ಉಪ ಸ್ಪೀಕರ್ ಹುದ್ದೆ ನೀಡದಿದ್ದರೆ ಸ್ಪೀಕರ್ ಅಭ್ಯರ್ಥಿ ಕಣಕ್ಕಿಳಿಸುವ ಯೋಚನೆಯಲ್ಲಿ ‘ಇಂಡಿಯಾ’ ಒಕ್ಕೂಟ

Date:

ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ಕೇಂದ್ರದಲ್ಲಿ ಟಿಡಿಪಿ ಹಾಗೂ ಜೆಡಿಯುವಿನ ಸಹಕಾರದೊಂದಿಗೆ ನರೇಂದ್ರ ನರೇಂದ್ರ ಮೋದಿ ನೇತೃತ್ವದಲ್ಲಿ ನೂತನ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಈಗಾಗಲೇ ಸಚಿವರಿಗೆ ಖಾತೆಗಳ ಹಂಚಿಕೆಯೂ ಆಗಿದೆ.

ಈಗ ಸ್ಪೀಕರ್ ಹುದ್ದೆಯ ಸರದಿ ಬಂದಿದೆ. ಹಲವರ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಎನ್‌ಡಿಎ ಒಕ್ಕೂಟ, ಲೋಕಸಭೆ ಸ್ಪೀಕರ್ ಆಯ್ಕೆಯ ಲೆಕ್ಕಾಚಾರದಲ್ಲಿದೆ. ಸರ್ಕಾರ ರಚನೆಯಾಗುವ ಮುನ್ನ ಜೆಡಿಯು ಮತ್ತು ಟಿಡಿಪಿ ಸ್ಪೀಕರ್ ಹುದ್ದೆಗ ಪಟ್ಟು ಹಿಡಿದಿದೆ ಎಂದು ವರದಿಯಾಗಿತ್ತು. ಆ ವಿಷಯ ಸದ್ಯಕ್ಕೆ ತನ್ನಗಾಗಿದ್ದು, ಇನ್ನೂ ಅಂತಿಮಗೊಂಡಿಲ್ಲ.

ಆಡಳಿತ ಎನ್‌ಡಿಎ ಒಕ್ಕೂಟದ್ದಾದರೂ, ಅದೇ ಒಕ್ಕೂಟದವರು ಲೋಕಸಭೆ ಸ್ಪೀಕರ್ ಆಗಬೇಕೆಂದಿಲ್ಲ. ಆದರೂ, ಸಾಮಾನ್ಯವಾಗಿ ಸ್ಪೀಕರ್ ಹುದ್ದೆ ಆಡಳಿತ ಪಕ್ಷದ ಕೂಟದವರಿಗೆ ಸಿಗುವುದು ವಾಡಿಕೆ. ಈ ಬಾರಿಯೂ ಈ ಪದ್ದತಿ ಮುಂದುವರಿಯಲೂಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ನಡುವೆ ಉಪ ಸ್ಪೀಕರ್ ಹುದ್ದೆ ನಮಗೆ ನೀಡಬೇಕು ಎಂಬ ಬೇಡಿಯಕೆಯನ್ನು ಪ್ರತಿಪಕ್ಷಗಳು ಆಡಳಿತ ಕೂಟದ ಮುಂದೆ ಇಟ್ಟಿದೆ ಎಂದು ವರದಿಯಾಗಿದೆ.

“ಉಪ ಸ್ಪೀಕರ್ ಹುದ್ದೆ ನೀಡದಿದ್ದರೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪ್ರತಿಪಕ್ಷಗಳು ಎಚ್ಚರಿಕೆ ನೀಡಿವೆ” ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳನ್ನು ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಪಡೆದುಕೊಂಡಿದೆ. ಹಾಗಾಗಿ, ಉಪ ಸ್ಪೀಕರ್ ಹುದ್ದೆ ನೀಡುವಂತೆ ಪಟ್ಟು ಹಿಡಿದಿದೆ. ಹೊಸ ಸರ್ಕಾರದ ಮೊದಲ ಸಂಸತ್‌ ಅಧಿವೇಶನಕ್ಕೂ ಮುನ್ನ ಈ ವಿಚಾರ ಮುನ್ನೆಲೆಗೆ ಬಂದಿದೆ.

ಇದನ್ನು ಓದಿದ್ದೀರಾ? ದರ್ಶನ್‌ನ ಸ್ತ್ರೀ ವಿರೋಧಿ, ಕೊಲ್ಲುವ ಮನಸ್ಥಿತಿಗೆ ಬಲಪಂಥೀಯ ಸಿದ್ದಾಂತ ಕಾರಣ! ಆತನ ಸೈದ್ದಾಂತಿಕ ಗುರು ಯಾರು ಗೊತ್ತೇ?

ಸ್ಪೀಕರ್ ಹುದ್ದೆಯ ಜೊತೆಗೆ ಇಂಡಿಯಾ ಒಕ್ಕೂಟ ಪ್ರತಿಪಕ್ಷ ನಾಯಕನನ್ನೂ ಆಯ್ಕೆ ಮಾಡಬೇಕಿದೆ. ಕಾಂಗ್ರೆಸ್‌ ಈಗಾಗಲೇ ರಾಹುಲ್ ಗಾಂಧಿಯನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಲು ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಇಂಡಿಯಾ ಒಕ್ಕೂಟದ ಇತರ ಪಕ್ಷಗಳ ಮೇಲೆ ನಿರ್ಣಯ ನಿಂತಿದೆ. ಬಹುತೇಕ ರಾಹುಲ್ ಗಾಂಧಿಯೇ ಪ್ರತಿಪಕ್ಷ ನಾಯಕರಾಗುವ ಸಾಧ್ಯತೆ ಇದೆಯಾದರೂ, ಅವರಿನ್ನೂ ವಿಪಕ್ಷ ನಾಯಕನ ಸ್ಥಾನವನ್ನು ಒಪ್ಪಿಕೊಂಡಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೀಲ್ಸ್ ಮಾಡುವಾಗ 300 ಅಡಿ ಜಲಪಾತಕ್ಕೆ ಬಿದ್ದು ‘ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್’ ಮೃತ್ಯು

ಮುಂಬೈ ಮೂಲದ 'ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್' ಆನ್ವಿ ಕಾಮ್ದಾರ್ (27) ರೀಲ್ಸ್...

ಬಿಜೆಪಿ ಭಿನ್ನಮತೀಯರಿಗೆ ‘ಮಾನ್ಸೂನ್ ಆಫರ್’ ನೀಡಿದ ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ...

ಉತ್ತರಾಖಂಡ | ಅನಾರೋಗ್ಯದಿಂದ ತಮಟೆ ಬಾರಿಸದ ವ್ಯಕ್ತಿ; ದಲಿತ ಕುಟುಂಬಗಳಿಗೆ ಗ್ರಾಮದಿಂದ ಬಹಿಷ್ಕಾರ!

ದಲಿತ ಸಮುದಾಯದ ವ್ಯಕ್ತಿಯೊಬ್ಬರು ಅನಾರೋಗ್ಯದ ಕಾರಣ ದೇವಸ್ಥಾನದಲ್ಲಿ ತಮಟೆ ಬಾರಿಸಲು ಬರದ...