ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ, ಭಾಷಣದ ವೇಳೆ ತೊದಲುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಹೇಳಿದ್ದಾರೆ.
ಸೇಲಂಪುರದ ಪಕ್ಷದ ಅಭ್ಯರ್ಥಿ ರಾಮ್ ಶಂಕರ್ ವಿದ್ಯಾರ್ಥಿ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅಖಿಲೇಶ್ ಯಾದವ್, “ಇಂಡಿಯಾ ಒಕ್ಕೂಟದ ಸರ್ಕಾರ ರಚನೆ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಜೂನ್ 4ರ ನಂತರ ಮತಗಳ ಎಣಿಕೆ ದಿನ, ಕೇಂದ್ರ ಸಚಿವ ಸಂಪುಟ ಮತ್ತು ಮಾಧ್ಯಮಗಳು ಕೂಡಾ ಬದಲಾಗುತ್ತದೆ” ಎಂದರು.
ಇದನ್ನು ಓದಿದ್ದೀರಾ? ದೇಶದಲ್ಲಿ ಹಲವು ಸಮಸ್ಯೆಗಳಿವೆ: ಸಂಸದೆ ಮೇಲಿನ ಹಲ್ಲೆ ವಿಷಯಕ್ಕೆ ಅಖಿಲೇಶ್ ಉತ್ತರ
ಇಂಡಿಯಾ ಒಕ್ಕೂಟ ಸರ್ಕಾರ ರಚಿಸಿದರೆ ಅಗ್ನಿವೀರ್ ಯೋಜನೆಯನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
“ಆತ್ಮಸ್ಥೈರ್ಯ ಕಳೆದುಕೊಂಡಾಗ ಮಾತು ತಡವರಿಸುತ್ತದೆ. ತಮ್ಮ ಸರ್ಕಾರ ಇನ್ನು ಮುಂದೆ ಇರಲ್ಲ ಎಂದು ಮೋದಿ ಅರಿವಿಗೆ ಬಂದಿದೆ. ‘400-ಪಾರ್’ ಘೋಷಣೆ ನೀಡಿದವರು ಈಗ ಸೋತು ಹೋಗಲಿದ್ದಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ದೇಶದಲ್ಲಿ ಹಲವು ಸಮಸ್ಯೆಗಳಿವೆ: ಸಂಸದೆ ಮೇಲಿನ ಹಲ್ಲೆ ವಿಷಯಕ್ಕೆ ಅಖಿಲೇಶ್ ಉತ್ತರ
ಬಿಜೆಪಿ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದೆ ಎಂದು ಪ್ರತಿಪಾದಿಸಿದ ಯಾದವ್, “ದೇಶದ 140 ಕೋಟಿ ಜನರು ಬಿಜೆಪಿಯನ್ನು 140 ಸ್ಥಾನಗಳಿಗೂ ಹಾತೊರೆಯುವಂತೆ ಮಾಡುತ್ತಾರೆ” ಎಂದು ಭರವಸೆ ವ್ಯಕ್ಷಪಡಿಸಿದರು.
“ಮೋದಿ ಸರ್ಕಾರವು ಕೈಗಾರಿಕೋದ್ಯಮಿಗಳ 25 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸಾಲವನ್ನು ಮನ್ನಾ ಮಾಡಿದೆ. ಇಂಡಿಯಾ ಕೂಟದ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡುತ್ತದೆ ಮತ್ತು ಅವರಿಗೆ ಎಂಎಸ್‌ಪಿ ಅನ್ನು ಜಾರಿಗೊಳಿಸುತ್ತದೆ” ಎಂದು ಅವರು ಹೇಳಿದರು.