ಲೋಕಸಭೆ ಚುನಾವಣೆಯಲ್ಲಿ ಚಾರ್ ಸೋ ಪಾರ್ (400ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲುವು) ಸಾಧಿಸುವುದಾಗಿ ಹೇಳಿಕೊಂಡು ಬಂದ ಬಿಜೆಪಿಗೆ 300ರ ಗಡಿ ದಾಟಲು ಕೂಡ ಸಾಧ್ಯವಾಗದಿರುವುದನ್ನು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಲೇವಡಿ ಮಾಡಿದ್ದು ಇಂಡಿಯಾ ಒಕ್ಕೂಟದ ಸಾಧನೆಗೆ ಯೂಟ್ಯೂಬರ್‌ಗಳಿಗೆ ಕ್ರೆಡಿಟ್ ನೀಡಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಶಾಂತ್ ಭೂಷಣ್, “ಇಂಡಿಯಾ ಮೈತ್ರಿಕೂಟಕ್ಕಿಂತ ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ, ಈ ಫಲಿತಾಂಶವು ಎನ್‌ಡಿಎಗೆ ಸೋಲಾಗಿದೆ. ಚಾರ್ ಸೋ ಪಾರ್ ಎಂದು ಹೇಳಿಕೊಂಡವರು 300ಕ್ಕೂ ಕಡಿಮೆ ಸ್ಥಾನವನ್ನು ಪಡೆದುಕೊಂಡಿದ್ದಾರೆ” ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಎಲೆಕ್ಟೋರಲ್ ಬಾಂಡ್ ಸಮಗ್ರ ತನಿಖೆಗೆ ಎಸ್‌ಐಟಿ ನೇಮಕ ಅಗತ್ಯ: ಪ್ರಶಾಂತ್ ಭೂಷಣ್
“ಆದರೆ ಇಂಡಿಯಾ ಒಕ್ಕೂಟ ಯಾವ ಸ್ಥಿತಿಯಲ್ಲಿ ಸ್ಪರ್ಧಿಸಿದೆ ನೋಡಿ. ಬಿಜೆಪಿ ಬಳಿ ಇರುವ ಶೇ 10ರಷ್ಟು ಹಣವೂ ಅವರ ಬಳಿ ಇರಲಿಲ್ಲ. ಅವರ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿತ್ತು. ಅವರ ನಾಯಕರನ್ನು ಬಂಧಿಸಲಾಗಿತ್ತು. ವಾಸ್ತವವಾಗಿ ಇಡೀ ಮುಖ್ಯವಾಹಿನಿ ಮಾಧ್ಯಮಗಳು ಬಿಜೆಪಿಯ ಪ್ರಚಾರದ ಭಾಗವಾಗಿತ್ತು” ಎಂದು ದೂರಿದ್ದಾರೆ.
Though the NDA got more seats than INDIA Alliance, yet this result is a defeat for NDA. They claimed 400 paar, but fell below 300 & BJP fell well short of a majority.
See the odds against which the INDIA alliance contested. They didn’t even have 10% of money that BJP had. Their…— Prashant Bhushan (@pbhushan1) June 5, 2024
“ಭಾರತದ ಚುನಾವಣಾ ಆಯೋಗ ಕೂಡ ಪಕ್ಷಪಾತಿಯಾಗಿ, ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡಿತ್ತು. ಬಹುತೇಕ ನ್ಯಾಯಾಂಗ ಸೇರಿದಂತೆ ಬಹುತೇಕ ಎಲ್ಲ ಸಂಸ್ಥೆಗಳೂ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿವೆ. ಬಿಜೆಪಿಯ ದವಡೆಯಿಂದ ವಿಜಯವನ್ನು ಕಿತ್ತುಕೊಳ್ಳುವುದೇ ಪ್ರತಿಪಕ್ಷಗಳ ಪಾಲಿಗೆ ದೊಡ್ಡ ಸಾಧನೆ” ಎಂದು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? 5 ರಾಜ್ಯಗಳ ಚುನಾವಣೆಯನ್ನು ಮುಂದೂಡುವುದೇ ‘ಒಂದು ರಾಷ್ಟ್ರ ಒಂದು ಚುನಾವಣೆ’ ಗುರಿ: ಪ್ರಶಾಂತ್ ಭೂಷಣ್
ಧ್ರುವ್ ರಾಠೆ ಸೇರಿ, ಹಲವಾರಿಗೆ ಶ್ರೇಯಸ್ಸು
“ಇವೆಲ್ಲವು ಭಾರತದ ಪ್ರಮುಖ ನಾಯಕರುಗಳಾದ ರಾಹುಲ್, ಪ್ರಿಯಾಂಕಾ, ಅಖಿಲೇಶ್, ಮಮತಾ, ತೇಜಸ್ವಿಯಿಂದ ಸಾಧ್ಯವಾಯಿತು. ಹಾಗೆಯೇ ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ರವೀಶ್, ಧ್ರುವ್, ಅಜಿತ್ ಅಂಜುಮ್, ಆಕಾಶ್ ಬ್ಯಾನರ್ಜಿ, ಪುಣ್ಯ ಪ್ರಸೂನ್, ಮಿಸ್ ಮೆಡುಸಾ, ನೇಹಾ ಸಿಂಗ್ ರಾಥೋಡ್, ರಾಂಟಿಂಗ್ ಗೋಲಾ, ಸಾಕ್ಷಿ ಜೋಶಿ ಅವರ ವೀರೋಚಿತ ಪ್ರಯತ್ನಗಳಿಂದ ಇದು ಸಾಧ್ಯವಾಯಿತು. ಹಾಗೆಯೇ ಯೂಟ್ಯೂಬ್ ಚಾನೆಲ್‌ಗಳಾದ ಡಿಬಿ ನ್ಯೂಸ್, 4 ಪಿಎಂ ನ್ಯೂಸ್‌ನಿಂದಾಗಿ ಇದು ಸಾಧ್ಯವಾಗಿದೆ. ಸಾಮಾಜಿಕ ಮಾಧ್ಯಮ ಪ್ರಭಾವಿ ಜುಬೈರ್ ಮತ್ತು ಇತರರ ಕೊಡುಗೆಯೂ ಇದೆ” ಎಂದು ಹೇಳಿದ್ದಾರೆ.
“ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಒಗ್ಗೂಡಿದ ಅನೇಕ ತಿಳಿದ, ತೆರೆಮರೆಯ ಹಿರೋಗಳು ಜೊತೆಯಾಗಿದ್ದಾರೆ. ನಾವೆಲ್ಲರೂ ಈ ಕ್ಷಣವನ್ನು ಸವಿಯೋಣ ಮತ್ತು ಆಚರಿಸೋಣ” ಎಂದು ತಿಳಿಸಿದ್ದಾರೆ.
Really Amazing sir your right