ಬಕ್ರೀದ್ ಹಬ್ಬದಲ್ಲಿ ಸಹೋದರತೆ, ಏಕತೆಯ ಸಂದೇಶವನ್ನು ಪಾಲಿಸುವ ಮೂಲಕ ಅಲ್ಲಾಹುವಿನ ಪ್ರೀತಿಗೆ ಪ್ರತಿಯೊಬ್ಬರೂ ಪಾತ್ರರಾಗುತ್ತಾರೆ. ತ್ಯಾಗ ಮನೋಭಾವನೆಯನ್ನು ಪ್ರತಿಯೊಬ್ಬರು ತಮ್ಮ ವ್ಯಕ್ತಿತ್ವದಲ್ಲೂ ಮೈಗೂಡಿಸಿಕೊಳ್ಳಬೇಕು ಎಂದು ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಜನಾಬ ಆರ್ ಐ ಭಗವಾನ್ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಬಕ್ರೀದ್ ಆಚರಿಸಿ, ಗ್ರಾಮದ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ವೇಳೆ ಮಾತನಾಡಿದರು.
“ಹಿರಿಯರ ಮತ್ತು ಉಲೇಮಾಗಳ ತ್ಯಾಗಮಯ ಜೀವನ ಪ್ರತಿಯೋಬ್ಬರಿಗೂ ಮಾದರಿಯಾಗಿದೆ ಎನ್ನುವುದು ಬಕ್ರೀದ್ ಹಬ್ಬದ ಸಂಕೇತವಾಗಿದೆ ಎನ್ನುವ ಪ್ರತೀತಿಯೂ ಇದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಮಾಜಿ ಸಿಎಂ ಬಿಎಸ್‌ವೈ ಪೋಕ್ಸೊ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ: ಸಚಿವ ತಿಮ್ಮಾಪೂರ
ಅಸ್ಲಂ ಲಿಂಗಸೂರ ಪ್ರಾರ್ಥನೆ ಮಾಡಿಸಿದರು. ಹುಸೇನಸಾಬ ಬಡಿಗೇರ, ಶಾಬುಸಾಬ ನಧಾಫ್, ಐ ಎಚ್ ಭಗವಾನ್, ಬಾಷೇಸಾಬ ಭಗವಾನ್, ರೈಮಾನಸಾಬ ನದಾಫ್, ಎಂ ಡಿ ಭಗವಾನ್, ಕೆ ಕೆ ಭಗವಾನ್, ಯಮನೂರಸಾಬ ನದಾಫ್, ರಾಜು ವಾಲಿಕಾರ ಆರ್ ಕೆ ಭಗವಾನ್, ಹುಸೇನ ಭಗವಾನ್ ಸೇರಿದಂತೆ ಅನೇಕರು ಪ್ರಾರ್ಥನೆ ಸಲ್ಲಿಸಿದರು.
