ಮಣಿಪುರದ ರಾಜಧಾನಿ ಇಂಫಾಲದಲ್ಲಿರುವ ಹೈ ಸೆಕ್ಯುರಿಟಿ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್ ಬಳಿ ಇರುವ ಕಟ್ಟಡವೊಂದರಲ್ಲಿ ಶನಿವಾರ ಸಂಜೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಕಟ್ಟಡವು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಅಧಿಕೃತ ಬಂಗಲೆಯಿಂದ ಕೆಲವೇ ಮೀಟರ್ ದೂರದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
STORY | Major fire breaks out near Manipur CM’s bungalow
READ: https://t.co/YYzrooXlSV
VIDEO:
(Full video available on PTI Videos – https://t.co/n147TvqRQz) pic.twitter.com/BOapiMRse3
— Press Trust of India (@PTI_News) June 15, 2024
ಇಂದು ಸಂಜೆ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದವು. ಬೆಂಕಿಗೆ ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ಕಟ್ಟಡವು ಕುಕಿ ಬುಡಕಟ್ಟು ಜನಾಂಗದ ನಾಗರಿಕ ಸಮಾಜದ ಗುಂಪಾದ ಕುಕಿ ಇನ್ಪಿಯ ಮುಖ್ಯ ಕಚೇರಿಗೆ ಸಮೀಪದಲ್ಲಿದೆ.
🔴#BREAKING | Fire At Manipur Secretariat Near Chief Minister’s Bungalow, Say Cops https://t.co/mfSjcCh5rl pic.twitter.com/xE13flYvJu
— NDTV (@ndtv) June 15, 2024
