ಭಾರತಕ್ಕೆ ಬಂದು ಇವಿಎಂ ಹೇಗೆ ಹ್ಯಾಕ್ ಆಗುತ್ತೆ ತೋರಿಸಿ: ಮಸ್ಕ್‌ಗೆ ಚುನಾವಣಾ ಆಯೋಗ ಸವಾಲು

Date:

ಇವಿಎಂ (ವಿದ್ಯುನ್ಮಾನ ಮತಯಂತ್ರ) ಹ್ಯಾಕ್ ಆಗುವ ಸಾಧ್ಯತೆ ಬಗ್ಗೆ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅಭಿಪ್ರಾಯವನ್ನು ಭಾರತೀಯ ಚುನಾವಣಾ ಆಯೋಗ ಪ್ರಶ್ನಿಸಿದೆ. ಭಾರತಕ್ಕೆ ಬಂದು ಇವಿಎಂ ಹೇಗೆ ಹ್ಯಾಕ್ ಆಗುತ್ತದೆ ಎಂದು ತೋರಿಸಲು ಎಲಾನ್ ಮಸ್ಕ್‌ಗೆ ಚುನಾವಣಾ ಆಯೋಗ ಸವಾಲು ಹಾಕಿದೆ.

ಇವಿಎಂ ಹ್ಯಾಕಿಂಗ್ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಎಕ್ಸ್ ಮಾಲೀಕ ಎಲಾನ್ ಮಸ್ಕ್, “ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ನಿಲ್ಲಿಸಬೇಕು. ಇವಿಎಂ ಮಾನವರು ಅಥವಾ ಎಐನಿಂದ ಹ್ಯಾಕ್ ಆಗುವ ಅಪಾಯ ಕಡಿಮೆಯಾಗಿದ್ದರೂ ಕೂಡಾ ಅಪಾಯ ಇನ್ನೂ ಹೆಚ್ಚಾಗಿದೆ” ಎಂದು ಹೇಳಿದ್ದರು.

ಎಲಾನ್ ಮಸ್ಕ್‌ರ ಈ ಒಂದು ಪೋಸ್ಟ್ ಭಾರೀ ಸಂಚಲವನ್ನು ಮೂಡಿಸಿದೆ. ಎಲಾನ್ ಮಸ್ಕ್ ಹೇಳಿಕೆಗೆ ಬೆಂಬಲ ನೀಡುವಂತಹ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರುಗಳು ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ? ಹ್ಯಾಕ್ ಆಗುವ ಸಾಧ್ಯತೆ; ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದ ಎಲಾನ್‌ ಮಸ್ಕ್‌

ಮಸ್ಕ್ ಟ್ವೀಟ್ ವಿವಾದವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಭಾರತದಲ್ಲಿ ಇವಿಎಂಗಳು ಕಪ್ಪು ಪೆಟ್ಟಿಗೆಯಷ್ಟೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅವಕಾಶ ನೀಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.

ಈ ನಡುವೆ ಭಾರತದ ಚುನಾವಣಾ ಆಯೋಗವು ಎಲಾನ್ ಮಸ್ಕ್‌ ಅವರಿಗೆ ಸವಾಲು ಹಾಕಿದೆ. ಭಾರತಕ್ಕೆ ಬಂದು ಇವಿಎಂ ಹೇಗೆ ಹ್ಯಾಕ್ ಆಗುತ್ತದೆ ಎಂದು ತೋರಿಸಿ ಎಂದು ಮಸ್ಕ್‌ಗೆ ಆಯೋಗ ಹೇಳಿದೆ.


“ಇದು ಅಸಂಬದ್ಧ ಊಹಾಪೋಹ ಮತ್ತು ಭಾರತೀಯ ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಕೆಡಿಸುವ ಪ್ರಯತ್ನವಾಗಿದೆ” ಎಂದು ಚುನಾವಣಾ ಆಯೋಗ ಆರೋಪಿಸಿದೆ.

“ನಾವು ನಿಮಗೆ ಸವಾಲು ಹಾಕುತ್ತೇವೆ, ಎಲಾನ್ ಮಸ್ಕ್ ಅವರೆ ಭಾರತಕ್ಕೆ ಬಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮಹಾನ್ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ಹ್ಯಾಕಿಂಗ್ ಹೇಗೆ ಆಗುತ್ತದೆ ಎಂದು ತೋರಿಸಿ” ಎಂದು ಚುನಾವಣಾ ಆಯೋಗ ಸವಾಲೆಸೆದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಅನಾರೋಗ್ಯದಿಂದ ತಮಟೆ ಬಾರಿಸದ ವ್ಯಕ್ತಿ; ದಲಿತ ಕುಟುಂಬಗಳಿಗೆ ಗ್ರಾಮದಿಂದ ಬಹಿಷ್ಕಾರ!

ದಲಿತ ಸಮುದಾಯದ ವ್ಯಕ್ತಿಯೊಬ್ಬರು ಅನಾರೋಗ್ಯದ ಕಾರಣ ದೇವಸ್ಥಾನದಲ್ಲಿ ತಮಟೆ ಬಾರಿಸಲು ಬರದ...

ವಿವಾದಾತ್ಮಕ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ಬಂಧನ

ಪಿಸ್ತೂಲ್‌ ಹಿಡಿದು ರೈತರಿಗೆ ಬೆದರಿಸಿದ ಆರೋಪದ ಮೇಲೆ ವಿವಾದಾತ್ಮಕ ಐಎಎಸ್ ಅಧಿಕಾರಿ...

ಆಂಧ್ರ ಪ್ರದೇಶ | ಜನನಿಬಿಡ ಮುಖ್ಯ ರಸ್ತೆಯಲ್ಲೇ ವೈಎಸ್‌ಆರ್‌ಸಿಪಿ ಯುವ ಮುಖಂಡನ ಬರ್ಬರ ಹತ್ಯೆ

ವೈಎಸ್‌ಆರ್‌ಸಿಪಿಯ ಯುವ ಮುಖಂಡನೊಬ್ಬನನ್ನು ಜನನಿಬಿಡ ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕಡಿದು ಬರ್ಬರವಾಗಿ ಕೊಲೆ...