ಕೇರಳ ಹಾಗೂ ಈಶಾನ್ಯ ಭಾರತದ ಬಹುಭಾಗಗಳಿಗೆ ಒಂದು ದಿನ ಮುಂಚಿತವಾಗಿ ನೈರುತ್ಯ ಮುಂಗಾರು ಮಳೆ ಕಾಲಿಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.
ಮೇ.15 ರಂದು ಹವಾಮಾನ ಇಲಾಖೆ ತಿಳಿಸಿದಂತೆ ಮುಂಗಾರು ಮಳೆ ಕೇರಳಕ್ಕೆ ಮೇ 31ರಂದು ಕಾಲಿಡಬೇಕಿತ್ತು.
“ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ನೈರುತ್ಯ ಮುಂಗಾರು ಆರಂಭವಾಗಲಿದ್ದು,ಪರಿಸ್ಥಿತಿ ಅನುಕೂಲಕರವಾಗಿ ಮುಂದುವರಿಯಲಿದೆ” ಎಂದು ಐಎಂಡಿ ಬುಧವಾರ ತಿಳಿಸಿತ್ತು.
“ದಕ್ಷಿಣ ಅರಬ್ಬಿ ಸಮುದ್ರದ ಕೆಲವು ಪ್ರದೇಶಗಳು, ಉಳಿದ ಪ್ರದೇಶಗಳಾದ ಮಾಲ್ಡೀವ್ಸ್, ಕ್ಯಾಮೊರಿನ್, ಲಕ್ಷದ್ವೀಪ, ನೈರುತ್ಯ ಹಾಗೂ ಕೇಂದ್ರ ಬಂಗಾಳ ಕೊಲ್ಲಿ, ಈಶಾನ್ಯ ಬಂಗಾಳ ಕೊಲ್ಲಿ ಹಾಗೂ ಈಶಾನ್ಯದ ಭಾಗಗಳ ಕೆಲವು ಭಾಗಗಳಲ್ಲಿ ಇದೇ ಸಮಯದಲ್ಲಿ ನೈರುತ್ಯ ಮುಂಗಾರು ಒಂದು ದಿನ ದಿನ ಮುಂಚಿತವಾಗಿ ಆಗಮಿಸಲಿದ್ದು, ಪರಿಸ್ಥಿತಿ ಅನುಕೂಲಕರವಾಗಿ ಮುಂದುವರಿಯಲಿದೆ” ಎಂದು ಐಎಂಡಿ ತಿಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಕಳಿಸುವ ಮೋದಿ ಗ್ಯಾರಂಟಿಯು ‘ಜನತಂತ್ರದ ಜನನಿ’ಯ ಅಣಕ ಅಲ್ಲವೇ?
ಕೇರಳದಲ್ಲಿ ಕೆಲವು ದಿನಗಳಿಂದ ಹೆಚ್ಚುವರಿ ಮಳೆಯಾಗಿದ್ದು, ಮೇ ತಿಂಗಳಲ್ಲಿ ಬೀಳಬೇಕಿದ್ದ ಮಳೆಗಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿಅಂಶಗಳು ತೋರಿಸಿವೆ.
ಹವಾಮಾನ ಇಲಾಖೆಯ ವಿಜ್ಞಾನಿಗಳ ಪ್ರಕಾರ ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಮೂಲಕ ಭಾನುವಾರ ಆಗಮಿಸುವುದರ ಮೂಲಕ ಬಂಗಾಳ ಕೊಲ್ಲಿಗೆ ಮುಂಗಾರು ಮಳೆ ಹರಿವನ್ನು ಎಳೆದುಕೊಳ್ಳಲು ಸಾಧ್ಯವಾಗಿದೆ. ಇದು ಕೂಡ ಈಶಾನ್ಯ ಭಾರತಕ್ಕೆ ಬೇಗನೆ ಮುಂಗಾರು ಮಳೆ ಆಗಮಿಸಲು ಕಾರಣವಾಗಿದೆ.
ಸಾಮಾನ್ಯವಾಗಿ ಮುಂಗಾರು ಮಳೆಯು ಅರುಣಾಚಲ ಪ್ರದೇಶ, ತ್ರಿಪುರ, ನಾಗಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಹಾಗೂ ಅಸ್ಸಾಂ ರಾಜ್ಯಗಳಿಗೆ ಜೂನ್ 5 ರಂದು ಆಗಮಿಸಬೇಕಿತ್ತು.
ಭಾರತದ ಕೃಷಿ ಭೂಮಿಗೆ ಮುಂಗಾರು ಮಳೆ ನಿರ್ಣಾಯಕವಾಗಿದ್ದು, ಶೇ.52 ರಷ್ಟು ಪ್ರದೇಶದ ಉತ್ಪಾದನೆ ಇದರಿಂದ ಅವಲಂಬಿತವಾಗಿದೆ.ದೇಶಾದ್ಯಂತ ವಿದ್ಯುತ್ ಉತ್ಪಾದನೆಯ ಹೊರತಾಗಿ ಕುಡಿಯುವ ನೀರಿಗಾಗಿ ಜಲಾಶಯಗಳಿಗೆ ಮರುಪೂರಣಗೊಳಿಸುವುದು ಕೂಡ ನಿರ್ಣಾಯಕವಾಗಿದೆ.
ವಿಜ್ಞಾನಿಗಳ ಪ್ರಕಾರ ಮುಂಗಾರು ಮಳೆ ಕಡಿಮೆಗೊಳಿಸುವ ಎನ್ ನಿನೊ ಸದ್ಯ ಚಾಲ್ತಿಯಲ್ಲಿದ್ದರೂ ಮುಂಗಾರನ್ನು ಹೆಚ್ಚಿಸುವ ಲಾ ನಿನೊ ಆಗಸ್ಟ್ – ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.
