ಸುಮಾರು 46 ಭಾರತೀಯರು ಸೇರಿದಂತೆ 50 ಜನರ ಸಾವಿಗೆ ಕಾರಣವಾದ ಕುವೈತ್ ಅಗ್ನಿ ದುರಂತ ಪ್ರಕರಣದಲ್ಲಿ ಮೂವರು ಭಾರತೀಯರು, ನಾಲ್ವರು ಈಜಿಪ್ಟಿನವರು ಮತ್ತು ಕುವೈತ್ ಪ್ರಜೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಜೂನ್ 12ರಂದು ಮಂಗಾಫ್ ನಗರದ ಆರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡದ ಸಂಭವಿಸಿದ್ದು, ನೆಲ ಮಹಡಿಯಲ್ಲಿನ ಸಿಬ್ಬಂದಿ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಉಂಟಾಗಿದೆ. ಈ ಕಟ್ಟಡದಲ್ಲಿ 196 ವಲಸೆ ಕಾರ್ಮಿಕರು ವಾಸವಾಗಿದ್ದು, ಹೆಚ್ಚಿನವರು ಭಾರತೀಯರಾಗಿದ್ದರು.
ಇದನ್ನು ಓದಿದ್ದೀರಾ? ಕುವೈತ್‌ನಿಂದ 45 ಭಾರತೀಯರ ಮೃತದೇಹಗಳನ್ನು ಕೇರಳಕ್ಕೆ ಕರೆತಂದ ವಿಮಾನ
“ಅಲ್-ಮಂಗಾಫ್ ಕಟ್ಟಡ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಪ್ರಾಸಿಕ್ಯೂಷನ್ ಕುವೈತ್ ಪ್ರಜೆ, ಮೂವರು ಭಾರತೀಯ ಪ್ರಜೆಗಳು ಮತ್ತು ನಾಲ್ಕು ಈಜಿಪ್ಟ್ ಪ್ರಜೆಗಳನ್ನು ಎರಡು ವಾರಗಳ ಕಾಲ ಬಂಧನದಲ್ಲಿರಿಸಲು ಆದೇಶಿಸಿದೆ” ಎಂದು ಆಂಗ್ಲ ಭಾಷೆಯ ದೈನಿಕ ಅರಬ್ ಟೈಮ್ಸ್ ವರದಿಯಾಗಿದೆ.
More than 40 Indian citizens were killed in a massive fire at a labor camp in Kuwait.
This is a very unfortunate incident. I pray for those families who lost their precious loved ones.#Kuwait #KuwaitFire pic.twitter.com/1mV4q8iQzC
— Avinash K. Jha (@iavinashkjha) June 12, 2024
ಆರೋಪಿಗಳ ಮೇಲೆ ನರಹತ್ಯೆ ಮತ್ತು ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಕುವೈತ್‌ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆದೇಶದ ಮೇರೆಗೆ ಸಂತ್ರಸ್ತರ ಕುಟುಂಬಗಳಿಗೆ ತಲಾ 15,000 ಯುಎಸ್ ಡಾಲರ್ (12.5 ಲಕ್ಷ ರೂ) ಪರಿಹಾರವನ್ನು ನೀಡಲಾಗುತ್ತದೆ. ಪರಿಹಾರ ಮೊತ್ತವನ್ನು ಸಂತ್ರಸ್ತರ ರಾಯಭಾರ ಕಚೇರಿಗಳಿಗೆ ತಲುಪಿಸಲಾಗುವುದು. ಎಂದು ಪತ್ರಿಕೆ ವರದಿ ಮಾಡಿದೆ.
ಇನ್ನು ಮೃತರಲ್ಲಿ ನಲವತ್ತಾರು ಮಂದಿ ಭಾರತೀಯರಾಗಿದ್ದರೆ, ಮೂವರು ಫಿಲಿಪಿನೋಸ್ ಆಗಿದ್ದಾರೆ. ಮೃತರಲ್ಲಿ ಒಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.