ಲೋಕಸಭಾ ಚುನಾವಣೆ | ಭವಿಷ್ಯ ನುಡಿದ ‘ಫಲೋಡಿ ಸಟ್ಟಾ ಬಜಾರ್‌’; ಸರ್ಕಾರ ರಚಿಸುವುದೇ ‘ಇಂಡಿಯಾ’ ಒಕ್ಕೂಟ?

Date:

ಕಳೆದ ನಾಲ್ಕು ಹಂತದ ಲೋಕಸಭಾ ಚುನಾವಣೆಯಲ್ಲಿ ಬೆಟ್ಟಿಂಗ್‌ ಭೂಗತಲೋಕ ಎಂದೇ ಹೆಸರು ಮಾಡಿರುವ ‘ಫಲೋಡಿ ಸಟ್ಟಾ ಬಜಾರ್‌’ ಎನ್‌ಡಿಎ ಕಡೆಗೇ ಹೆಚ್ಚು ಮಣೆ ಹಾಕಿತ್ತು. ಆದರೆ ಇದ್ದಕ್ಕಿದ್ದಂತೆ ತನ್ನ ವರಸೆಯನ್ನೇ ಬದಲಿಸಿ ಇಂಡಿಯಾ ಮೈತ್ರಿ ಒಕ್ಕೂಟ ಸರ್ಕಾರ ಮಾಡುತ್ತದೆಂದು ಭವಿಷ್ಯ ನುಡಿದಿದೆ.

ಎನ್‌ಡಿಎ ಪರವಾಗಿಯೇ ಹೆಚ್ಚಾಗಿ ತನ್ನ ಅಂಕಿ-ಅಂಶಗಳನ್ನು ಮುಂದಿಟ್ಟು, ಬಿಜೆಪಿ ಸುಮಾರು 300 ಸೀಟುಗಳನ್ನು ತನ್ನ ತೆಕ್ಕೆಗೇರಿಸಿಕೊ‍ಳ್ಳಲಿದೆ ಹಾಗೂ ಕಾಂಗ್ರೆಸ್‌ ಹೆಚ್ಚೆಂದರೆ 50 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿತ್ತು. ಆದರೆ ಆರನೇ ಹಂತದ ಮತದಾನ ಮುಗಿದ ಕೂಡಲೇ ಎನ್‌ಡಿಎ ಕೇವಲ 195 ಸೀಟುಗಳನ್ನು ಸಮೀಪಿಸಬಹುದೆಂದು ಅಚ್ಚರಿಯ ಅಂಕಿ-ಅಂಶಗಳನ್ನು ಮುಂದಿಟ್ಟಿದೆ.

ಏನಿದು ಫಲೋಡಿ ಸಟ್ಟಾ ಬಜಾರ್?‌

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಿಂದಿಯಲ್ಲಿ ಸಟ್ಟಾ ಅಥವಾ ಸಟ್ಟಾ  ಬಜಾರ್‌ ಎಂದರೆ ಬೆಟ್ಟಿಂಗ್‌ ಮಾರುಕಟ್ಟೆ. ಇದು ಜೂಜುಗಳಲ್ಲಿ ಒಂದು. ಪರಸ್ಪರ ಒಪ್ಪಿಗೆಯ ಮೇಲೆ ನಡೆಯುವ ಅಕ್ರಮ ಹಣಕಾಸಿನ ಆಟವಾಗಿದೆ.

ರಾಜಸ್ಥಾನದ ಜೋಧ್‌ಪುರದಿಂದ 164 ಕಿ.ಮೀ. ದೂರದ ಫಲೋಡಿ ನಗರದ ಮಾರುಕಟ್ಟೆಯಲ್ಲಿ ಪ್ರಾರಂಭವಾದ ಬೆಟ್ಟಿಂಗ್‌, ಮಾರುಕಟ್ಟೆಗೆ ಬರುತ್ತಿದ್ದ ಸರಕುಗಳ ಮೇಲೆ ಇದನ್ನು ಪ್ರಯೋಗಿಸುತ್ತಿದ್ದರು. ಇತ್ತೀಚೆಗೆ ಇದು  ಕ್ರಿಕೆಟ್‌ನಿಂದ ಹಿಡಿದು  ಪ್ರಭುತ್ವವನ್ನು ಆಳುವ ಜನಪ್ರತಿನಿಗಳ ಅಳಿವು ಉಳಿವಿನ ಭವಿಷ್ಯದವರೆಗೂ ಬೆಳೆದುನಿಂತಿದೆ.

ಈ ಬೆಟ್ಟಿಂಗ್‌ ಮಾರುಕಟ್ಟೆಗೆ ನೂರಾರು ವರ್ಷದ ಹಿನ್ನೆಲೆ ಇದೆ. ಫಲೋಡಿ ಪಟ್ಟಣದ ಮಾರುಕಟ್ಟೆಗೆ ಎಲ್ಲಿಂದಲೋ ಬರುತ್ತಿದ್ದ ಅನೇಕ ಸರಕುಗಳನ್ನು ಕೆಲವೇ ಕೆಲವು ಮಂದಿ ಮೊದಲೇ ಅಂದಾಜಿಸಿ ಅದನ್ನು ಬುಕ್ಕಿಂಗ್‌ ಮಾಡುತ್ತಿದ್ದರು. ಇಲ್ಲಿ ಮಾರುಕಟ್ಟೆಯ ವ್ಯಾಪಾರಿಗಳ ಜೊತೆಗೆ ಬುಕ್ಕಿಂಗ್‌ ದರಕ್ಕಿಂತ ಹೆಚ್ಚಾದ ಹಣವನ್ನು ಪಡೆದು ಸರಕುಗಳ ಮಾಲೀಕನಿಗೂ ಮಾರುಕಟ್ಟೆಯ ವ್ಯಾಪಾರಿಗೂ ಗೊತ್ತಾಗದ ಹಾಗೆ ಅಕ್ರಮ ಹಣ ಸಂಪಾದಿಸಲಾಗುತ್ತಿತ್ತು ಎನ್ನಲಾಗುತ್ತದೆ.

ಬರುಬರುತ್ತಾ ಇಲ್ಲಿನ ಬೆಟ್ಟಿಂಗ್‌ಗಳು ಮಳೆ ಯಾವಾಗ ಬರಬಹುದು, ಚುನಾವಣೆಗಳಲ್ಲಿ ಯಾರು ಗೆಲ್ಲಬಹುದು, ಷೇರು ಮಾರುಕಟ್ಟೆಯಲ್ಲಿ ಯಾವ ಷೇರುಗಳು ಏರಿಕೆಯಾಗಬಹುದು, ಕ್ರಿಕೆಟ್‌ ಪಂದ್ಯಗಳ ಸೋಲು ಗೆಲುವುಗಳು ಹೀಗೆ ಅನೇಕ ವಿಷಯಗಳ ಮೇಲೆ ಹಣ, ಬೆಲೆಬಾಳುವ ವಸ್ತುಗಳು, ಸಂಪತ್ತು, ಜಾನುವಾರುಗಳನ್ನು ಆಟಕ್ಕೆ ಇಡುತ್ತಾರೆ. ಸರ್ಕಾರ ಈ ಸಟ್ಟಾ ಬಜಾರ್‌ ಮಾರುಕಟ್ಟೆಯನ್ನು ಅಕ್ರಮವೆಂದು ಘೋಷಿಸಿದ್ದರೂ, ಇದು ಗೌಪ್ಯವಾಗಿ ತನ್ನ ಬೇರುಗಳನ್ನು ಬಲಪಡಿಸಿಕೊಂಡಿದೆ.

ನಿಖರ ಭವಿಷ್ಯಕ್ಕೆ ಹೆಸರುವಾಸಿ:

ಸಟ್ಟಾ ಬಜಾರ್‌ ಭವಿಷ್ಯಗಳು ವೈಜ್ಙಾನಿಕ ಅಂಕಿ-ಅಂಶಗಳಿಗೆ ದೂರವಿದ್ದರೂ, ಇವರು ಕೊಡುವ ನಂಬರ್‌ಗಳ ಸನಿಹಕ್ಕೆ ಸೋಲು- ಗೆಲುವುಗಳು ಬಂದು ನಿಲ್ಲುವುದು ಕಾಕತಾಳೀಯ. ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಿನ್ನೆಲೆ, ಜನಮನ್ನಣೆ, ಆರ್ಥಿಕ ಸ್ಥಿತಿಗತಿಗಳು ಹೀಗೆ ಎಲ್ಲವನ್ನೂ ತಿಳಿದುಕೊಂಡು ಅದರ ಆಧಾರದ ಮೇಲೆ ಬಾಜಿ ಕಟ್ಟಲಾಗುತ್ತದೆ.

ಬಾಜಿಕೋರರ ಲೆಕ್ಕಾಚಾರಗಳು ಕೇವಲ ಚುನಾವಣಾ ಸ್ಪರ್ಧಿಗಳ ಮೇಲಲ್ಲದೆ, ರಾಜಕೀಯ ಪಕ್ಷಗಳ ಮೇಲೂ ಇದೆ. ಪಕ್ಷಗಳ ದಕ್ಷತೆ, ಆರ್ಥಿಕ ಸ್ಥಿತಿಗಳು, ಮುಂದಾಳುಗಳ ನಡವಳಿಕೆ, ಹೀಗೆ ಅನೇಕ ನೋಟಗಳಿಂದ ತಮ್ಮ ಅಭಿಪ್ರಾಯಗಳನ್ನು ನಿರಂತರವಾಗಿ ಸಟ್ಟಾ ಬಜಾರ್‌ನ ಬೆಟ್ಟಿಂಗ್‌ದಾರರು ರೂಪಿಸುತ್ತಾರೆ.‌

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಸೀಟುಗಳನ್ನು ಪಡೆದು ಅಧಿಕಾರ ಹಿಡಿಯಲಿದೆ ಎಂದಿತ್ತು. ಅದೇ ರೀತಿಯಲ್ಲಿ ನಡೆದಿತ್ತು. ಹಾಗೆಯೇ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 195 ಸೀಟುಗಳನ್ನು ಹಾಗೂ ಇಂಡಿಯಾ ಒಕ್ಕೂಟ 348 ಸೀಟುಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಸಟ್ಟಾ ಬಜಾರ್‌ನ ಬಾಜಿದಾರರು ಅಂದಾಜಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರೆಮಲ್ ಚಂಡಮಾರುತ| ಬಂಗಾಳದಲ್ಲಿ ಭೂಕುಸಿತ ಸಾಧ್ಯತೆ; ವಿಮಾನ, ರೈಲುಗಳು ರದ್ದು

ಇನ್ನು ಕೇವಲ ಒಟ್ಟು ಅಂಕಿ-ಸಂಖ್ಯೆಗಳಲ್ಲದೇ, ಪ್ರಮುಖ ರಾಜ್ಯಗಳ ಬಗ್ಗೆಯೂ ಅಂದಾಜಿಸಿದೆ. ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟ 30 ಸೀಟುಗಳನ್ನು ಗಳಿಸಿದರೆ, ಎನ್‌ಡಿಎ 18 ಸೀಟುಗಳನ್ನು ಪಡೆಯುತ್ತದೆ. ರಾಜಸ್ಥಾನದಲ್ಲಿ ಇಂಡಿಯಾ ಒಕ್ಕೂಟ 10 ಸ್ಥಾನಗಳನ್ನು ಗಳಿಸಿದರೆ ಎನ್‌ಡಿಎ 15 ಸೀಟುಗಳನ್ನು ಗಳಿಸುತ್ತದೆ. ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟ 38 ಸ್ಥಾನ ಪಡೆದರೆ, ಎನ್‌ಡಿಎ 42 ಸ್ಥಾನಗಳನ್ನು ಗಳಿಸುತ್ತದೆ.

ದೆಹಲಿಯಲ್ಲಿ ಇಂಡಿಯಾ ಒಕ್ಕೂಟ 3 ಸ್ಥಾನಗಳನ್ನು ಗಳಿಸಿದರೆ ಎನ್‌ಡಿಎ 4 ಸ್ಥಾನಗಳನ್ನು ಪಡೆಯುತ್ತದೆ. ಹರಿಯಾಣದಲ್ಲಿ ಇಂಡಿಯಾ ಒಕ್ಕೂಟ 5 ಸ್ಥಾನಗಳನ್ನು ಪಡೆದರೆ, ಎನ್‌ಡಿಎ 5 ಸ್ಥಾನಗಳನ್ನು ಗಳಿಸಲಿದೆ. ಪಂಜಾಬ್‌ನಲ್ಲಿ ಇಂಡಿಯಾ ಒಕ್ಕೂಟ 12 ಸ್ಥಾನಗಳನ್ನು ಗಳಿಸಿದರೆ, ಎನ್‌ಡಿಎ 1 ಸ್ಥಾನ ಪಡೆಯಲಿದೆ ಎಂದು ಗೆಲುವು ಸೋಲುಗಳ ಮೇಲೆ ಬೆಟ್ಟಿಂಗ್‌ಗಳು ನಡೆಯುತ್ತಿವೆ ಎನ್ನುವುದು ಫಲೋಡಿ ಸಟ್ಟಾ ಬಜಾರ್ ಅಭಿಪ್ರಾಯವಾಗಿದೆ.

ಹಕ್ಕು ನಿರಾಕರಣೆ : ಇಲ್ಲಿ ಒದಗಿಸಿದ ಮಾಹಿತಿಯು ಪತ್ರಿಕೆಗಳು, ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಮೂಲಗಳನ್ನು ಆಧರಿಸಿದೆ. ಈ ವರದಿಯು ಯಾವುದೇ ರೂಪದಲ್ಲಿ ಬೆಟ್ಟಿಂಗ್ ಅನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿಲ್ಲ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ...

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ; ಸಿ.ಟಿ ರವಿ ವಿರುದ್ಧ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ ನೀಡಿದ್ದ ಮಾಜಿ ಸಚಿವ, ವಿಧಾನ...

ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತದೆ: ಎಎಪಿ

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟಂತೆ ನಟಿಸಿ...