ಫ್ರೆಂಚ್ ರೇಡಿಯೋ ಪತ್ರಕರ್ತ ಸೆಬಾಸ್ಟಿಯನ್ ಫಾರ್‌ಸಿಸ್ ಎಂಬುವರು ಕೇಂದ್ರ ಗೃಹ ಇಲಾಖೆ “ವರ್ಕ್ ಪರ್ಮಿಟ್’ ಅನ್ನು ನವೀಕರಿಸಲು ನಿರಾಕರಿಸಿದ ಕಾರಣ ಸೋಮವಾರ ಭಾರತವನ್ನು ತೊರೆದಿದ್ದಾರೆ. ಇದರೊಂದಿಗೆ ಕಳೆದ 4 ತಿಂಗಳಲ್ಲಿ ಫ್ರಾನ್ಸ್‌ನ ಪತ್ರಕರ್ತರು ಭಾರತದಿಂದ ನಿರ್ಗಮಿಸುತ್ತಿರುವುದು ಎರಡನೇ ಪ್ರಕರಣವಾಗಿದೆ. ಸೆಬಾಸ್ಟಿಯನ್ ಅವರಿಗೆ 2024ರ ಸಾರ್ವರ್ತಿಕ ಚುನಾವಣೆಗಳಲ್ಲಿ ವರದಿ ಮಾಡದಂತೆ ಕೂಡ ನಿರ್ಬಂಧಿಸಲಾಗಿತ್ತು.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಸೆಬಾಸ್ಟಿಯನ್ “ಜೂನ್ 17ರಂದು ನಾನು ಬಲವಂತವಾಗಿ ಭಾರತವನ್ನು ತೊರೆದಿದ್ದೇನೆ. ಈ ದೇಶದಲ್ಲಿ ಕಳೆದ 13 ವರ್ಷಗಳಿಂದ ರೇಡಿಯೋ ಫ್ರಾನ್ಸ್ ಇಂಟರ್ ನ್ಯಾಷನಲ್, ರೇಡಿಯೋ ಫ್ರಾನ್ಸ್, ಲಿಬರೇಷನ್ ಹಾಗೂ ಸ್ವಿಸ್ ಹಾಗೂ ಬೆಲ್ಜಿಯಂ ಪಬ್ಲಿಕ್ ರೇಡಿಯೋಗಳಲ್ಲಿ ದಕ್ಷಿಣ ಏಷ್ಯಾ ಭಾತ್ಮಿದಾರನಾಗಿ ಕಾರ್ಯನಿರ್ವಹಿಸುತ್ತಿದ್ದೆ” ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಇಲಾಖೆ ಮಾರ್ಚ್ 7 ರಂದು ಪತ್ರಕರ್ತನಾಗಿ ಕಾರ್ಯನಿರ್ವಹಿಸಲು ವರ್ಕ್ ಪರ್‌ಮಿಟ್ ಅನುಮತಿಯನ್ನು ನವೀಕರಿಸದೆ ತಿರಸ್ಕರಿಸಿತ್ತು ಹಾಗೂ ಸಾರ್ವತ್ರಿಕ ಚುನಾವಣೆಯನ್ನು ವರದಿಸದಂತೆ ನಿರ್ಬಂಧಿಸಲಾಗಿತ್ತು ಎಂದು ಫ್ರಾನ್ಸಿಸ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಬಿಎಂಪಿಗೆ ಬೇಕಿರುವುದು ವಿಭಜನೆಗೂ ಮುಖ್ಯವಾಗಿ ಚುನಾವಣೆ

ಇದು ನನಗೆ ಗ್ರಹಿಸಲಾಗದ ಸೆನ್ಸರ್‌ಶಿಪ್ ಆಗಿ ಕಾಣಿಸಿಕೊಂಡಿದೆ. ಅನುಮತಿಯಿಲ್ಲದೆ ನಾನು ನಿರ್ಬಂಧಿತ ಅಥವಾ ಸುರಕ್ಷಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹಲವು ಸಂದರ್ಭಗಳಲ್ಲಿ ಕೇಂದ್ರ ಗೃಹ ಇಲಾಖೆ ಗಡಿ ಪ್ರದೇಶಗಳಲ್ಲಿ ವರದಿ ಮಾಡಲು ನನಗೆ ಅನುಮತಿ ನೀಡಿತ್ತು ಎಂದು ಫ್ರಾನ್ಸಿಸ್ ತಿಳಿಸಿದ್ದಾರೆ.
ಸೆಬಾಸ್ಟಿಯನ್ ಅವರ ಅನುಮತಿಯನ್ನು ನಿರಾಕರಿಸಿರುವುದು ಅವರ ಕುಟುಂಬದ ಮೇಲೂ ಪರಿಣಾಮ ಬೀರಿದೆ. ಭಾರತೀಯ ಮಹಿಳೆಯನ್ನು ವಿವಾಹವಾಗಿರುವ ಅವರು ಸಾಗರೋತ್ತರ ಭಾರತದ ನಾಗರಿಕ ಸ್ಥಾನಮಾನವನ್ನು(ಒಸಿಐ) ಹೊಂದಿದ್ದರು.
ಕಳೆದ 4 ತಿಂಗಳ ಹಿಂದೆ ಫ್ರೆಂಚ್ ಪತ್ರಕರ್ತ ವನೇಸಾ ದೌಗ್‌ನಾಕ್ ಅವರಿಗೆ ವರ್ಕ್ ಪರ್‌ಮಿಟ್ ನಿರಾಕರಿಸಿದ ಕಾರಣ ಅವರು ಭಾರತವನ್ನು ತೊರೆದಿದ್ದರು. ಎನ್‌ಡಿಎ ಸರ್ಕಾರ 2014ರಿಂದ ಮೇ 2023ರ ಅವಧಿಯಲ್ಲಿ 102 ಜನರ ಒಸಿಐ ಅನುಮತಿಯನ್ನು ರದ್ದುಪಡಿಸಿದೆ.
