ಬಿಜೆಪಿಯ ಚಾರ್‌ ಸೋ ಪಾರ್ ಕನಸು ಭಗ್ನ: ಯೂಟ್ಯೂಬರ್‌ಗಳಿಗೆ ‘ಕ್ರೆಡಿಟ್’ ನೀಡಿದ ಪ್ರಶಾಂತ್ ಭೂಷಣ್

Date:

ಲೋಕಸಭೆ ಚುನಾವಣೆಯಲ್ಲಿ ಚಾರ್‌ ಸೋ ಪಾರ್ (400ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲುವು) ಸಾಧಿಸುವುದಾಗಿ ಹೇಳಿಕೊಂಡು ಬಂದ ಬಿಜೆಪಿಗೆ 300ರ ಗಡಿ ದಾಟಲು ಕೂಡ ಸಾಧ್ಯವಾಗದಿರುವುದನ್ನು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಲೇವಡಿ ಮಾಡಿದ್ದು ಇಂಡಿಯಾ ಒಕ್ಕೂಟದ ಸಾಧನೆಗೆ ಯೂಟ್ಯೂಬರ್‌ಗಳಿಗೆ ಕ್ರೆಡಿಟ್ ನೀಡಿದ್ದಾರೆ.

- Advertisement -

ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಶಾಂತ್ ಭೂಷಣ್, “ಇಂಡಿಯಾ ಮೈತ್ರಿಕೂಟಕ್ಕಿಂತ ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ, ಈ ಫಲಿತಾಂಶವು ಎನ್‌ಡಿಎಗೆ ಸೋಲಾಗಿದೆ. ಚಾರ್‌ ಸೋ ಪಾರ್ ಎಂದು ಹೇಳಿಕೊಂಡವರು 300ಕ್ಕೂ ಕಡಿಮೆ ಸ್ಥಾನವನ್ನು ಪಡೆದುಕೊಂಡಿದ್ದಾರೆ” ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಇದನ್ನು ಓದಿದ್ದೀರಾ?  ಎಲೆಕ್ಟೋರಲ್‌ ಬಾಂಡ್ ಸಮಗ್ರ ತನಿಖೆಗೆ ಎಸ್‌ಐಟಿ ನೇಮಕ ಅಗತ್ಯ: ಪ್ರಶಾಂತ್ ಭೂಷಣ್

“ಆದರೆ ಇಂಡಿಯಾ ಒಕ್ಕೂಟ ಯಾವ ಸ್ಥಿತಿಯಲ್ಲಿ ಸ್ಪರ್ಧಿಸಿದೆ ನೋಡಿ. ಬಿಜೆಪಿ ಬಳಿ ಇರುವ ಶೇ 10ರಷ್ಟು ಹಣವೂ ಅವರ ಬಳಿ ಇರಲಿಲ್ಲ. ಅವರ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿತ್ತು. ಅವರ ನಾಯಕರನ್ನು ಬಂಧಿಸಲಾಗಿತ್ತು. ವಾಸ್ತವವಾಗಿ ಇಡೀ ಮುಖ್ಯವಾಹಿನಿ ಮಾಧ್ಯಮಗಳು ಬಿಜೆಪಿಯ ಪ್ರಚಾರದ ಭಾಗವಾಗಿತ್ತು” ಎಂದು ದೂರಿದ್ದಾರೆ.

“ಭಾರತದ ಚುನಾವಣಾ ಆಯೋಗ ಕೂಡ ಪಕ್ಷಪಾತಿಯಾಗಿ, ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡಿತ್ತು. ಬಹುತೇಕ ನ್ಯಾಯಾಂಗ ಸೇರಿದಂತೆ ಬಹುತೇಕ ಎಲ್ಲ ಸಂಸ್ಥೆಗಳೂ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿವೆ. ಬಿಜೆಪಿಯ ದವಡೆಯಿಂದ ವಿಜಯವನ್ನು ಕಿತ್ತುಕೊಳ್ಳುವುದೇ ಪ್ರತಿಪಕ್ಷಗಳ ಪಾಲಿಗೆ ದೊಡ್ಡ ಸಾಧನೆ” ಎಂದು ಅಭಿಪ್ರಾಯಿಸಿದ್ದಾರೆ.

ಇದನ್ನು ಓದಿದ್ದೀರಾ?  5 ರಾಜ್ಯಗಳ ಚುನಾವಣೆಯನ್ನು ಮುಂದೂಡುವುದೇ ‘ಒಂದು ರಾಷ್ಟ್ರ ಒಂದು ಚುನಾವಣೆ’ ಗುರಿ: ಪ್ರಶಾಂತ್ ಭೂಷಣ್

ಧ್ರುವ್ ರಾಠೆ ಸೇರಿ, ಹಲವಾರಿಗೆ ಶ್ರೇಯಸ್ಸು

ಪ್ರಶಾಂತ್ ಭೂಷಣ್

“ಇವೆಲ್ಲವು ಭಾರತದ ಪ್ರಮುಖ ನಾಯಕರುಗಳಾದ ರಾಹುಲ್, ಪ್ರಿಯಾಂಕಾ, ಅಖಿಲೇಶ್, ಮಮತಾ, ತೇಜಸ್ವಿಯಿಂದ ಸಾಧ್ಯವಾಯಿತು. ಹಾಗೆಯೇ ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ರವೀಶ್, ಧ್ರುವ್, ಅಜಿತ್ ಅಂಜುಮ್, ಆಕಾಶ್ ಬ್ಯಾನರ್ಜಿ, ಪುಣ್ಯ ಪ್ರಸೂನ್, ಮಿಸ್ ಮೆಡುಸಾ, ನೇಹಾ ಸಿಂಗ್ ರಾಥೋಡ್, ರಾಂಟಿಂಗ್ ಗೋಲಾ, ಸಾಕ್ಷಿ ಜೋಶಿ ಅವರ ವೀರೋಚಿತ ಪ್ರಯತ್ನಗಳಿಂದ ಇದು ಸಾಧ್ಯವಾಯಿತು. ಹಾಗೆಯೇ ಯೂಟ್ಯೂಬ್‌ ಚಾನೆಲ್‌ಗಳಾದ ಡಿಬಿ ನ್ಯೂಸ್, 4 ಪಿಎಂ ನ್ಯೂಸ್‌ನಿಂದಾಗಿ ಇದು ಸಾಧ್ಯವಾಗಿದೆ. ಸಾಮಾಜಿಕ ಮಾಧ್ಯಮ ಪ್ರಭಾವಿ ಜುಬೈರ್ ಮತ್ತು ಇತರರ ಕೊಡುಗೆಯೂ ಇದೆ” ಎಂದು ಹೇಳಿದ್ದಾರೆ.

“ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಒಗ್ಗೂಡಿದ ಅನೇಕ ತಿಳಿದ, ತೆರೆಮರೆಯ ಹಿರೋಗಳು ಜೊತೆಯಾಗಿದ್ದಾರೆ. ನಾವೆಲ್ಲರೂ ಈ ಕ್ಷಣವನ್ನು ಸವಿಯೋಣ ಮತ್ತು ಆಚರಿಸೋಣ” ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪತ್ರಕರ್ತರು, ನಾಗರಿಕರ ವಿರುದ್ಧ ವಿಶೇಷಾಧಿಕಾರ ಅಸ್ತ್ರ ಬೇಡ: ಸುಪ್ರೀಂಗೆ CPIM ನಾಯಕಿ ಸುಭಾಷಿಣಿ ಅಲಿ ಮನವಿ

ಶಾಸಕಾಂಗವನ್ನು ಟೀಕಿಸಿದ ಮಾತ್ರಕ್ಕೆ ಸಂಸತ್ ಸದಸ್ಯರಲ್ಲದ ನಾಗರಿಕರು ಅಥವಾ ಪತ್ರಕರ್ತರ ವಿರುದ್ಧ...

3,000 ಮದರಸಾಗಳ ನಿರ್ವಹಣೆ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಹೈಕೋರ್ಟ್‌ ಸೂಚನೆ

ರಾಜಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 3,000 ಮದರಸಾಗಳ ಪರಿಣಾಮಕಾರಿ ನಿರ್ವಹಣೆ, ಮೇಲ್ವಿಚಾರಣೆ ಹಾಗೂ...

ದ್ವೇಷಭಾಷಣ ಆರೋಪ: TMC ಸಂಸದೆ ಮಹುವಾ ಮೊಯಿತ್ರಾಗೆ ಬಂಧನದಿಂದ ಮುಕ್ತಿ; ಕ್ಷೇತ್ರ ಭೇಟಿ ವೇಳೆ ಭದ್ರತೆ ನೀಡಲು ಹೈಕೋರ್ಟ್‌ ಸೂಚನೆ

ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಗಾಳದ ಟಿಎಂಸಿ...