ಭಾರತದಲ್ಲಿ ಮಾನವರಿಗೆ ಹಕ್ಕಿ ಜ್ವರ ಪ್ರಕರಣ: ದೃಢೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ

Date:

ಭಾರತದಲ್ಲಿ ಮಾನವರೊಬ್ಬರಿಗೆ ಮಂಗಳವಾರ(ಜೂ.12) ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ. ಪಶ್ಚಿಮ ಬಂಗಾಳದ 4 ವರ್ಷದ ಮಗುವಿಗೆ ಹೆಚ್‌9ಎನ್‌2 ವೈರಸ್‌ ಉಂಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

- Advertisement -

ವೈರಸ್‌ಗೆ ತುತ್ತಾಗಿರುವ ಮಗುವಿಗೆ ಗಂಭೀರ ಉಸಿರಾಟದ ಸಮಸ್ಯೆ ಉಂಟಾದ ನಂತರ ಮಕ್ಕಳ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಹೆಚ್‌9ಎನ್‌2 ವೈರಸ್‌ ಪ್ರಕರಣ ಮಾನವರಿಗೆ ಉಂಟಾದ ಎರಡನೇ ಪ್ರಕರಣವಾಗಿದ್ದು, ಈ ಮೊದಲು 2019ರಲ್ಲಿ ಮೊದಲು ವರದಿಯಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಜೂನ್‌ 7 ರಂದು ಹೆಚ್‌5ಎನ್‌1 ಹಕ್ಕಿ ಜ್ವರವಿರುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಆಸ್ಟ್ರೇಲಿಯಾದ ಐಸಿಯುವಿನಲ್ಲಿ ದಾಖಲಿಸಲಾಗಿತ್ತು. ಈ ಮಗುವಿನ ಕುಟುಂಬ ಇತ್ತೀಚಿಗಷ್ಟೆ ಭಾರತಕ್ಕೆ ಪ್ರಯಾಣ ಬೆಳೆಸಿತ್ತು.

ಹೆಚ್‌9ಎನ್‌2 ಹಕ್ಕಿ ಜ್ವರ ಹರಡುವಿಕೆ, ಲಕ್ಷಣಗಳು

ಹೆಚ್‌9ಎನ್‌2 ಹಕ್ಕಿ ಜ್ವರ ‘ಎ’ ಮಾದರಿ ವೈರಸ್‌ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರಾಣಿ, ಪಕ್ಷಿಗಳ ನಡುವೆ ಪಸರಿಸುತ್ತಾದರೂ, ಮಾನವರಿಗೂ ಹರಡುತ್ತದೆ. ವೈರಸ್‌ ಇರುವ ಪ್ರಾಣಿ, ಪಕ್ಷಿಗಳ ಮೂಲಕ ಸಂಪರ್ಕಕ್ಕೆ ಬರುವ ಮನುಷ್ಯರಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ವೈರಸ್‌ ಹರಡುತ್ತದೆ. ಮೂಲ ‘ಎ’ ಮಾದರಿ ವೈರಸ್‌ನಲ್ಲಿ ಇದನ್ನು ಹಂದಿ ಜ್ವರ, ಹಕ್ಕಿ ಜ್ವರ ಅಥವಾ ಇತರ ಪ್ರಾಣಿಗಳ ವೈರಸ್‌ ಎಂದು ವರ್ಗೀಕರಿಸಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ

ಈ ವೈರಸ್‌ ಶ್ವಾಸಕೋಶದ ಮೇಲ್ಭಾಗದಿಂದ ಸೌಮ್ಯವಾಗಿ ಹರಡುವುದರ ಜೊತೆ ಗಂಭೀರವಾದ ಕಾಯಿಲೆಗಳನ್ನು ಉಂಟು ಮಾಡುತ್ತದೆ. ಕಣ್ಣುಗಳು ಕೆಂಪಾಗಿ ಉರಿಯುವುದು, ಅತಿಸಾರದಂತಹ ಜೀರ್ಣಾಂಗ ಸಮಸ್ಯೆ, ಅತಿಯಾದ ತಲೆ ನೋವು ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುವ ರೋಗಗಳು ಹೆಚ್‌9ಎನ್‌2 ಹಕ್ಕಿ ಜ್ವರದ ಪ್ರಮುಖ ಲಕ್ಷಣಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ಹಕ್ಕಿಜ್ವರದಿಂದ ಸಾವು ಕೂಡ ಸಂಭವಿಸಬಹುದು.

ಮಾನವರಿಗೆ ತಗಲುವ ಈ ವೈರಸ್‌ನ ಗಂಭೀರತೆಯನ್ನು ಪತ್ತೆ ಹಚ್ಚಲು ಮತ್ತಷ್ಟು ಪ್ರಯೋಗಾಲಯಗಳ ಪರೀಕ್ಷೆಯ ಅಗತ್ಯವಿದೆ. ಆರೋಗ್ಯ ಸಂಸ್ಥೆ ಈ ವೈರಸ್‌ ಅನ್ನು ಪತ್ತೆ ಹಚ್ಚಲು ನಿಯಮಿತವಾಗಿ ಅಣ್ವಿಕ ವಿಧಾನಗಳನ್ನು ಬಳಸಿಕೊಂಡು ಪರೀಕ್ಷೆ ನಡೆಸುತ್ತಿದೆ.

ಪ್ರಾಣಿಗಳಲ್ಲಿ ಹೆಚ್‌9ಎನ್‌2 ವೈರಸ್‌ ಅಥವಾ ಮತ್ಯಾವುದೇ ವೈರಸ್‌ ಕಂಡುಬಂದರೆ ಅವುಗಳ ಸಂಪರ್ಕದಿಂದ ದೂರವಿರಬೇಕು. ಗಂಭೀರ ವೈರಸ್‌ ತಗುಲಿದ ಪ್ರಾಣಿಗಳನ್ನು ಒಂದು ವೇಳೆ ಸಂಪರ್ಕಿಸಿದರೆ ಸೋಪುಗಳ ಮೂಲಕ ಮೈಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸಾಕು ಪ್ರಾಣಿಗಳಲ್ಲಿ ಯಾವುದೇ ವೈರಸ್‌ ಉಂಟಾದರೆ ತಕ್ಷಣ ಪಶು ವೈದ್ಯರ ಮಾರ್ಗದರ್ಶನ ಪಡೆದುಕೊಳ್ಳಬೇಕು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...

ಅಯೋಧ್ಯೆ ರಾಮಮಂದಿರ ಸಿಬ್ಬಂದಿಗೆ ಶೇ. 100ರಷ್ಟು ಪೊಲೀಸ್ ವೆರಿಫಿಕೇಷನ್; ಹಿನ್ನೆಲೆ ಪರಿಶೀಲನೆ ಕಡ್ಡಾಯ

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು...

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...