ಕೇರಳ ಹಾಗೂ ಈಶಾನ್ಯ ಭಾರತಕ್ಕೆ ಕಾಲಿಟ್ಟ ನೈರುತ್ಯ ಮುಂಗಾರು

Date:

ಕೇರಳ ಹಾಗೂ ಈಶಾನ್ಯ ಭಾರತದ ಬಹುಭಾಗಗಳಿಗೆ ಒಂದು ದಿನ ಮುಂಚಿತವಾಗಿ ನೈರುತ್ಯ ಮುಂಗಾರು ಮಳೆ ಕಾಲಿಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

- Advertisement -

ಮೇ.15 ರಂದು ಹವಾಮಾನ ಇಲಾಖೆ ತಿಳಿಸಿದಂತೆ ಮುಂಗಾರು ಮಳೆ ಕೇರಳಕ್ಕೆ ಮೇ 31ರಂದು ಕಾಲಿಡಬೇಕಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

“ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ನೈರುತ್ಯ ಮುಂಗಾರು ಆರಂಭವಾಗಲಿದ್ದು,ಪರಿಸ್ಥಿತಿ ಅನುಕೂಲಕರವಾಗಿ ಮುಂದುವರಿಯಲಿದೆ” ಎಂದು ಐಎಂಡಿ ಬುಧವಾರ ತಿಳಿಸಿತ್ತು.

“ದಕ್ಷಿಣ ಅರಬ್ಬಿ ಸಮುದ್ರದ ಕೆಲವು ಪ್ರದೇಶಗಳು, ಉಳಿದ ಪ್ರದೇಶಗಳಾದ ಮಾಲ್ಡೀವ್ಸ್, ಕ್ಯಾಮೊರಿನ್, ಲಕ್ಷದ್ವೀಪ, ನೈರುತ್ಯ ಹಾಗೂ ಕೇಂದ್ರ ಬಂಗಾಳ ಕೊಲ್ಲಿ, ಈಶಾನ್ಯ ಬಂಗಾಳ ಕೊಲ್ಲಿ ಹಾಗೂ ಈಶಾನ್ಯದ ಭಾಗಗಳ ಕೆಲವು ಭಾಗಗಳಲ್ಲಿ ಇದೇ ಸಮಯದಲ್ಲಿ ನೈರುತ್ಯ ಮುಂಗಾರು ಒಂದು ದಿನ ದಿನ ಮುಂಚಿತವಾಗಿ ಆಗಮಿಸಲಿದ್ದು, ಪರಿಸ್ಥಿತಿ ಅನುಕೂಲಕರವಾಗಿ ಮುಂದುವರಿಯಲಿದೆ” ಎಂದು ಐಎಂಡಿ ತಿಳಿಸಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಕಳಿಸುವ ಮೋದಿ ಗ್ಯಾರಂಟಿಯು ‘ಜನತಂತ್ರದ ಜನನಿ’ಯ ಅಣಕ ಅಲ್ಲವೇ?

ಕೇರಳದಲ್ಲಿ ಕೆಲವು ದಿನಗಳಿಂದ ಹೆಚ್ಚುವರಿ ಮಳೆಯಾಗಿದ್ದು, ಮೇ ತಿಂಗಳಲ್ಲಿ ಬೀಳಬೇಕಿದ್ದ ಮಳೆಗಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿಅಂಶಗಳು ತೋರಿಸಿವೆ.

ಹವಾಮಾನ ಇಲಾಖೆಯ ವಿಜ್ಞಾನಿಗಳ ಪ್ರಕಾರ ರೆಮಲ್‌ ಚಂಡಮಾರುತ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಮೂಲಕ ಭಾನುವಾರ ಆಗಮಿಸುವುದರ ಮೂಲಕ ಬಂಗಾಳ ಕೊಲ್ಲಿಗೆ ಮುಂಗಾರು ಮಳೆ ಹರಿವನ್ನು ಎಳೆದುಕೊಳ್ಳಲು ಸಾಧ್ಯವಾಗಿದೆ. ಇದು ಕೂಡ ಈಶಾನ್ಯ ಭಾರತಕ್ಕೆ ಬೇಗನೆ ಮುಂಗಾರು ಮಳೆ ಆಗಮಿಸಲು ಕಾರಣವಾಗಿದೆ.

ಸಾಮಾನ್ಯವಾಗಿ ಮುಂಗಾರು ಮಳೆಯು ಅರುಣಾಚಲ ಪ್ರದೇಶ, ತ್ರಿಪುರ, ನಾಗಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಹಾಗೂ ಅಸ್ಸಾಂ ರಾಜ್ಯಗಳಿಗೆ ಜೂನ್‌ 5 ರಂದು ಆಗಮಿಸಬೇಕಿತ್ತು.

ಭಾರತದ ಕೃಷಿ ಭೂಮಿಗೆ ಮುಂಗಾರು ಮಳೆ ನಿರ್ಣಾಯಕವಾಗಿದ್ದು, ಶೇ.52 ರಷ್ಟು ಪ್ರದೇಶದ ಉತ್ಪಾದನೆ ಇದರಿಂದ ಅವಲಂಬಿತವಾಗಿದೆ.ದೇಶಾದ್ಯಂತ ವಿದ್ಯುತ್‌ ಉತ್ಪಾದನೆಯ ಹೊರತಾಗಿ ಕುಡಿಯುವ ನೀರಿಗಾಗಿ ಜಲಾಶಯಗಳಿಗೆ ಮರುಪೂರಣಗೊಳಿಸುವುದು ಕೂಡ ನಿರ್ಣಾಯಕವಾಗಿದೆ.

ವಿಜ್ಞಾನಿಗಳ ಪ್ರಕಾರ ಮುಂಗಾರು ಮಳೆ ಕಡಿಮೆಗೊಳಿಸುವ ಎನ್‌ ನಿನೊ ಸದ್ಯ ಚಾಲ್ತಿಯಲ್ಲಿದ್ದರೂ ಮುಂಗಾರನ್ನು ಹೆಚ್ಚಿಸುವ ಲಾ ನಿನೊ ಆಗಸ್ಟ್‌ – ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಡತನದ ಸರಪಳಿ ಮುರಿಯಲು ಸೀರೆಯಲ್ಲೇ ಓಟ: ಹೋಮ್ ಗಾರ್ಡ್ ಉದ್ಯೋಗಾಕಾಂಕ್ಷಿಯ ಸಾಹಸಕ್ಕೆ ಪ್ರಶಂಸೆ

ಹೋಮ್ ಗಾರ್ಡ್ (ಗೃಹ ರಕ್ಷಕ ಸಿಬ್ಬಂದಿ) ನೇಮಕಾತಿಯ ದೈಹಿಕ ದಾರ್ಢ್ಯ ಪರೀಕ್ಷೆಯ...

CEC ನೇಮಕ ಬಲು ದೊಡ್ಡ ತಲೆನೋವು ಎಂದಿದ್ದ ಸಂವಿಧಾನ ರಚನಾ ಸಭೆ; ಯಾಕೆ ಗೊತ್ತೇ?

ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಸ್ವಾಯತ್ತತೆಯ ವಿವಾದ ಇಂದು ನಿನ್ನೆಯದಲ್ಲ. ಇದು...

ಆಪ್ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ: ಡಿಸಿಎಂ ಪರ್ವೇಶ್ ವರ್ಮಾ, ಪೊಲೀಸರಿಗೆ ದೆಹಲಿ ಹೈಕೋರ್ಟ್ ನೋಟಿಸ್

ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತನಿಗೆ...