ಹೊಸ ಓದು | ರಾಜ್ಯಗಳ ಸಂವಿಧಾನಾತ್ಮಕ ಸ್ವಾಯತ್ತತೆ ಕುರಿತ ಕೃತಿ ‘ಭಾರತ ಒಕ್ಕೂಟ ವ್ಯವಸ್ಥೆ’

Date:

ಡಾ. ಟಿ.ಆರ್. ಚಂದ್ರಶೇಖರ್ ಅವರ ಹೊಸ ಪುಸ್ತಕ ‘ಭಾರತ ಒಕ್ಕೂಟ ವ್ಯವಸ್ಥೆ’ ರಾಜ್ಯಗಳ ಸಂವಿಧಾನಾತ್ಮಕ ಸ್ವಾಯತ್ತತೆ ಕುರಿತು ವಿವರವಾಗಿ ತಿಳಿಸಿಕೊಡುವ ಕೃತಿ. ಈ ಕೃತಿಯ ಆಯ್ದ ಭಾಗ ಓದುಗರಿಗಾಗಿ…

ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ಮಸಿ ಬಳಿಯುತ್ತಿರುವ ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ, ಅದೇ ರೀತಿಯಲ್ಲಿ ದಕ್ಷಿಣ ಭಾರತ ರಾಜ್ಯಗಳಿಗೆ ಸಂಪನ್ಮೂಲವನ್ನು ವರ್ಗಾಯಿಸುವಲ್ಲಿ ತೀವ್ರ ಅನ್ಯಾಯ ಮಾಡುತ್ತಿದೆ. ಇದಕ್ಕೆ ಕರ್ನಾಟಕದ ನಿದರ್ಶನವನ್ನು ನೋಡಬಹುದು.

ಕರ್ನಾಟಕವು ತನ್ನ ವಿತ್ತೀಯ ವ್ಯವಹಾರಗಳನ್ನು ಅತ್ಯಂತ ಶಿಸ್ತುಬದ್ಧವಾಗಿ ನಿರ್ವಹಿಸುತ್ತಿರುವುದಕ್ಕೆ ಅದರ ಒಟ್ಟು ರಾಜಸ್ವ ಸ್ವೀಕೃತಿಯಲ್ಲಿ ರಾಜ್ಯ ಸ್ವಂತ ರಾಜಸ್ವದ ಪಾಲು 2017-18ರಲ್ಲಿ ಶೇ. 67.93 ರಷ್ಟಿದ್ದುದು 2024-25ರಲ್ಲಿ ಇದು ಶೇ. 77.28ಕ್ಕೇರಿರುವುದು ಸಾಕ್ಷಿಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಯಲ್ಲಿ ಒಕ್ಕೂಟ ತೆರಿಗೆಯಲ್ಲಿನ ಪಾಲು(ಹಣಕಾಸು ಆಯೋಗದ ಶಿಪ್ಪಾರಸ್ಸು) ಮತ್ತು ಸಹಾಯಾನುದಾನ 2017-18ರಲ್ಲಿ ಶೇ.32.07ರಷ್ಟಿದ್ದುದು 2024-25ರಲ್ಲಿ ಇದು ಶೇ. 22.72ಕ್ಕಿಳಿದಿದೆ.

ಕರ್ನಾಟಕಕ್ಕೆ 2017-18ರಲ್ಲಿ ಒಕ್ಕೂಟ ಸರ್ಕಾರ ನೀಡಿದ್ದ ಸಹಾಯಾನುದಾನ(ಗ್ರಾಂಟ್ಸ್ ಇನ್ ಏಡ್) ರೂ. 15,394 ಕೋಟಿ. ಇದು 2024-25ರಲ್ಲಿ ರೂ.15,299 ಕೋಟಿಯಾಗಿದೆ. ಅಂದರೆ ಕಳೆದ ಎಂಟು ವರ್ಷಗಳಲ್ಲಿ ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ನೀಡುತ್ತಿರುವ ಸಹಾಯಾನುದಾನವು ಏರಿಕೆಯಾಗಿಲ್ಲ. ಅದು ಸ್ಥಿರವಾಗಿದೆ. ಇದೇ ಅವಧಿಯಲ್ಲಿ ಒಕ್ಕೂಟ ಸರ್ಕಾರದ ಒಟ್ಟು ತೆರಿಗೆ ರಾಶಿ ಹಾಗೂ ಬಜೆಟ್ ಗಾತ್ರ ತೀವ್ರ ಏರಿಕೆ ಕಂಡಿದೆ. ಆದರೆ ಕರ್ನಾಟಕಕ್ಕೆ ಸಹಾಯಾನುದಾನ ಮಾತ್ರ ಏರಿಕೆಯಾಗಿಲ್ಲ ಇದು ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ. ಇದೇ ರೀತಿಯಲ್ಲಿ ಸಮೃದ್ಧವಾಗಿ ಆರ್ಥಿಕ ಬೆಳವಣಿಗೆ ಸಾಧಿಸಿಕೊಂಡಿರುವ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೂ ಒಕ್ಕೂಟ ಸರ್ಕಾರವು ಅನ್ಯಾಯ – ತಾರತಮ್ಯ ಮಾಡುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬರ ಪರಿಹಾರ/ಪ್ರವಾಹ ಪರಿಹಾರದಲ್ಲಿಯೂ ರಾಜ್ಯಕ್ಕೆ ಅನ್ಯಾಯ

ಕರ್ನಾಟಕದಲ್ಲಿ 2020-21ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ಅಧಿಕಾರದಲ್ಲಿತ್ತು. ರಾಜ್ಯವು 2019ರಲ್ಲಿ ತೀವ್ರ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿತ್ತು. ಮುಖ್ಯಮಂತ್ರಿ ಅವರು 2020-21ರ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿರುವಂತೆ ಪ್ರವಾಹದಿಂದ ರಾಜ್ಯಕ್ಕಾದ ನಷ್ಟ ರೂ. 35,160 ಕೋಟಿ ಎಂದು ಅಂದಾಜು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಒಕ್ಕೂಟ ಸರ್ಕಾರ ರಾಜ್ಯಕ್ಕೆ ನೀಡಿದ್ದ ಪ್ರವಾಹ ಪರಿಹಾರ ರೂ.1,869 ಕೋಟಿ. ತೀವ್ರ ಪ್ರಹಾಹದಿಂದಾಗಿ ಸುಮಾರು ಏಳು ಲಕ್ಷ ಜನರ ಬದುಕು ಮೂರಾಬಟ್ಟೆಯಾಗಿತ್ತು. ಒಕ್ಕೂಟ ಸರ್ಕಾರ ಸೂಕ್ತವಾಗಿ ಇದಕ್ಕೆ ಸ್ಪಂದಿಸಲಿಲ್ಲ. ಪ್ರಸ್ತುತ ರಾಜ್ಯವು ತೀವ್ರ ಬರಗಾಲವನ್ನು ಎದುರಿಸುತ್ತಿದೆ. ರಾಜ್ಯ ಸರ್ಕಾರವು ಬರ ಪರಿಹಾರ ರೂ.18,172 ಕೋಟಿಯನ್ನು ಒಕ್ಕೂಟ ಸರ್ಕಾರವನ್ನು ಕೇಳುತ್ತಿದೆ. ರಾಜ್ಯದ 240 ತಾಲ್ಲೂಕುಗಳಲ್ಲಿ 232 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ವಿಪತ್ತಿಗೆ ಒಕ್ಕೂಟ ಸೂಕ್ತವಾಗಿ ಸ್ಪಂದಿಸಿಲ್ಲ. ರಾಜ್ಯ – ರಾಜ್ಯದ 6.5 ಕೋಟಿ ಜನರು ತೀವ್ರ ಪ್ರಕೃತಿ ವಿಕೋಪಕ್ಕೆ ತುತ್ತಾದಾಗ ಒಕ್ಕೂಟ ಸರ್ಕಾರವು ಅದರ ನೆರವಿಗೆ ನಿಲ್ಲಬೇಕು. ಇದು ಸಂವಿಧಾನಾತ್ಮಕ ಕರ್ತವ್ಯ ಮಾತ್ರವಲ್ಲ. ಇದೊಂದು ನೈತಿಕ ಜವಾಬ್ದಾರಿ. ಆದರೆ ಇಂದಿನ ಮೋದಿ ಸರ್ಕಾರ ರಾಜ್ಯಗಳ ಅಳಲಿಗೆ ಓಗೊಡುತ್ತಿಲ್ಲ

ತಾರತಮ್ಯ:  ರಾಜ್ಯದ ಪ್ರತಿಭಟನೆ

ಪ್ರಸ್ತುತ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಹಣಕಾಸು ಸಂಪನ್ಮೂಲ ವರ್ಗಾವಣೆಯಲ್ಲಿ ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವ ತಾರತಮ್ಯವನ್ನು ವಿರೋಧಿಸಿ ಫೆಬ್ರ್ರುವರಿ 8, 2024ರಂದು ದೆಹಲಿಯ ಜಂತರ್-ಮಂತರ್ ನಲ್ಲಿ ಪ್ರತಿಭಟನೆ ನಡೆಸಿದೆ. ಈ ಸಂದರ್ಭದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ರಾಜ್ಯವು 2017ರಿಂದ ಒಕ್ಕೂಟ ಸರ್ಕಾರದಿಂದ ರೂ.1.87 ಲಕ್ಷ ಕೋಟಿ ಸಂಪನ್ಮೂಲ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಆರೋಪಿಸುತ್ತಿದ್ದಾರೆ. ಈ ರೂ.1.87 ಲಕ್ಷ ಕೋಟಿಯಲ್ಲಿನ ಅಂಶಗಳು ಇವು:

  1. ಸರಕು-ಸೇವಾ ತೆರಿಗೆಯನ್ನು ಜಾರಿಗೊಳಿಸಿದಾಗ ಅದರಿಂದ ರಾಜ್ಯಗಳಿಗೆ ನಷ್ಟ ಉಂಟಾದರೆ ಅದಕ್ಕೆ ಪರಿಹಾರವನ್ನು ಐದು ವರ್ಷಗಳ ಕಾಲ (2017-2022)ನೀಡುವುದಾಗಿ ಒಕ್ಕೂಟ ಸರ್ಕಾರ ಕಾಯಿದೆಯ ಮೂಲಕ ಭರವಸೆ ನೀಡಿತ್ತು. ಆದರೆ ರಾಜ್ಯಗಳು ಜಿಎಸ್ಟಿ ಬಾಬ್ತು ಇಂದೂ ನಷ್ಟ ಅನುಭವಿಸುತ್ತಿವೆ. ಆದರೆ ಒಕ್ಕೂಟವು ಜಿಎಸ್ಟಿ ಪರಿಹಾರ ನೀಡುವುದನ್ನು 2022ರ ಜೂನ್ ನಲ್ಲಿ ನಿಲ್ಲಿಸಿದೆ. ಇದರಿಂದ ರಾಜ್ಯವು 2022-23 ಮತ್ತು 2023-24 ಸಾಲುಗಳಲ್ಲಿ ಕಳೆದುಕೊಂಡ ಸಂಪನ್ಮೂಲ ರೂ. 59,294 ಕೋಟಿ.
  2. 15ನೆಯ ಹಣಕಾಸು ಆಯೋಗವು ಹಂಚಿಕೊಳ್ಳುವ ತೆರಿಗೆ ರಾಶಿಯಲ್ಲಿನ ರಾಜ್ಯದ ಪಾಲು ಶೇ. 4.71 ರಷ್ಟಿದ್ದುದನ್ನು ಶೇ. 3.64ಕ್ಕಿಳಿಸಿದೆ. ಇದರಿಂದ ರಾಜ್ಯ ಕಳೆದುಕೊಂಡ ಸಂಪನ್ಮೂಲ ರೂ. 62098 ಕೋಟಿ.
  3. ಒಕ್ಕೂಟ ಸರ್ಕಾರವು ಮೇಲು ತೆರಿಗೆ ಮತ್ತು ಉಪತೆರಿಗೆ ಮೂಲಕ 2017-18ರಿಂದ 2023-24ರಲ್ಲಿ ಎಲ್ಲ ರಾಜ್ಯಗಳಿಂದ ರೂ. 27,66,585 ಕೋಟಿ ತೆರಿಗೆ ಸಂಗ್ರಹಿಸಿದೆ. ಈ ತೆರಿಗೆಗಳು ಹಂಚಿಕೊಳ್ಳುವ ತೆರಿಗೆ ರಾಶಿಯಲ್ಲಿಲ್ಲ. ಇದರಿಂದಾಗಿ ರಾಜ್ಯವು 2020-21ರಿಂದ 2025-26ರಲ್ಲಿ ಕಳೆದುಕೊಂಡ ಸಂಪನ್ಮೂಲ ರೂ. 55,000 ಕೋಟಿ.
  4. ತೆರಿಗೆ ರಾಶಿಯಲ್ಲಿನ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಕಡಿತವಾಗಿರುವುದಮ್ಮು ಗಮನಿಸಿ 15ನೆಯ ಹಣಕಾಸು ಆಯೋಗವು ರಾಜ್ಯಕ್ಕೆ ವಿಶೇಷ ಅನುದಾನ ರೂ. 5495 ಕೋಟಿ ಶಿಫಾರಸ್ಸು ಮಾಡಿತ್ತು. ಆದರೆ ಇದನ್ನು ಒಕ್ಕೂಟ ಸರ್ಕಾರ ನೀಡಲಿಲ್ಲ.
  5. ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ರಾಜ್ಯ ನಿರ್ದಿಷ್ಟ ಅನುದಾನ ರೂ. 6,000 ಕೋಟಿಯನ್ನೂ ಅದು ನೀಡಿಲ್ಲ.

ಹೀಗೆ ಒಟ್ಟು ಕರ್ನಾಟಕವು ರೂ. 1.87 ಲಕ್ಷ ಕೋಟಿ ಹಣವನ್ನು ಒಕ್ಕೂಟ ಸರ್ಕಾರ ತಾರತಮ್ಯ ನೀತಿಯಿಂದಾಗಿ ಕಳೆದುಕೊಂಡಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು

ಒಕ್ಕೂಟ ಸರ್ಕಾರವು ಕರ್ನಾಟಕದ ಕಲ್ಯಾಣ ಕಾರ್ಯಕ್ರಮಗಳಿಗೆ(ಐದು ಗ್ಯಾರಂಟಿಗಳು) ಹಣ ನಿಡುತ್ತಾ ಖಜಾನೆಯನ್ನು ಖಾಲಿ ಮಾಡಿಕೊಳ್ಳುತ್ತಿದೆ. ಇದರಿಂದಾಗಿ ಅನವಶ್ಯಕವಾಗಿ ಒಕ್ಕೂಟ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿದೆ. ಒಕ್ಕೂಟ ಹಣಕಾಸು ವರ್ಗಾವಣೆ ತತ್ವಕ್ಕೆ ಸಂಬಂಧಿಸಿದ ಕರ್ನಾಟಕದ ಆರೋಪವನ್ನು ಅದರ ಹಣಕಾಸು ನಿರ್ವಹಣೆ ಬಗ್ಗೆ ಪ್ರಶ್ನೆಯನ್ನೆತ್ತಿ ತಪ್ಪಿಸಿಕೊಳ್ಳುವುದು ಸರಿಯಾದ ನಿಲುವಲ್ಲ. ಕರ್ನಾಟಕ ಸರ್ಕಾರವು ತಾನು ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಆಶ್ವಾಸನೆಗಳನ್ನು ಪೂರೈಸುತ್ತಿದೆ. ಇವು ಆರ್ಥಿಕ ಕಾರ್ಯಕ್ರಮಗಳೇ ವಿನಾ ನರೇಂದ್ರ ಮೋದಿ ಅವರು ಹೇಳುತ್ತಿರುವಂತೆ ‘ರೇವ್ಡಿ’ ಹಂಚಿಕೆಯಲ್ಲ. ಇಂತಹ ಜನ ಕಲ್ಯಾಣ ಕಾರ್ಯಕ್ರಮಗಳ/ಸಾಮಾಜಿಕ ನ್ಯಾಯ ಕಾರ್ಯಕ್ರಮಗಳ ಮೂಲಕ ಕರ್ನಾಟಕವನ್ನು ಸೇರಿಸಿಕೊಂಡು ಇಡೀ ದಕ್ಷಿಣ ಭಾರತದ ರಾಜ್ಯಗಳು ಆರ್ಥಿಕ ಬೆಳವಣಿಗೆ – ಆರ್ಥಿಕ ಅಭಿವೃದ್ಧಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿವೆ. ಒಕ್ಕೂಟ ಹಣಕಾಸು ವರ್ಗಾವಣೆ ತತ್ವವನ್ನು ಒಕ್ಕೂಟ ಸರ್ಕಾರ ಸೂಕ್ತವಾಗಿ ಪಾಲಿಸಬೇಕು. ಇದು ಸಂವಿಧಾನಾತ್ಮಕ ಜವಾಬ್ದಾರಿ. ಒಕ್ಕೂಟವು ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.

ಕರ್ನಾಟಕವು ತನ್ನ ವಿತ್ತೀಯ ನಿರ್ವಹಣೆಯನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದೆ. ಉದಾ: ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯಿದೆ ಪ್ರಕಾರ ರಾಜ್ಯದ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ. 3ರ ಒಳಗಿರಬೇಕು. ರಾಜ್ಯದಲ್ಲಿ 2024-25ರಲ್ಲಿನ ಬಜೆಟ್ ಅಂದಾಜಿನ ಪ್ರಕಾರ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ. 2.95ರಷ್ಟಿದೆ. ಇದೇ ರೀತಿಯಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆಯು(ಸಾರ್ವಜನಿಕ ಸಾಲ) 2024-25ರಲ್ಲಿ ಜಿಎಸ್ಡಿಪಿಯ ಶೇ. 23.68ರಷ್ಟಿದೆ. ನಿಯಮದ ಪ್ರಕಾರ ಇದು ಶೇ. 25 ಮೀರಬಾರದು. ರೆವಿನ್ಯೂ ಖಾತೆಯಲ್ಲಿನ ಕೊರತೆಯು ಮಾತ್ರ ನಿಯಮಕ್ಕೆ ವಿರುದ್ಧವಾಗಿ ಅತಿ ಹೆಚ್ಚಾಗಿದೆ. ಇದನ್ನು ರಾಜ್ಯ ಸರಿಪಡಿಸಿಕೊಳ್ಳಬೇಕು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪ್ಪಟ ಕನ್ನಡತಿ ಅಪರ್ಣಾ | ಶುದ್ಧ, ಅಶುದ್ಧ ಅನ್ನೋದು ಭಾಷಾ ಭಯೋತ್ಪಾದನೆ

ನಿರೂಪಕಿ, ನಟಿ ಅಪರ್ಣಾ ಮೊನ್ನೆ ತೀರಿ ಹೋದಾಗ ಆಕೆಗೆ ಐವತ್ತೇಳರ ಹರೆಯ...

ಬಸವರಾಜ ರಾಯರೆಡ್ಡಿ ಮಾಹಿತಿ ತಿಳಿದುಕೊಂಡು ಮಾತನಾಡಲಿ: ದಿನೇಶ್ ಗೂಳಿಗೌಡ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂಬ ಮುಖ್ಯಮಂತ್ರಿಗಳ ಆರ್ಥಿಕ...

ಬಾಲ್ಯ ವಿವಾಹ | ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಳವಳ

ಬಾಲ್ಯ ವಿವಾಹ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ದುರದೃಷ್ಟಕರ...

ಉಪಚುನಾವಣೆ ಫಲಿತಾಂಶ | 13ರ ಪೈಕಿ 10ರಲ್ಲಿ ಗೆದ್ದ ‘ಇಂಡಿಯಾ’; ಎನ್‌ಡಿಎಗೆ ಕೇವಲ 2 ಸ್ಥಾನ

ಲೋಕಸಭಾ ಚುನಾವಣೆಯಲ್ಲಿನ ಪ್ರಬಲ ಪ್ರದರ್ಶನವನ್ನು ಮುಂದುವರೆಸಿರುವ 'ಇಂಡಿಯಾ' ಮೈತ್ರಿಕೂಟ ಏಳು ರಾಜ್ಯಗಳ...