ರಾಷ್ಟ್ರ ರಾಜಧಾನಿ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿರುವ ಕಾರಣ ಹರಿಯಾಣ ಸರ್ಕಾರಕ್ಕೆ ತುರ್ತಾಗಿ ನೀರು ಹರಿಸಲು ನಿರ್ದೇಶಿಸುವಂತೆ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ತೀವ್ರ ಬಿಸಿಲಿನ ಪರಿಣಾಮಗಳಿಂದಾಗಿ ನಗರದಲ್ಲಿ ನೀರಿನ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ನೆರೆಯ ರಾಜ್ಯ ಹರಿಯಾಣಕ್ಕೆ ಒಂದು ತಿಂಗಳು ಹೆಚ್ಚುವರಿ ನೀರು ಹರಿಸಲು ನಿರ್ದೇಶಿಸುವಂತೆ ಆಪ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ದೆಹಲಿಯ ನೀರಿನ ಅಗತ್ಯತೆಗಳನ್ನು ಪರಿಪೂರ್ಣಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯು ತೀವ್ರ ಬಿಸಿಲಿನಿಂದಾಗಿ ನೀರಿನ ಕೊರತೆಯನ್ನು ಅನುಭವಿಸುತ್ತಿದೆ ಎಂದು ದೆಹಲಿ ಸರ್ಕಾರ ಕೋರ್ಟ್‌ಗೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿರುವ ತಮ್ಮ ಸರ್ಕಾರಗಳಿಗೆ ಒಂದು ತಿಂಗಳ ಮಟ್ಟಿಗೆ ನೀರು ಹರಿಸುವಂತೆ ನಿರ್ದೇಶಿಸುವಂತೆ ಆಗ್ರಹಿಸಿದ್ದರು.
ದೆಹಲಿಯ ಜಲ ಸಚಿವೆ ಅತೀಶಿ, ಹರಿಯಾಣ ಸರ್ಕಾರ ದೆಹಲಿಗೆ ಬಿಡಬೇಕಾದ ತಮ್ಮ ಪಾಲಿನ ನೀರನ್ನು ಬಿಡದೆ ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಅಭಾವ ಸೃಷ್ಟಿಸುತ್ತಿದೆ. ದೆಹಲಿಯು ನೀರಿನ ಪೂರೈಕೆಗಾಗಿ ಸಂಪೂರ್ಣವಾಗಿ ಯಮುನಾ ನದಿಯನ್ನು ಅವಲಂಬಿಸಿದ್ದು, ಹರಿಯಾಣ ಸರ್ಕಾರ ಈ ನೀರನ್ನು ಬಿಡಬೇಕಿದೆ ಎಂದು ತಿಳಿಸಿದ್ದಾರೆ.
ವಾಜಿರಾಬಾದ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ 670.3 ಅಡಿಯಿದ್ದು, ಸಾಮಾನ್ಯ ಮಟ್ಟಕ್ಕಿಂತ 3.5 ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆಯುಂಟಾಗಿದೆ ಎಂದು ಅತೀಶಿ ತಿಳಿಸಿದ್ದಾರೆ.
