ಕೂಲಿ ಕೆಲಸಕ್ಕೆ ಬಂದಿದ್ದ ದೆಹಲಿ ನಿವಾಸಿ ಮುಹಮ್ಮದ್ ರಾಶಿದ್(18) ಎಂಬ ಯುವಕ ಅನಾರೋಗ್ಯದಿಂದಿದ್ದ ಕಾರಣ ಶಿವಮೊಗ್ಗ ಜಿಲ್ಲಾಸ್ಪತ್ರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಯುವಕನ ಕುಟುಂಬ ಕಡುಬಡತನದಿಂದಿರುವ ಕಾರಣ ಪೋಷಷಕರೂ ಕೂಡಾ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಈತನು ಕೆಲಸ ಹರಸಿ ಶಿವಮೊಗ್ಗ ಜಿಲ್ಲೆಗೆ ಬಂದು ಕೆಲಸ ಮಾಡಿಕೊಂಡು ಇದ್ದನು. ಅನಾರೋಗ್ಯದ ಕಾರಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದನು.
ಯುವಕನ ಮೃತದೇಹವನ್ನು 5 ದಿನದಿಂದ ಶವಾಗಾರದಲ್ಲಿ ಇರಿಸಲಾಗಿತ್ತು. ಬಳಿಕ ಜಮಾಅತೆ ಇಸ್ಲಾಮಿಕ್ ಹಿಂದ್ ಸಂಘಟನೆಗೆ ಈ ಕುರಿತು ಮಾಹಿತಿ ಬಂದ ಕೂಡಲೇ ಶವಾಗಾರಕ್ಕೆ ಆಗಮಿಸಿ ಮೃತ ಯುವಕನ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ.
ಯುವಕ ಮೃತಪಟ್ಟಿರುವ ಕುರಿತಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ವೈದ್ಯರು ಜಾಂಡೀಸ್ ಖಾಯಿಲೆಯಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಪ್ರೋಸೆಸ್ ನಡೆದ ಬಳಿಕ ಶವವನ್ನು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಿದ್ದಾರೆ. ನಂತರ ತಂದೆ ತಾಯಿ ಕೂಡ ಸ್ಥಳಕ್ಕೆ ಆಗಮಿಸಿ ಅಂತಿಮವಾಗಿ ಮಗನ ಮೃತದೇಹ ಅಂತಿಮವಾಗಿ ನೋಡಿದರು. ತಂದೆ ತಾಯಿ ಬಳಿ ಹಣವಿಲ್ಲದ ಪರಿಸ್ಥಿತಿ ಇದ್ದ ಕಾರಣ. ಜಮಾತೆ ಇಸ್ಲಾಮಿಕ್ ಹಿಂದ್ ಸಂಘಟನೆಯ ಭಾಗವಾದ ಎಚ್‌ಆರ್‌ಎಸ್ ಸಂಸ್ಥೆ ಮತ್ತು ಎಚ್‌ಕೆಜಿಎನ್ ಸಂಸ್ಥೆ ಅಂತ್ಯಸಂಸ್ಕಾರಕ್ಕೆ ಬೇಕಾದ ಆಂಬುಲೆನ್ಸ್ ವ್ಯವಸ್ಥೆ ಹಾಗೂ ಎಲ್ಲ ಖರ್ಚುವೆಚ್ಚಗಳನ್ನು ವಹಿಸಿಕೊಂಡು ದೊಡ್ಡಪೇಟೆ ಪೊಲೀಸ್ ಠಾಣೆ ಎದುರು ಇರುವ ಖಬರಸ್ಥಾನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.
ಎಚ್‌ಆರ್‌ಎಸ್(Humanitarian Relief Society) ಸಂಸ್ಥೆಯ ಮುಖ್ಯಸ್ಥರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಡು ಬಡವರಿಗೆ, ನಿರ್ಗತಿಕರಿಗೆ ಹಾಗೂ ಮಳೆಗಾಲದಲ್ಲಿ ಉಂಟಾಗುವ ಫ್ಲಡ್ ಸಮಸ್ಯೆ ಸೇರಿದಂತೆ ಯಾವುದೇ ರೀತಿಯ ಸಾಮಾಜಿಕ ಸಮಸ್ಯೆಗಳಿಗೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಯಾವ ಜಾತಿ ಭೇದವಿಲ್ಲದೆ ಹಣಾಪೇಕ್ಷೆ ಇಲ್ಲದೆ ನಮ್ಮ ಸಂಸ್ಥೆ ಸ್ಪಂದಿಸುತ್ತದೆ” ಎಂದು ತಿಳಿಸಿದರು.
“ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯನ್ನು ನಮ್ಮ ಸಂಸ್ಥೆ ಹೊಂದಿದೆ. ತುಂಬಾ ತೊಂದರೆಯಲ್ಲಿರುವವರು HRS Helpline +91 9845599823ಕ್ಕೆ ಸಂಪರ್ಕ ಮಾಡಿ ಸದುಪಯೋಗ ಪಡೆದುಕೊಳ್ಳಬಹುದು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೊಲೆ ಆರೋಪ; ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಇತರೆ ಆರೋಪಿಗಳು 5 ದಿನ ಪೋಲೀಸ್ ವಶಕ್ಕೆ
HKGN Helpline ಹೊಂದಿರುವ ಸಂಸ್ಥೆ ಮುಖ್ಯಸ್ಥ ಇರ್ಫಾನ್ ಮಾತನಾಡಿ, “ನಾವೂ ಕೂಡಾ ಬ್ಲಡ್ ಡೊನೇಷನ್ ಆಗಿರಬಹುದು ಅಥವಾ ಕಡುಬಡವರಿಗೆ ಏನಾದರೂ ಸಹಾಯ ಬೇಕಾದಲ್ಲಿ ನಮಗೆ ಸಂಪರ್ಕ ಮಾಡಬಹುದು. HKGN Helpline ನಂಬರ್ 9845112512ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು” ಎಂದು ತಿಳಿಸಿದ್ದಾರೆ.
HKGN ಸಂಸ್ಥೆ ಮುಖ್ಯಸ್ಥರು ವಾಸೀಮ್ ಮತ್ತು ತಂಡ, ಫಾರೂಕ್ ಶಂಶ, ಇಕ್ಬಾಲ್, ನಾಸಿರ್ ಖಾತೆಬ್, ಮನ್ಸೂರ್, ಅಜಜ್ ಇದ್ದರು.