ಎನ್‌ಡಿಎ ಸರ್ಕಾರ ಐದು ವರ್ಷ ಉಳಿಯಲ್ಲ: ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್

Date:

Advertisements

ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರವನ್ನು ಸ್ವೀಕರಿಸಿ ಎರಡು ದಿನಗಳು ಆಗುತ್ತಿದ್ದಂತೆ “ಎನ್‌ಡಿಎ ಸರ್ಕಾರ ಐದು ವರ್ಷ ಉಳಿಯಲ್ಲ” ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಭವಿಷ್ಯ ನುಡಿದಿದ್ದಾರೆ.

ಸುದ್ದಿಸಂಸ್ಥೆಯ ಪಿಟಿಐ ಪ್ರಧಾನ ಕಚೇರಿಯಲ್ಲಿ ಸಂಪಾದಕರೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಗೌರವ್ ಗೊಗೊಯ್, “ಸಮ್ಮಿಶ್ರ ಎನ್‌ಡಿಎ ಸರ್ಕಾರವು ಪೂರ್ಣಾವಧಿಯಲ್ಲಿ ಉಳಿಯುವುದಿಲ್ಲ. ಮೋದಿ ಅವರ ನಾಯಕತ್ವದ ಶೈಲಿಯು ಅವರು ಐದು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ವಿಶ್ವಾಸ ಹುಟ್ಟಿಸಲ್ಲ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ?  ನೂತನ ಎನ್‌ಡಿಎ ಸರ್ಕಾರ| ಏಳು ಮಹಿಳೆಯರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

Advertisements

“ಇಂಡಿಯಾ ಒಕ್ಕೂಟವು 236 ಸಂಸದರನ್ನು ಹೊಂದಿದ್ದು ಎನ್‌ಡಿಎ ಸರ್ಕಾರವು ಮಸೂದೆಗಳನ್ನು ಬೇಕಾಬಿಟ್ಟಿ ಜಾರಿ ಮಾಡಲು ಸಾಧ್ಯವಿಲ್ಲ. ನಮ್ಮನ್ನು ಬೆದರಿಸಲು ಮತ್ತು ನಮ್ಮನ್ನು ಅಮಾನತುಗೊಳಿಸಲು ಸಾಧ್ಯವಿಲ್ಲ” ಎಂದಿದ್ದಾರೆ. “ಕಳೆದ ವರ್ಷ ಬಿಜೆಪಿ ಸರ್ಕಾರದವರು 146 ಸಂಸದರನ್ನು ಅಮಾನತುಗೊಳಿಸಿದ್ದರು. ಈ ಬಾರಿ 236 ಸಂಸದರನ್ನು ಅಮಾನತುಗೊಳಿಸುತ್ತಾರೆಯೇ” ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದರು.

ಎನ್‌ಡಿಎ ಮಿತ್ರಪಕ್ಷಗಳಾದ ಟಿಡಿಪಿಯ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಅವರು ಸರ್ಕಾರ ರಚನೆಯ ಸಂದರ್ಭದಲ್ಲಿ ಬಿಜೆಪಿಗೆ ಮಣಿದಿದ್ದಾರೆ ಎಂಬುವುದನ್ನು ತಳ್ಳಿಹಾಕಿದ ಗೊಗೊಯ್, “ಅತ್ಯಂತ ಚಾಣಾಕ್ಷ ರಾಜಕೀಯ ಮನಸ್ಸುಗಳನ್ನು ಅವರು ಹೊಂದಿದ್ದು, ಕಾಲ ಮಾತ್ರ ನಮಗೆ ಉತ್ತರ ನೀಡುತ್ತದೆ. ಈಗಲೇ ನಾವು ಅವರ ಉದ್ಧೇಶವನ್ನು ನಿರ್ಣಯಿಸಬಾರದು” ಎಂದರು.

ಇದನ್ನು ಓದಿದ್ದೀರಾ?  ಎನ್‌ಡಿಎ ನಾಯಕರ ಸಭೆ ಮುಕ್ತಾಯ: ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವಿರೋಧ ಆಯ್ಕೆ

“ಮೋದಿ ಪ್ರಧಾನಿಯಾಗುವವರೆಗೆ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿಯ ಧೋರಣೆ ಬದಲಾಗಬಹುದು ಎಂದು ನಿರೀಕ್ಷಿಸುವುದಿಲ್ಲ. ತಮ್ಮ ಪಕ್ಷದೊಳಗಿದ್ದರೂ ಅವರು ತಮ್ಮ ವಿಧಾನವನ್ನು ಬದಲಾಯಿಸುವ ನಮ್ಯತೆ ಹೊಂದಿಲ್ಲ. ಈಗಲೂ ಅವರ ಮಿತ್ರಪಕ್ಷಗಳು ವಿಶೇಷ ಸ್ಥಾನಮಾನ, ಜಾತಿ ಗಣತಿ, ಅಗ್ನಿಪಥ ಯೋಜನೆ ಹಿಂಪಡೆಯಲು ಒತ್ತಾಯಿಸುತ್ತಲೇ ಇರುತ್ತದೆ. ಆದರೆ ಮಿತ್ರಪಕ್ಷಗಳ ಬಗೆಗಿನ ಅವರ ಧೋರಣೆ ಬದಲಾಗುವುದಿಲ್ಲ” ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅಸ್ಸಾಂನ ಬಿಜೆಪಿ ಭದ್ರಕೋಟೆಯಾದ ಜೋರ್ಹತ್‌ನಿಂದ 1.44 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X