ಅನುಮತಿ ನೀಡದ ಕೇಂದ್ರ ಗೃಹ ಇಲಾಖೆ: ಭಾರತ ತೊರೆದ ಫ್ರೆಂಚ್ ಪತ್ರಕರ್ತ

Date:

Advertisements

ಫ್ರೆಂಚ್‌ ರೇಡಿಯೋ ಪತ್ರಕರ್ತ ಸೆಬಾಸ್ಟಿಯನ್‌ ಫಾರ್‌ಸಿಸ್ ಎಂಬುವರು ಕೇಂದ್ರ ಗೃಹ ಇಲಾಖೆ “ವರ್ಕ್‌ ಪರ್ಮಿಟ್‌’ ಅನ್ನು ನವೀಕರಿಸಲು ನಿರಾಕರಿಸಿದ ಕಾರಣ ಸೋಮವಾರ ಭಾರತವನ್ನು ತೊರೆದಿದ್ದಾರೆ. ಇದರೊಂದಿಗೆ ಕಳೆದ 4 ತಿಂಗಳಲ್ಲಿ ಫ್ರಾನ್ಸ್‌ನ ಪತ್ರಕರ್ತರು ಭಾರತದಿಂದ ನಿರ್ಗಮಿಸುತ್ತಿರುವುದು ಎರಡನೇ ಪ್ರಕರಣವಾಗಿದೆ. ಸೆಬಾಸ್ಟಿಯನ್‌ ಅವರಿಗೆ 2024ರ ಸಾರ್ವರ್ತಿಕ ಚುನಾವಣೆಗಳಲ್ಲಿ ವರದಿ ಮಾಡದಂತೆ ಕೂಡ ನಿರ್ಬಂಧಿಸಲಾಗಿತ್ತು.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಸೆಬಾಸ್ಟಿಯನ್‌ “ಜೂನ್‌ 17ರಂದು ನಾನು ಬಲವಂತವಾಗಿ ಭಾರತವನ್ನು ತೊರೆದಿದ್ದೇನೆ. ಈ ದೇಶದಲ್ಲಿ ಕಳೆದ 13 ವರ್ಷಗಳಿಂದ ರೇಡಿಯೋ ಫ್ರಾನ್ಸ್ ಇಂಟರ್‌ ನ್ಯಾಷನಲ್‌, ರೇಡಿಯೋ ಫ್ರಾನ್ಸ್, ಲಿಬರೇಷನ್‌ ಹಾಗೂ ಸ್ವಿಸ್‌ ಹಾಗೂ ಬೆಲ್ಜಿಯಂ ಪಬ್ಲಿಕ್ ರೇಡಿಯೋಗಳಲ್ಲಿ ದಕ್ಷಿಣ ಏಷ್ಯಾ ಭಾತ್ಮಿದಾರನಾಗಿ ಕಾರ್ಯನಿರ್ವಹಿಸುತ್ತಿದ್ದೆ” ಎಂದು ತಿಳಿಸಿದ್ದಾರೆ.

ಕೇಂದ್ರ ಗೃಹ ಇಲಾಖೆ ಮಾರ್ಚ್‌ 7 ರಂದು ಪತ್ರಕರ್ತನಾಗಿ ಕಾರ್ಯನಿರ್ವಹಿಸಲು ವರ್ಕ್‌ ಪರ್‌ಮಿಟ್‌ ಅನುಮತಿಯನ್ನು ನವೀಕರಿಸದೆ ತಿರಸ್ಕರಿಸಿತ್ತು ಹಾಗೂ ಸಾರ್ವತ್ರಿಕ ಚುನಾವಣೆಯನ್ನು ವರದಿಸದಂತೆ ನಿರ್ಬಂಧಿಸಲಾಗಿತ್ತು ಎಂದು ಫ್ರಾನ್ಸಿಸ್‌ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಬಿಎಂಪಿಗೆ ಬೇಕಿರುವುದು ವಿಭಜನೆಗೂ ಮುಖ್ಯವಾಗಿ ಚುನಾವಣೆ

ಇದು ನನಗೆ ಗ್ರಹಿಸಲಾಗದ ಸೆನ್ಸರ್‌ಶಿಪ್‌ ಆಗಿ ಕಾಣಿಸಿಕೊಂಡಿದೆ. ಅನುಮತಿಯಿಲ್ಲದೆ ನಾನು ನಿರ್ಬಂಧಿತ ಅಥವಾ ಸುರಕ್ಷಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹಲವು ಸಂದರ್ಭಗಳಲ್ಲಿ ಕೇಂದ್ರ ಗೃಹ ಇಲಾಖೆ ಗಡಿ ಪ್ರದೇಶಗಳಲ್ಲಿ ವರದಿ ಮಾಡಲು ನನಗೆ ಅನುಮತಿ ನೀಡಿತ್ತು ಎಂದು ಫ್ರಾನ್ಸಿಸ್‌ ತಿಳಿಸಿದ್ದಾರೆ.

ಸೆಬಾಸ್ಟಿಯನ್‌ ಅವರ ಅನುಮತಿಯನ್ನು ನಿರಾಕರಿಸಿರುವುದು ಅವರ ಕುಟುಂಬದ ಮೇಲೂ ಪರಿಣಾಮ ಬೀರಿದೆ. ಭಾರತೀಯ ಮಹಿಳೆಯನ್ನು ವಿವಾಹವಾಗಿರುವ ಅವರು ಸಾಗರೋತ್ತರ ಭಾರತದ ನಾಗರಿಕ ಸ್ಥಾನಮಾನವನ್ನು(ಒಸಿಐ) ಹೊಂದಿದ್ದರು.

ಕಳೆದ 4 ತಿಂಗಳ ಹಿಂದೆ ಫ್ರೆಂಚ್‌ ಪತ್ರಕರ್ತ ವನೇಸಾ ದೌಗ್‌ನಾಕ್‌ ಅವರಿಗೆ ವರ್ಕ್‌ ಪರ್‌ಮಿಟ್‌ ನಿರಾಕರಿಸಿದ ಕಾರಣ ಅವರು ಭಾರತವನ್ನು ತೊರೆದಿದ್ದರು. ಎನ್‌ಡಿಎ ಸರ್ಕಾರ 2014ರಿಂದ ಮೇ 2023ರ ಅವಧಿಯಲ್ಲಿ 102 ಜನರ ಒಸಿಐ ಅನುಮತಿಯನ್ನು ರದ್ದುಪಡಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X