ಭಾಲ್ಕಿ ತಾಲೂಕಿನ ಅಳವಾಯಿ ಗ್ರಾಮದಲ್ಲಿ ಸಿಡಿಲು ಬಡಿದು 8 ವರ್ಷದ ರುದ್ರಾಪ್ರತಾಪ್ ಕೋಟಮಾಳೆ ಎಂಬ ಬಾಲಕ ಸಾವನಪ್ಪಿದ ಹೃದಯವಿದ್ರಾವಕ ಘಟನೆ ಜರುಗಿದೆ.
ಬಾಲಕ ರುದ್ರಾ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಭಾನುವಾರ ಶಾಲೆಗೆ ರಜೆಯಿದ್ದ ಕಾರಣ ಮುಂಗಾರಿನ ಬಿತ್ತನೆಗೆ ಪೋಷಕರೊಂದಿಗೆ ಹೊಲಕ್ಕೆ ಹೋದ ವೇಳೆ ಸಂಜೆ ಸಿಡಿಲು ಬಡಿಯಿತು. ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೆಹಕರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.