ಐಪಿಎಲ್ ಫೈನಲ್ | ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಾರಕ ಬೌಲಿಂಗ್‌ಗೆ ಮಕಾಡೆ ಮಲಗಿದ ಹೈದರಾಬಾದ್!

Date:

ಐಪಿಎಲ್‌ನ ಲೀಗ್ ಹಂತದಲ್ಲಿ ಭರ್ಜರಿ ಸ್ಫೋಟಕ ಬ್ಯಾಟಿಂಗ್‌ನ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಪ್ಯಾಟ್ ಕಮ್ಮಿನ್ಸ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡ, ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಮಾರಕ ಬೌಲಿಂಗ್‌ ದಾಳಿಗೆ ಫೈನಲ್‌ನಲ್ಲಿ ಮಕಾಡೆ ಮಲಗಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್‌ ಟಾಸ್ ಗೆದ್ದಿದ್ದು, ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಮೊದಲ ಓವರ್‌ನಿಂದಲೇ ವಿಫಲರಾದ ಹೈದರಾಬಾದ್ ಬ್ಯಾಟರ್‌ಗಳು, 18.3 ಓವರ್‌ಗಳಲ್ಲಿ ಕೇವಲ 113 ರನ್ ಗಳಿಸುವಷ್ಟರಲ್ಲಿ ಆಲೌಟ್ ಆದರು. ಐಪಿಎಲ್‌ನಲ್ಲಿ 4ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಕೆಕೆಆರ್ ತಂಡ, ಮೂರನೇ ಬಾರಿಗೆ ಚಾಂಪಿಯನ್ ಆಗಲು 114 ರನ್‌ಗಳನ್ನು ದಾಖಲಿಸಬೇಕಿದೆ.

ಬಾಲಿವುಡ್‌ ನಟ ಶಾರೂಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡವು, 4ನೇ ಬಾರಿಗೆ ಐಪಿಎಲ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈ ಮೊದಲು 2012, 2014 ಹಾಗೂ 2021ರಲ್ಲಿ ಫೈನಲ್ ಪ್ರವೇಶಿಸಿತ್ತು. ಈ ಪೈಕಿ 2012ರಲ್ಲಿ ಚೆನ್ನೈಯನ್ನು ಹಾಗೂ 2014ರಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ಅನ್ನು ಸೋಲಿಸಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ, ಚಾಂಪಿಯನ್ ಆಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2021ರಲ್ಲಿ ಕೂಡ ಫೈನಲ್ ಪ್ರವೇಶಿಸಿದ್ದರೂ ಕೂಡ, ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡವು 27 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲನುಭವಿಸಿ, ರನ್ನರ್ ಅಪ್ ಆಗಿತ್ತು.

ಆರಂಭದಲ್ಲೇ ಕೈಕೊಟ್ಟ ಹೈದರಾಬಾದ್ ಬ್ಯಾಟರ್‌ಗಳು

ಇಂದಿನ ಪಂದ್ಯದಲ್ಲಿ ಹೈದರಾಬಾದ್ ಪರ ಇನ್ನಿಂಗ್ಸ್‌ ಆರಂಭಿಸಿ, ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಫೈನಲ್‌ನಲ್ಲಿ ಮಂಕಾದರು. ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಮೊದಲ ಓವರ್‌ ಎಸೆದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್‌ 5ನೇ ಎಸೆತದಲ್ಲಿ ಅಭಿಷೇಕ್ ಶರ್ಮಾರನ್ನು ಇನ್‌ಸ್ವಿಂಗ್ ಮೂಲಕ ಕ್ಲೀನ್ ಬೌಲ್ಡ್‌ ಮಾಡುವಲ್ಲಿ ಸಫಲರಾದರು. ಆ ಮೂಲಕ ಆರಂಭಿಕ ಜೋಡಿಯನ್ನು ಬೇರ್ಪಡಿಸಿದರು.

ಆ ಬಳಿಕ ಎರಡನೇ ಓವರ್‌ ಎಸೆದ ವೈಭವ್ ಅರೋರಾ, ತನ್ನ ಪಾಲಿನ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಟ್ರಾವಿಸ್ ಹೆಡ್ ಅವರ ವಿಕೆಟ್ ಪಡೆಯುವ ಮೂಲಕ ಹೈದರಾಬಾದ್‌ಗೆ ಮತ್ತೊಂದು ಆಘಾತ ನೀಡಿದರು. ಟ್ರಾವಿಸ್ ಹೆಡ್ ತಾನೆದುರಿಸಿದ ಮೊದಲ ಎಸೆತ ಅದಾಗಿತ್ತು. ವಿಕೆಟ್‌ ಕೀಪೆರ್ ಗುರ್ಬಾಝ್‌ಗೆ ಕ್ಯಾಚಿತ್ತು ನಿರ್ಗಮಿಸಿ, ಶೂನ್ಯಕ್ಕೆ ಔಟಾದರು.

ಆ ಬಳಿಕ 9 ರನ್ ಗಳಿಸಿದ್ದಾಗ ಬ್ಯಾಟರ್ ರಾಹುಲ್ ತ್ರಿಪಾಠಿ ಕೂಡ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲರಾಗಿ, ರಮಣ್‌ದೀಪ್‌ಗೆ ಕ್ಯಾಚಿತ್ತು ಔಟಾದರು. ನಿತೀಶ್ ಕುಮಾರ್ ರೆಡ್ಡಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. 7 ಓವರ್ ಮುಗಿಯುವುದರೊಳಗೆ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಕೇವಲ 47 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು.

ಹೈದರಾಬಾದ್ ಪರ ನಾಯಕ ಪ್ಯಾಟ್ ಕಮ್ಮಿನ್ಸ್‌ 24 ರನ್ ಗಳಿಸಿದ್ದೇ ಅತಿದೊಡ್ಡ ಸ್ಕೋರ್ ಆಗಿದೆ. ಉಳಿದಂತೆ ಎಡೆನ್ ಮಾರ್ಕರಮ್ 20, ಹೆನ್ರಿ ಕ್ಲಾಸೆನ್ 16, ನಿತೀಶ್ ಕುಮಾರ್ ರೆಡ್ಡಿ 13 ಗಳಿಸುವ ಮೂಲಕ ಎರಡಂಕೆಯ ಸ್ಕೋರ್ ದಾಖಲಿಸಿದರು.

ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಅಮೆರಿಕಕ್ಕೆ ಹಾರಿದ ಟೀಮ್ ಇಂಡಿಯಾದ ಮೊದಲ ಬ್ಯಾಚ್

ನಾಯಕ ಶ್ರೇಯಸ್ ಅಯ್ಯರ್ವ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡ ಮಾರಕ ಬೌಲಿಂಗ್‌ಗೆ ನಲುಗಿ, ಕೊನೆಯಲ್ಲಿ 18.3 ಓವರ್‌ಗಳಲ್ಲಿ ಕೇವಲ 113 ರನ್ ಗಳಿಸುವಷ್ಟರಲ್ಲಿ ಹೈದರಾಬಾದ್ ತಂಡ ಆಲೌಟ್ ಆಯಿತು.

ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಬೌಲಿಂಗ್‌ನಲ್ಲಿ ಆಂಡ್ರೆ ರಸ್ಸೆಲ್ 19ಕ್ಕೆ 3, ಮಿಚೆಲ್ ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆಯುವಲ್ಲಿ ಸಫಲರಾದರು. ಉಳಿದಂತೆ ವರುಣ್ ಚಕ್ರವರ್ತಿ, ಸುನಿಲ್ ನರೇನ್ ಹಾಗೂ ವೈಭವ್ ಅರೋರಾ ತಲಾ ಒಂದೊಂದು ವಿಕೆಟ್ ಗಳಿಸಿದರು. ಆ ಮೂಲಕ ಬೌಲಿಂಗ್ ದಾಳಿ ನಡೆಸಿದ ಎಲ್ಲ ಕೆಕೆಆರ್‌ನ ಬೌಲರ್‌ಗಳು ವಿಕೆಟ್ ಪಡೆದುಕೊಂಡರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ | ಆತಿಥೇಯ ಅಮೆರಿಕ ಸೋಲಿಸಿ ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸಿದ ಟೀಮ್ ಇಂಡಿಯಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಐಸಿಸಿ...

ಟಿ20 ವಿಶ್ವಕಪ್‌ | ಭಾರತಕ್ಕೆ ಗೆಲ್ಲಲು 111 ರನ್‌ಗಳ ಗುರಿ ನೀಡಿದ ಆತಿಥೇಯ ಅಮೆರಿಕ: ಮಿಂಚಿದ ಅರ್ಷ್‌ದೀಪ್ ಸಿಂಗ್

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಐಸಿಸಿ...

ಟಿ20 ವಿಶ್ವಕಪ್ | ಟೀಮ್ ಇಂಡಿಯಾ-ಅಮೆರಿಕ ಮೊದಲ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ...

2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿ | ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ‘ಔಟ್’; ವ್ಯಾಪಕ ಆಕ್ರೋಶ

ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ...