ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದ ಸ್ಟೇಷನ್ ತಾಂಡಾದಲ್ಲಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಪಾಲಕರಿಗೆ ತಾಂಡಾ ನಿವಾಸಿಗಳು ಮತ್ತು ಮುಖಂಡರು ಸನ್ಮಾನಿಸಿ ಗೌರವಿಸಿ
ವಿದ್ಯಾರ್ಥಿಗಳು ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಲ್ಲವಿ ಗೋಪಾಲ್ ರಾಠೋಡ್ ಶೇ.85, ತ್ರಿಶಾಲ್ ರಾಮ್ ಚವ್ಹಾಣ್ ಶೇ.84, ಪ್ರತಿಕ್ಷಾ ರಮೇಶ್ ರಾಠೋಡ್ ಶೇ.83, ಸುರೇಶ್ ಅಂಬಾದಾಸ ರಾಥೋಡ್ ಶೇ.82, ಹರ್ಷಿತಾ ಹರೀಶ್ ರಾಥೋಡ್ ಶೇ.81, ಬಬ್ಲು ಈಶ್ವರ್ ಜಾಧವ್ ಶೇ.81, ಕಾರ್ತಿಕ್ ಪ್ರಕಾಶ್ ಪವಾರ್ ಶೇ.81, ಕಾಮರ್ಸ್ ವಿಭಾಗದಲ್ಲಿ ಆದಿತ್ಯ ರವಿ ಚವ್ಹಾಣ ಶೇ.74 ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅಮನ್ ತುಜರಾಮ್ ರಾಥೋಡ್ ಶೇ.83, ಖುಷಿ ಪ್ರಕಾಶ್ ಪವಾರ ಶೇ.80, ರಿತ್ತು ಹರೀಶ್ ರಾಥೋಡ್ ಶೇ.79, ಗಣೇಶ್ ಮುತ್ತಿಲಾಲ್ ಚವ್ಹಾಣ ಶೇ.76, ಪುಷ್ಪ ಧರ್ಮ ಜಾಧವ್ ಶೇ.73 ಅಂಕಗಳನ್ನು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಐದು ತಿಂಗಳಿನಲ್ಲಿ 13 ಕಡೆ ಕಳ್ಳತನ; ಕಳ್ಳರ ಜಾಡು ಹಿಡಿಯುವಲ್ಲಿ ವಿಫಲವಾದ ಪೊಲೀಸರು
ವಿದ್ಯಾರ್ಥಿಗಳ ಸಾಧನೆಗೆ ಪುರಸಭೆ ಸದಸ್ಯ ಜಗದೀಶ್ ಡಿ ಚವ್ಹಾಣ, ವಿನೋದ್ ಪವಾರ್, ಗೋಪಿ ಭಾಮಲಾ ರಾಠೋಡ್, ವಿಶ್ವನಾಥ್ ರಾಥೋಡ್, ಜಗದೀಶ್ ಪವಾರ್, ವಾಸು ನಾಯಕ್, ರೋಹನ್ ಜಾದವ್, ಅಂಬಾದಾಸ್ ಚೌಹಾನ್, ಅಪು ಚವ್ಹಾಣ, ಲೋಕೇಶ ರಾಥೋಡ್, ಅನಿಲ್ ರಾಥೋಡ್, ಸತೀಶ್ ರಾಥೋಡ್, ಪ್ರಕಾಶ್ ರಾಥೋಡ್ ಸೇರಿದಂತೆ ಅನೇಕರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತಾಂಡಾದ ಅನೇಕ ಮುಖಂಡರು ಮತ್ತು ಸ್ಥಳೀಯರು ಇದ್ದರು.
ವರದಿ: ಸಿಟಿಜನ್ ಜರ್ನಲಿಸ್ಟ್ ಅನಂತ್ ದೇಶಪಾಂಡೆ
