ಕೋಟ್ಯಾಧಿಪತಿಗಳನ್ನು ಹೊಂದಿದ್ದು, ರಾಜ್ಯವಾರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ದೆಹಲಿಯು 162 ಅಭ್ಯರ್ಥಿಗಳ ಪೈಕಿ 68 ಕೋಟ್ಯಾಧಿಪತಿಳನ್ನು ಹೊಂದಿದೆ. ಉತ್ತರ ಪ್ರದೇಶವು 162 ಅಭ್ಯರ್ಥಿಗಳಲ್ಲಿ 59 ಕೋಟ್ಯಾಧಿಪತಿಗಳನ್ನು ಹೊಂದಿರುವ ಮೂಲಕ ಮೂರನೇ ಸ್ಥಾನದಲ್ಲಿದೆ. ಬಿಹಾರ (35), ಜಾರ್ಖಂಡ್ (25), ಒಡಿಶಾ (28), ಮತ್ತು ಪಶ್ಚಿಮ ಬಂಗಾಳ (21) ನಂತರದ ಸ್ಥಾನಗಳಲ್ಲಿದೆ.
ಇದನ್ನು ಓದಿದ್ದೀರಾ? ಶ್ರೀಮಂತ ಪಕ್ಷ ಬಿಜೆಪಿ 60,000 ಕೋಟಿ ರೂ. ಖರ್ಚಿನ ಬಗ್ಗೆ ಉತ್ತರಿಸಲೇಬೇಕಿದೆ
ಪಕ್ಷಾವಾರು ಕೋಟ್ಯಾಧಿಪತಿ ಅಭ್ಯರ್ಥಿಗಳು
ಪಕ್ಷವಾರು ಡೇಟಾವನ್ನು ವಿಶ್ಲೇಷಿಸಿದರೆ, ಸ್ವತಂತ್ರ ಅಭ್ಯರ್ಥಿಗಳು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 325 ಅಭ್ಯರ್ಥಿಗಳಲ್ಲಿ 86 ಅಭ್ಯರ್ಥಿಗಳು ಕೋಟ್ಯಾಧಿಪತಿ ಸ್ಥಾನಮಾನವನ್ನು ಗಳಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಬಿಜೆಪಿಯಿದ್ದು 51 ಅಭ್ಯರ್ಥಿಗಳಲ್ಲಿ 48 ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.
ಬಿಎಸ್‌ಪಿಯ 54 ಅಭ್ಯರ್ಥಿಗಳಲ್ಲಿ 23 ಮಂದಿ ಕೋಟ್ಯಾಧಿಪತಿಗಳಾಗಿದ್ದು, ಪಕ್ಷ ಮೂರನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ನ 25 ಅಭ್ಯರ್ಥಿಗಳಲ್ಲಿ 20 ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಸಮಾಜವಾದಿ ಪಕ್ಷದ 12ರಲ್ಲಿ 11 ಮತ್ತು ಜನನಾಯಕ ಜನತಾ ಪಕ್ಷವು 10ರಲ್ಲಿ 9 ಅಭ್ಯರ್ಥಿಗಳು ಕೋಟ್ಯಾಧಿಪತಿಗಳು. ಬಿಜು ಜನತಾ ದಳ, ಭಾರತೀಯ ರಾಷ್ಟ್ರೀಯ ಲೋಕದಳ ಮತ್ತು ರಾಷ್ಟ್ರೀಯ ಜನತಾ ದಳದ ಎಲ್ಲಾ ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.
ಇದನ್ನು ಓದಿದ್ದೀರಾ? ಬಡವರ ಸಂಪತ್ತನ್ನು ಕಸಿದು ಶ್ರೀಮಂತರಿಗೆ ಕೊಟ್ಟವರಿಂದ ಮತ್ತೊಂದು ಹಸಿ ಸುಳ್ಳು! WhatsApp University
ಅತಿ ಹೆಚ್ಚು ಮತ್ತು ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಗಳು
ಬಿಜೆಪಿಯ ಹರಿಯಾಣದ ಕುರುಕ್ಷೇತ್ರದ ಅಭ್ಯರ್ಥಿ, ಕೈಗಾರಿಕೋದ್ಯಮಿ ನವೀನ್ ಜಿಂದಾಲ್ 1,241 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದು, ಅವರ ನಂತರದ ಸ್ಥಾನದಲ್ಲಿ 482 ಕೋಟಿ ರೂಪಾಯಿ ಆಸ್ತಿಯೊಂದಿಗೆ ಒಡಿಶಾದ ಕಟಕ್‌ನಿಂದ ಸ್ಪರ್ಧಿಸುತ್ತಿರುವ ಬಿಜೆಡಿಯ ಸಂತೃಪ್ ಮಿಶ್ರಾ ಇದ್ದಾರೆ. ಹರಿಯಾಣದ ಕುರುಕ್ಷೇತ್ರದ ಎಎಪಿ ಅಭ್ಯರ್ಥಿ ಡಾ. ಸುಶೀಲ್ ಗುಪ್ತಾ 169 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, ಅತಿ ಹೆಚ್ಚು ಆಸ್ತಿ ಹೊಂದಿರುವ ಮೂರನೇ ಅಭ್ಯರ್ಥಿಯಾಗಿದ್ದಾರೆ.
ಇನ್ನು ಹರಿಯಾಣದ ರೋಹ್ಟಕ್‌ನ ಸ್ವತಂತ್ರ ಅಭ್ಯರ್ಥಿ ಮಾಸ್ಟರ್ ರಣಧೀರ್ ಸಿಂಗ್ ಅವರು ಅತ್ಯಂತ ಕಡಿಮೆ ಆಸ್ತಿಯನ್ನು ಹೊಂದಿರುವ ಅಭ್ಯರ್ಥಿಯಾಗಿದ್ದು, ತನ್ನ ಆಸ್ತಿ ಬರೀ ಎರಡು ರೂಪಾಯಿ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್‌ನ ಯುಪಿಯ ಪ್ರತಾಪ್‌ಗಢದ ಅಭ್ಯರ್ಥಿ ರಾಮ್ ಕುಮಾರ್ ಯಾದವ್ 1,000 ರೂಪಾಯಿ ಆಸ್ತಿ ಹೊಂದಿದ್ದರೆ, ದೆಹಲಿಯ ವಾಯವ್ಯ ದೆಹಲಿಯ ಅಭ್ಯರ್ಥಿ ಖಿಲ್ಖಿಲಾಕರ್ ಎರಡು ಸಾವಿರ ಆಸ್ತಿ ಘೋಷಿಸಿದ್ದಾರೆ.