ಶೇ. 0.001 ನಿರ್ಲಕ್ಷ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು: ನೀಟ್‌ ಪರೀಕ್ಷೆ ಬಗ್ಗೆ ಸುಪ್ರೀಂ ಆಕ್ರೋಶ

Date:

ನೀಟ್ – ಯುಜಿ 2024ರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮವೆಸಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ.

ರಜಾ ಪೀಠದ ನ್ಯಾಯಾಧೀಶರಾದ ವಿಕ್ರಂನಾಥ್ ಹಾಗೂ ಎಸ್‌ಟಿ ಭಟ್ಟಿ ಅವರ ಪೀಠವು ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಹಾಗೂ ಕೆಲವು ವಿದ್ಯಾರ್ಥಿಗಳಿಗೆ ನೀಡಲಾದ ಕೃಪಾಂಕ ಅಂಕಗಳ ಕುರಿತ ಹಿಂದಿನ ಅರ್ಜಿಗಳ ರೀತಿಯ ಒಂದು ಪ್ರಕರಣವನ್ನು ವಿಚಾರಣೆ ನಡೆಸಿತು.

ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳು ಕಠಿಣ ಪರಿಶ್ರಮವಹಿಸಿ ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವಾಗ ಎಲ್ಲ ರೀತಿಯ ಗಂಭೀರತೆ ಕೈಗೊಳ್ಳಬೇಕು. ಯಾರಾದರೂ ಶೇ.0.001 ನಿರ್ಲಕ್ಷ್ಯ ವಹಿಸಿದರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಪರೀಕ್ಷೆಗಾಗಿ ಮಕ್ಕಳು ಅಪಾರ ಶ್ರಮ ಹಾಕಿರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಸುಪ್ರೀಂ ಕೋರ್ಟ್ ಪೀಠ ವಿಚಾರಣೆ ಸಂದರ್ಭದಲ್ಲಿ ತಿಳಿಸಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ

“ವ್ಯವಸ್ಥೆಯಲ್ಲಿ ವಂಚನೆವೆಸಗಿರುವ ವ್ಯಕ್ತಿಯ ಸಂದರ್ಭವನ್ನು ಕಲ್ಪಿಸಿಕೊಳ್ಳಿ, ಆತ ವೈದ್ಯನಾದರೆ ಸಮಾಜಕ್ಕೆ ಅತ್ಯಂತ ಹಾನಿಕಾರಕನಾಗುತ್ತಾನೆ. ಪ್ರಮುಖವಾಗಿ ಪರೀಕ್ಷೆಗಾಗಿ ಮಕ್ಕಳು ಅಪಾರ ಶ್ರಮ ಹಾಕಿರುತ್ತಾರೆ ಎಂಬುದನ್ನು ನಮ್ಮೆಲ್ಲರಿಗೂ ತಿಳಿದಿದೆ” ಎಂದು ನ್ಯಾಯಮೂರ್ತಿಗಳಾದ ಭಟ್ಟಿ ತಿಳಿಸಿದರು.

ಪರೀಕ್ಷೆ ನಡೆಸುವ ಜವಾಬ್ದಾರಿ ಹೊಂದಿರುವ ಸಂಸ್ಥೆಯನ್ನು ನೀವು ಪ್ರತಿನಿಧಿಸಿರುವ ಕಾರಣ ನ್ಯಾಯಾಲಯವನ್ನು ಪ್ರವೇಶಿಸಿದ ನಂತರ ನಿಮ್ಮ ನಿಲುವುಗಳು ಬದಲಾಗಬಾರದು. ನೀವು ದೃಢವಾಗಿ ನಿಲ್ಲಬೇಕು, ಯಾರಾದರೂ ತಪ್ಪು ಮಾಡಿದ್ದರೆ, ಹೌದು ತಪ್ಪಾಗಿದೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರೆ ನಿಮ್ಮ ಕಾರ್ಯವೈಖರಿಯ ಬಗ್ಗೆ ಕನಿಷ್ಠ ಆತ್ಮವಿಶ್ವಾಸ ಮೂಡುತ್ತದೆ ಎಂದು ಸುಪ್ರೀಂ ಪೀಠ ತಿಳಿಸಿತು.

“ಯಾರಾದರೂ ತಪ್ಪೆಸಗಿದರೆ, ಅವರನ್ನು ಸಂಪೂರ್ಣವಾಗಿ ಪರಿಶೀಲನೆಗೊಳಪಡಿಸಬೇಕು. ಅದು ಎಲ್ಲಿ ತಪ್ಪಾಗಿದೆ, ಎಷ್ಟು ಸೆಲ್‌ಫೋನ್‌ಗಳನ್ನು ಬಳಸಲಾಗಿದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು” ಎಂದು ಪೀಠ ತಿಳಿಸಿತು.

ಈಗಾಗಲೇ ಸುಪ್ರೀಂ ಪೀಠವು ಸಿಬಿಐ ತನಿಖೆಯ ಬಗ್ಗೆ ಕೇಂದ್ರ ಹಾಗೂ ಎನ್‌ಟಿಎಗೆ ಜೂನ್ 14 ರಂದು ನೋಟಿಸ್ ನೀಡಿದೆ. ಎಲ್ಲ ಅರ್ಜಿಗಳ ವಿಚಾರಣೆಯನ್ನು ಜುಲೈ 6 ರಂದು ಕೈಗೊಳ್ಳಲಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ

ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ 'ಕೆಂಪು ಬೀಕನ್' ದೀಪವನ್ನು ಅಳವಡಿಸಿದ ಆರೋಪದ...

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ

ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ...

ಟ್ರಂಪ್ ಮೇಲೆ ಗುಂಡಿನ ದಾಳಿ: ಸ್ನೇಹಿತನ ಬಗ್ಗೆ ಕಳವಳಗೊಂಡಿದ್ದೇನೆ ಎಂದ ಮೋದಿಗೆ ನೆಟ್ಟಿಗರ ಪಾಠ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಉತ್ತರ ಪ್ರದೇಶ | 2027ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲುತ್ತದೆ: ಬಿಜೆಪಿ ಶಾಸಕನ ವಿಡಿಯೋ ವೈರಲ್

"2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಸೋಲು ಕಾಣಲಿದೆ,...