‘ಎಕ್ಸಿಟ್ ಪೋಲ್ ಅಲ್ಲ, ಇದು ಮೋದಿ ಸಮೀಕ್ಷೆ’: ರಾಹುಲ್ ಗಾಂಧಿ

Date:

Advertisements

ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಜೂನ್ 1ರಂದು ಮುಗಿದಿದ್ದು, ಈ ಬೆನ್ನಲ್ಲೇ, ಮತಗಟ್ಟೆ ಸಮೀಕ್ಷೆಗಳು ಆರಂಭವಾಗಿವೆ. ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, “ಇದು ಮೋದಿ ಪೋಲ್, ಇದರ ಹೆಸರು ಎಕ್ಸಿಟ್ ಪೋಲ್ ಅಲ್ಲ, ಇದು ‘ಮೋದಿ-ಮಾಧ್ಯಮ’ ಸಮೀಕ್ಷೆ. ಇದು ಅವರ ಫ್ಯಾಂಟಸಿ ಸಮೀಕ್ಷೆ, ಮೋದಿ ಸಮೀಕ್ಷೆ” ಎಂದು ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟಕ್ಕೆ ಎಷ್ಟು ಸೀಟುಗಳಿವೆ ಎಂದು ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ನೀವು ಸಿಧು ಮೂಸ್ ವಾಲಾ ಅವರ 295 ಹಾಡು ಕೇಳಿದ್ದೀರಾ? ಇಂಡಿಯಾ ಮೈತ್ರಿಕೂಟ 295 ಸ್ಥಾನಗಳನ್ನು ಪಡೆಯುತ್ತದೆ” ಎಂದಿದ್ದಾರೆ.

ಜೂನ್ 4 ರಂದು ನಡೆಯಲಿರುವ ಮತ ಎಣಿಕೆಗೆ ಮುನ್ನ ಸಿದ್ಧತೆಗಳನ್ನು ಪರಿಶೀಲಿಸಲು ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ನಾಯಕರು ಸೇರಿದ್ದರು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಜನರ ಪ್ರತಿಕ್ರಿಯೆಯ ನಂತರ ಇಂಡಿಯಾ ಒಕ್ಕೂಟಕ್ಕೆ 295ಗೂ ಹೆಚ್ಚು ಸ್ಥಾನಗಳು ಬರಲಿವೆ ಎಂದು ಹೇಳಿದ್ದಾರೆ.

Advertisements

“ಇಂಡಿಯಾ ಒಕ್ಕೂಟ 295ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ. ನಮ್ಮ ಎಲ್ಲ ನಾಯಕರೊಂದಿಗೆ ಮಾತನಾಡಿದ ನಂತರ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ” ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಇದು ಜನರ ಸಮೀಕ್ಷೆ. ಜನರು ಈ ಮಾಹಿತಿಯನ್ನು ನಮ್ಮ ನಾಯಕರಿಗೆ ನೀಡಿದ್ದಾರೆ. ಸರ್ಕಾರಿ ಸಮೀಕ್ಷೆಗಳು ಇವೆ ಮತ್ತು ಅವರ ಮಾಧ್ಯಮ ಮಿತ್ರರು ಸಹ ಅಂಕಿಅಂಶಗಳನ್ನು ಹಿಗ್ಗಿಸಿ ಅದನ್ನು ಹೊರಹಾಕುತ್ತಾರೆ. ಆದ್ದರಿಂದ, ನಾವು ನಿಮಗೆ ವಾಸ್ತವದ ಬಗ್ಗೆ ಹೇಳಲು ಬಯಸುತ್ತೇವೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಆರಂಭವಾದ ಮಳೆ ಆರ್ಭಟ; ಮತ್ತೆ ಪ್ರವಾಹದ ಹಾದಿ ಹಿಡಿದ ಬೆಂಗಳೂರು

ಆಕ್ಸಿಸ್ ಮೈ ಇಂಡಿಯಾದ ಎಕ್ಸಿಟ್ ಪೋಲ್‌ಗಳು ಎನ್‌ಡಿಎ 361 ರಿಂದ 401 ಸೀಟುಗಳ ಅಂತರದಲ್ಲಿ ಭಾರಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 131-166 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಎಕ್ಸಿಟ್ ಪೋಲ್ ದುರ್ಬಳಕೆಯಾಗಿದೆ. ಗೋದಿ ಮೀಡಿಯಾಗಳು ಸತ್ಯಕ್ಕಿಂತ ಜಾಸ್ತಿ ಸುಳ್ಳು ಹೇಳುತ್ತಿವೆ. ಹಣದ ಅಮಿಷಕ್ಕೆ ಮಾಧ್ಯಮಗಳು ಬಲಿಯಾಗುತ್ತಿವೆ. ಜನರ ವಿಶ್ವಾಸವನ್ನು ಮಾಧ್ಯಮಗಳು ಕಳೆದುಕೊಳ್ಳುತ್ತಿದೆ.
    ಜನ ಧ್ವನಿ , ಜನರ ನಾಡಿ ಮಿಡಿತ , ಉತ್ತಮ ಸಮಾಜಕ್ಕಾಗಿ , Nation wants to know the truth ಎಂಬಿತ್ಯಾದಿ ಘೋಷಣೆಗಳೊಂದಿಗೆ ವೀಕ್ಷಕರನ್ನು ನಂಬಿಸಿ ರಂಜಿಸಿ ಅವರ ತಲೆ ಹಾಳು ಮಾಡುವ , ಗಲಭೆಗೆ ಪ್ರಚೋದನೆ ಕೊಡುವ ಪ್ರವೃತ್ತಿಯನ್ನು ಮಾಧ್ಯಮಗಳು ನಿಲ್ಲಿಸಬೇಕು. ಮಾಧ್ಯಮಗಳು ಸತ್ಯದ ಪರವಾಗಿರಬೇಕು. ಅನ್ಯಾಯವನ್ನು ಖಂಡಿಸಬೇಕು. ನಿರ್ಭೀತವಾಗಿ ಕಾರ್ಯನಿರ್ವಹಿಸಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X