ಹ್ಯಾಕ್ ಆಗುವ ಸಾಧ್ಯತೆ; ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದ ಎಲಾನ್‌ ಮಸ್ಕ್‌

Date:

Advertisements

ಸಾಮಾಜಿಕ ಮಾಧ್ಯಮ ‘ಎಕ್ಸ್‌’ನ ಮಾಲೀಕ ಎಲಾನ್‌ ಮಸ್ಕ್‌, ಕೃತಕ ಬುದ್ಧಿಮತ್ತೆ(ಎಐ) ಅಥವಾ ಮಾನವರಿಂದ ಹ್ಯಾಕ್‌ ಆಗುವುದರಿಂದ ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿರುವ ಅವರು, ನಾವು ಕೃತಕ ಬುದ್ಧಿಮತ್ತೆ ವಿದ್ಯುನ್ಮಾನ ಯಂತ್ರವನ್ನು ನಿಷೇಧಿಸಬೇಕು. ಮಾನವರು ಅಥವಾ ಕೃತಕ ಬುದ್ಧಿಮತ್ತೆಯಿಂದ(ಎಐ) ಚಿಕ್ಕದಾಗಿದ್ದರೂ ಈಗಲೂ ಅದರ ಅಪಾಯ ದೊಡ್ಡಮಟ್ಟದಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ಯೋರ್ಟೊ ರಿಕೊ ಅವರು ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

Advertisements

ಮಾಧ್ಯಮ ವರದಿಯ ಬಗ್ಗೆ ಪೋಸ್ಟ್‌ ಮಾಡಿದ್ದ ರಿಕೊ ಅವರು ನೂರಾರು ಮತದಾನ ಅಕ್ರಮಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಿಗೆ ಸಂಬಂಧಿಸಿವೆ. ಅದೃಷ್ಟವಶಾತ್ ಪೇಪರ್‌ ಟ್ರಯಲ್‌ ಇರುವ ಕಾರಣದಿಂದ ಸಮಸ್ಯೆಯನ್ನು ಪತ್ತೆಹಚ್ಚಿ ಮತದಾನವನ್ನು ಸರಿಪಡಿಸಬಹುದು ಎಂದು ಹೇಳಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ಮತದಾನ ಕೇಂದ್ರಗಳಲ್ಲಿ ಪೇಪರ್‌ ಟ್ರಯಲ್‌ ಇಲ್ಲದಿದ್ದರೆ ಏನಾಗುತ್ತಿತ್ತು. ಅಮೆರಿಕದ ಪ್ರಜೆಗಳು ಚುನಾವಣೆಗಳು ಹ್ಯಾಕ್‌ ಆಗದ ರೀತಿ ಅವರ ಪ್ರತಿಯೊಂದು ಮತ ಎಣಿಕೆಯನ್ನು ತಿಳಿದುಕೊಳ್ಳಬೇಕಿದೆ. ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ದೂರವಿರಿಸಿ ಮತಪತ್ರಗಳನ್ನು ಪುನಃ ಮರಳಿ ತರಬೇಕಿದೆ. ನನ್ನ ಆಡಳಿತಕ್ಕೆ ಮತಪತ್ರದ ಅಗತ್ಯತೆಯಿದೆ ಹಾಗೂ ಮುಕ್ತ ಹಾಗೂ ನ್ಯಾಯಸಮ್ಮದ ಚುನಾವಣೆಗಳು ನಡೆಯಬೇಕೆಂದು ಬಯಸುತ್ತೇನೆ ಎಂದು ರಿಕೊ ಹೇಳಿದ್ದರು.

ಮಸ್ಕ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್, ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇವಿಎಂಗಳ ಬಗ್ಗೆ ಇವರಿಗೆ ಕಲಿಸಿಕೊಡುವ ಅಗತ್ಯತೆಯಿದೆ ಎಂದಿದ್ದಾರೆ.

ಡಿಜಿಟಲ್‌ ಹಾರ್ಡ್‌ವೇರ್‌ಅನ್ನು ಯಾರು ಸುರಕ್ಷತೆಯಿಂದ ನಿರ್ಮಿಸಲು ಸಾಧ್ಯವಿಲ್ಲ ಎಂದು ಮಸ್ಕ್‌ ಅವರ ಹೇಳಿಕೆಯನ್ನು ಸೂಚಿಸುತ್ತದೆ. ಇದು ತಪ್ಪು, ಎಲಾನ್‌ ಮಸ್ಕ್‌ ಅವರ ಮಾತು ಅಮೆರಿಕದಲ್ಲಿನ ಇತರ ಸ್ಥಳಗಳಿಗೆ ಸೂಚಿಸುತ್ತದೆ. ಅಲ್ಲಿ ಇಂಟರ್‌ನೆಟ್‌ ಸಂಪರ್ಕಿತ ಮತ ಯಂತ್ರಗಳನ್ನು ಅಭಿವೃದ್ಧಿಪಡಿಸಿರುವ ಸಾಮಾನ್ಯ ಕಂಪ್ಯೂಟರ್‌ ವೇದಿಕೆಗಳಾಗಿವೆ. ಆದರೆ ಭಾರತದ ಇವಿಎಂಗಳನ್ನು ಸುರಕ್ಷಿತವಾಗಿ ತಯಾರಿಸಲಾಗಿದೆ. ಇವು ಯಾವುದೇ ನೆಟ್‌ವರ್ಕ್‌ ಹಾಗೂ ಮಾಧ್ಯಮ, ಬ್ಲೂಟೂತ್‌, ವೈಫೈ, ಇಂಟರ್‌ನೆಟ್ ಸಂಪರ್ಕಗಳಿಂದ ಸುರಕ್ಷತೆ ಹಾಗೂ ಪ್ರತ್ಯೇಕಗೊಳಿಸಲಾಗಿದೆ. ಫ್ಯಾಕ್ಟರಿ ಪ್ರೋಗ್ರಾಮ್‌ ಮಾಡಲಾದ ನಿಯಂತ್ರಕಗಳನ್ನು ರಿಪ್ರೋಗ್ರಾಮ್‌ ಮಾಡಲಾಗುವುದಿಲ್ಲ. ವಿದ್ಯುನ್ಮಾನ ಮತಯಂತ್ರಗಳನ್ನು ಭಾರತದಲ್ಲಿ ಮಾಡಿದಂತೆ ವಿನ್ಯಾಸಗೊಳಿಸಬಹುದು ಮತ್ತು ಅಭಿವೃದ್ಧಿಪಡಿಸಬಹುದು. ನಾವು ಹೇಗೆ ಕಾರ್ಯನಿರ್ವಹಿಸುತ್ತೇವೆ ಎಂದು ಎಲಾನ್‌ ಮಸ್ಕ್‌ ಅವರಿಗೆ ಹೇಳಿಕೊಡುತ್ತೇವೆ” ಎಂದು ತಿಳಿಸಿದ್ದಾರೆ.

ಎಲಾನ್‌ ಮಸ್ಕ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇವಿಎಂಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇವಿಎಂಗಳು ಭಾರತದಲ್ಲಿನ ಕಪ್ಪು ಪೆಟ್ಟಿಗೆಗಳು. ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಗಳ ಪಾರದರ್ಶಕತೆ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಸಂಸ್ಥೆಗಳ ಹೊಣೆಗಾರಿಕೆ ಕೊರತೆಯಿರುವಾಗ ಪ್ರಜಾಪ್ರಭುತ್ವ ನೆಪವಾಗಿ ಕೊನೆಗೊಂಡು ವಂಚನೆಗೆ ಗುರಿಯಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ.

 

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

Download Eedina App Android / iOS

X