ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಆತಿಥೇಯ ಅಮೆರಿಕ ತಂಡವು 111 ರನ್‌ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹಂಗಾಮಿ ನಾಯಕ ಆ್ಯರನ್ ಜೋನ್ಸ್ ನೇತೃತ್ವದ ಯುಎಸ್‌ಎ ತಂಡ ಟೀಮ್ ಇಂಡಿಯಾ ಬೌಲರ್ ಅರ್ಷ್‌ದೀಪ್ ಸಿಂಗ್ ಅವರ ದಾಳಿಗೆ ಸಿಲುಕಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಲಷ್ಟೇ ಶಕ್ತವಾಯಿತು.
#TeamUSA set a target of 111 for India! 🎯
Switching it over to our bowlers…🔄
Follow live 📲: Willow TV#T20WorldCup | #USAvIND | #WeAreUSACricket 🇺🇸 pic.twitter.com/LvCeVyHCnZ
— USA Cricket (@usacricket) June 12, 2024
ಟೀಮ್ ಇಂಡಿಯಾ ಪರ ಮೊದಲ ಓವರ್ ಎಸೆದ ಅರ್ಷ್‌ದೀಪ್ ಸಿಂಗ್, ಮೊದಲ ಓವರ್‌ನ ಮೊದಲ ಎಸೆತದಲ್ಲಿ ಶಯಾನ್ ಜಹಾಂಗೀರ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರೆ, ಕೊನೆಯ ಎಸೆತದಲ್ಲಿ ಆ್ಯಂಡ್ರಿಸ್ ಗೌಸ್ ಅವರ ವಿಕೆಟ್ ಪಡೆಯುವಲ್ಲಿ ಸಫಲರಾದರು.
ಕಳೆದ ಎರಡು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಜೋನ್ಸ್ ಇಂದಿನ ಪಂದ್ಯದಲ್ಲಿ ವಿಫಲರಾದರು. 22 ಎಸೆತಗಳಲ್ಲಿ 11 ರನ್ ಗಳಿಸಿ ಹಾರ್ದಿಕ್ ಪಾಂಡ್ಯಾ ಎಸೆತದಲ್ಲಿ ಸಿರಾಜ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಮೆಲ್ಲಗೆ ತಂಡದ ಮೊತ್ತವನ್ನು ಸೇರಿಸುವಲ್ಲಿ ಸಫಲರಾದ ಅಮೆರಿಕ ಬ್ಯಾಟರ್ ಸ್ಟೀವನ್ ಟೇಲರ್ 24 ರನ್ ಗಳಿಸಿದ್ದಾಗ ಅಕ್ಸರ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
Innings Break!
Solid bowling display from #TeamIndia! 👏 👏
4⃣ wickets for @arshdeepsinghh
2⃣ wickets for @hardikpandya7
1⃣ wicket for @akshar2026Stay Tuned as India begin their chase! ⌛️
Scorecard ▶️ https://t.co/HTV9sVyS9Y#T20WorldCup | #USAvIND pic.twitter.com/jI2K6SuIJ5
— BCCI (@BCCI) June 12, 2024
ಬಳಿಕ ಅಮೆರಿಕ ಪರ ಆಟವಾಡುತ್ತಿರುವ ಭಾರತೀಯ ಮೂಲದ ನಿತೀಶ್ ಕುಮಾರ್ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸ್‌ನ ನೆರವಿನಿಂದ 27 ರನ್ ಗಳಿಸಿ, ಅರ್ಷ್‌ದೀಪ್‌ಗೆ ವಿಕೆಟ್ ಒಪ್ಪಿಸಿದರು. ಬೌಂಡರಿ ಲೈನ್‌ನಲ್ಲಿ ಫೀಲ್ದಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು.
A wonderful grab! 👏🏻#NitishKumar‘s stay at the crease is ended by #ArshdeepSingh courtesy of a sensational catch by #MohammedSiraj! 👏🏻#USAvIND | LIVE NOW | #T20WorldCupOnStar pic.twitter.com/RcDErWCqR7
— Star Sports (@StarSportsIndia) June 12, 2024
ಉಳಿದಂತೆ ಅಮೆರಿಕ ಪರ ಕೋರಿ ಆ್ಯಂಡರ್‌ಸನ್ 15 ರನ್, ಶ್ಯಾಡ್ಲಿ 11, ಹರ್ಮೀತ್ ಸಿಂಗ್ 10 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ರೋಹಿತ್ ಶರ್ಮಾ ಪಡೆಗೆ ಗೆಲ್ಲಲು 111 ರನ್‌ಗಳ ಸಾಧಾರಣ ಗುರಿ ನೀಡಿದೆ.
ಟೀಮ್ ಇಂಡಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಎಡಗೈ ಬೌಲರ್ ಅರ್ಷ್‌ದೀಪ್ ಸಿಂಗ್ 4 ಓವರ್‌ಗಳನ್ನು ಎಸೆದು ಕೇವಲ 9 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ಹಾರ್ದಿಕ್ ಪಾಂಡ್ಯಾ 2 ವಿಕೆಟ್ ಗಳಿಸಿದರೆ, ಅಕ್ಸರ್ ಪಟೇಲ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
Arshdeep Singh registers the best bowling figures for India in ICC T20 World Cup history. 🤯🇮🇳 pic.twitter.com/3tMUHMn1yD
— Mufaddal Vohra (@mufaddal_vohra) June 12, 2024
