ಯಡಿಯೂರಪ್ಪ ಮೇಲಿನ ಪೋಕ್ಸೋ ಕೇಸು; ನಾವೆಲ್ಲರೂ ಮನುಷ್ಯರಾಗಬೇಕಿದೆ

Date:

ಕರ್ನಾಟಕದ ಕುರಿತು ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ. ಆದರೆ, ಕಳೆದ ಮೂರು ತಿಂಗಳಲ್ಲಿ ನಡೆದ ಒಂದು ವಿದ್ಯಮಾನದ ಕಾರಣದಿಂದ ನಾವೆಲ್ಲರೂ ತಲೆತಗ್ಗಿಸಬೇಕಿದೆ. ಅದು ಕೇವಲ ಪ್ರಜ್ವಲ್‌ ರೇವಣ್ಣ ಕೇಸು ಮಾತ್ರವಲ್ಲ. ಅದಕ್ಕಿಂತ ಮುಂಚೆಯೇ ಬೆಳಕಿಗೆ ಬಂದ ಬಿ.ಎಸ್ ಯಡಿಯೂರಪ್ಪನವರ ಮೇಲಿನ ಪೋಕ್ಸೋ ಕೇಸು, ಅಂದರೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕೇಸು.

ಇದರಲ್ಲಿ ಯಡಿಯೂರಪ್ಪನವರು ಆರೋಪಿ. ಅವರು ನಡೆದುಕೊಂಡಿರುವ ರೀತಿ, ಅವರ ಪರವಾಗಿ ಬಿಜೆಪಿಯ ನಾಯಕರುಗಳು ನೀಡುತ್ತಿರುವ ಸಮರ್ಥನೆ ಮಾತ್ರ ತಲೆ ತಗ್ಗಿಸುವಂಥದ್ದಲ್ಲ; ರಾಜ್ಯ ಸರ್ಕಾರ, ಪೊಲೀಸ್‌ ಇಲಾಖೆ ಮತ್ತು ನ್ಯಾಯಾಂಗ ನಡೆದುಕೊಂಡಿರುವ ರೀತಿಯೂ ಅಕ್ಷಮ್ಯವಾದುದು.

ಇದು 1992ರಲ್ಲೇ ಭಾರತ ಸರ್ಕಾರವೂ ಸಹಿ ಹಾಕಿರುವ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸನ್ನದು, 2012ರಲ್ಲಿ ಭಾರತ ಸರ್ಕಾರವು ಜಾರಿಗೆ ತಂದ ಪೋಕ್ಸೋ ಕಾಯಿದೆಯ ಆಶಯ ಮತ್ತು ನಿಯಮಗಳಿಗೆ ವಿರುದ್ಧವಾದುದು. ಇದರಿಂದ ಕಾನೂನಿನ ಸ್ಪಿರಿಟ್ಟಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ ಮಾತ್ರವಲ್ಲಾ, ನಾವು ಮನುಷ್ಯರಾಗುವುದಕ್ಕೇ ವಿರುದ್ಧವಾಗಿ ನಡೆದುಕೊಂಡಿದ್ದೀವಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಮ್ಮದು ಪ್ರಜಾತಾಂತ್ರಿಕ ಸಮಾಜ, ಮನುಷ್ಯ ಸಮಾಜ. ಇದು ಇದ್ದಕ್ಕಿದ್ದಂತೆ ನೂರಾರು ವರ್ಷಗಳ ಕೆಳಗೆ ಅಥವಾ ದೇಶಕ್ಕೆ ಸ್ವಾತಂತ್ರ್ಯ ಬಂದ ತಕ್ಷಣ ಮಾನವೀಯ ಸಮಾಜ ಆಗಲಿಲ್ಲ. ದೌರ್ಜನ್ಯಗಳನ್ನ ತಡೆಯೋಕೆ ಏನು ಮಾಡಬೇಕು, ಮನುಷ್ಯರು ಘನತೆಯಿಂದ ಜೀವನ ಮಾಡೋಕೆ ಏನು ಮಾಡಬೇಕು? ಮಹಿಳೆಯರು, ದಲಿತರು ಗೌರವದ ಬದುಕು ಸಾಗಿಸಲು ಏನು ಅಗತ್ಯ ಇತ್ಯಾದಿ ಇತ್ಯಾದಿಗಳನ್ನ ಹಂತಹಂತವಾಗಿ ಅರ್ಥ ಮಾಡಿಕೊಳ್ಳುತ್ತಾ, ಅದಕ್ಕೆ ಬೇಕಾದ ಕಾನೂನುಗಳನ್ನ, ನಿಯಮಗಳನ್ನ, ಕಾರ್ಯಕ್ರಮಗಳನ್ನ ರೂಪಿಸ್ತಾ ಬರಲಾಗಿದೆ. ಅಂತದ್ದರ ಭಾಗವಾಗಿ ಬಂದಿರೋದೇ ಪೋಕ್ಸೋ ಕಾನೂನು.

ಈ ಪ್ರಪಂಚದಲ್ಲಿ ಲೈಂಗಿಕ ದೌರ್ಜನ್ಯ ಸಾಮಾನ್ಯ ಅನ್ನೋ ರೀತಿ ಆಗಿದೆ. ಅದರಲ್ಲೂ ದುರ್ಬಲರ ಮೇಲೆಯೇ ಲೈಂಗಿಕ ದೌರ್ಜನ್ಯ ಹೆಚ್ಚಾಗಿ ನಡೀತದೆ. ಮಹಿಳೆಯರು ದುರ್ಬಲರು ಅಂತ ಗಂಡಿನ ಮನಸ್ಸಿನಲ್ಲಿರೋ ಕಾರಣಕ್ಕೇ ಲೈಂಗಿಕ ದೌರ್ಜನ್ಯ ಹೆಚ್ಚು. ಅದರಲ್ಲೂ ಬಡವರ ಮೇಲೆ ಹೆಚ್ಚು. ಹಾಗೆಯೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸುಲಭ ಮತ್ತು ಅವರನ್ನ ದೈಹಿಕವಾಗಿ ಮಣಿಸಬಹುದು; ಮಾನಸಿಕವಾಗಿ ಹೆದರಿಸಬಹುದು. ಹಾಗಾಗಿ ಸಿಕ್ಕಿ ಹಾಕಿಕೊಳ್ಳುವ ಭಯವೂ ಕಡಿಮೆಯೆಂದು ಸಮಾಜ ನಿಧಾನಕ್ಕೆ ಅರ್ಥ ಮಾಡಿಕೊಂಡಿದೆ. ಅದನ್ನ ಅರ್ಥ ಮಾಡಿಕೊಂಡ ಮೇಲೆ ಅದಕ್ಕೆ ತಕ್ಕಂತೆ ಕಾನೂನುಗಳನ್ನೂ ಮಾಡಿದೆ.

ಅದನ್ನ ಮೊದಲು ನಮ್ಮ ದೇಶದಲ್ಲೇ ಮಾಡಿದ್ದಲ್ಲ. ನಾವು ಅಷ್ಟೊಂದು ಸೆನ್ಸಿಬಲ್‌, ಸೆನ್ಸಿಟಿವ್‌ ಜನ ಆಗಿರಲಿಲ್ಲ. ಅಂದರೆ, ಅಷ್ಟೊಂದು ಸಂವೇದನಾಶೀಲತೆ ನಮ್ಮಲ್ಲಿ ಇರಲಿಲ್ಲ. ಮೊದಲು ಅದನ್ನು ವಿಶ್ವಸಂಸ್ಥೆ ಒಂದು ಸನ್ನದಿನ ಮುಖಾಂತರ 1989ರಲ್ಲಿ ಜಾರಿಗೆ ತಂದಿತು. ಅದು ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿಯ ಸಮಾವೇಶದಲ್ಲಿ ಮಕ್ಕಳ ಹಕ್ಕುಗಳ ಕುರಿತಾದ ಸಮ್ಮೇಳನದಲ್ಲಿ ಆದ ನಿರ್ಣಯ. ಅದಕ್ಕೆ ಭಾರತ 1992ರ ಡಿಸೆಂಬರ್‌ 11ಕ್ಕೆ ಸಹಿ ಹಾಕಿತು. ಇದನ್ನ ಪೋಕ್ಸೋ ಕಾಯ್ದೆಯ ಆರಂಭದಲ್ಲೆ, ಅದರ ಪ್ರಸ್ತಾವನೆಯಲ್ಲೇ ಹೇಳಿದ್ದಾರೆ.

ಆ ಅಂತರ್‌ ರಾಷ್ಟ್ರೀಯ ಸನ್ನದಿನ Article 19 ಮತ್ತು Article 34ರಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಯಲು ಸರ್ಕಾರಗಳು ಏನೇನು ಮಾಡಬೇಕು ಅನ್ನೋದನ್ನ ಹೇಳಲಾಗಿದೆ. ಅದಕ್ಕೆ ಸಹಿ ಹಾಕಿದ 20 ವರ್ಷಗಳ ನಂತರ ನಮ್ಮ ದೇಶ ಎಚ್ಚೆತ್ತುಕೊಂಡು ಪೋಕ್ಸೋ ಕಾನೂನನ್ನ ತಂದಿತು. ಅಂದರೆ ನಾವು ಮನುಷ್ಯರಾಗೋದಕ್ಕೆ ಎಷ್ಟು ತಡ ಮಾಡ್ತೀವಿ ಅಂತ ನೋಡಿ.

ಮನುಷ್ಯರಾಗೋದಕ್ಕೂ ಇದಕ್ಕೂ ಏನು ಸಂಬಂಧ? ಏನು ಸಂಬಂಧ ಅಂದರೆ, ದುರ್ಬಲರ ಮೇಲೆ, ಮಕ್ಕಳಂತಹ ದೈಹಿಕವಾಗಿ ದುರ್ಬಲರಾದವರು, ಯಾವಾಗ ಬೇಕಾದರೂ ದೌರ್ಜನಕ್ಕೆ ಒಳಗಾಗದವರನ್ನ ರಕ್ಷಣೆ ಮಾಡಬೇಕು ಅಂತ ಅನ್ನಿಸೋದು ಒಂದು instinct ಅಂತ ನಮಗೆ ಅನ್ನಿಸಬಹುದು. ಆದರೆ, ಅದು ಒಂದು ಸಮಾಜದಲ್ಲಿ ಮಾನವೀಯತೆ ಬೆಳೀತಾ, ಬೆಳೀತಾ, ಅದಕ್ಕೊಂದು ಕಾನೂನಿನ ಅಗತ್ಯ ಇದೆ ಮತ್ತು ಆ ಕಾನೂನು ದೊಡ್ಡವರಿಗೆ ಇರುವ ಕಾನೂನಿನ ಥರ ಇದ್ದರೆ ಸಾಕಾಗಲ್ಲ. ಜೊತೆಗೆ ಇನ್ನೂ ಒಂದು ಸಮಸ್ಯೆ ಇದೆ. ಅದೇನು ಅಂದರೆ, ಮಕ್ಕಳಲ್ಲಿ ಮಾನಸಿಕವಾಗಿ ಸಮಸ್ಯೆ ಇರುವವರು ಇರಬಹುದು, ಅವರಿಗೆ ತನ್ನ ಮೇಲೆ ಏನಾಗ್ತಿದೆ ಅಂತ ಗೊತ್ತಾಗೋದೇ ಕಷ್ಟ ಇರಬಹುದು. ಅದನ್ನ ತನ್ನ ಮನೆಯವರಿಗೆ ಹೇಳಿಕೊಳ್ಳಬೇಕಾ, ಇಲ್ಲವಾ ಅಂತಲೂ ಗೊತ್ತಿರದೇ ಇರಬಹುದು. ಹಾಗಾಗಿ, ಅದೆಲ್ಲವನ್ನೂ ಅಡ್ರೆಸ್‌ ಮಾಡುವಂತಹ ಒಂದು ಕಾನೂನು ಬೇಕು ಅಂತ ಒಂದು ಸಮಾಜಕ್ಕೆ ಅನ್ನಿಸಿದ ದಿನ ಅದು ಇನ್ನೂ ಹೆಚ್ಚು ಮಾನವೀಯವಾಯಿತು ಅಂತ ಅರ್ಥ. ಅದರಲ್ಲೂ ತೊಂದರೆಗೆ ಒಳಗಾದವರಿಗೆ, ದೂರು ಕೊಟ್ಟರೆ ತಮ್ಮನ್ನು ರಕ್ಷಿಸಲು ಒಂದು ವ್ಯವಸ್ಥೆ ಇದೆ ಅಂತ ಖಾತ್ರಿ ಆಗಬೇಕು. ಇಲ್ಲವಾದರೆ, ಅವರು ಇನನ್ನೂ ಹೆಚ್ಚು ತೊಂದರೆಗೆ ಸಿಲುಕಬಾರದು. ಆಗ ಆ ಸಮಾಜ ಮಾನವೀಯವಾಗಿದೆ ಅಂತ ಅರ್ಥ.

ಇದು ಹೇಗೆ ಅಂತ ಗೊತ್ತಾಗಬೇಕು ಅಂದರೆ, ಯಡಿಯೂರಪ್ಪನವರ ಕೇಸನ್ನೇ ತೆಗೆದುಕೊಳ್ಳಿ;

ಈ ಆರೋಪ ಅವರ ಮೇಲೆ ಬಂದಿದ್ದು ಹೊರಜಗತ್ತಿಗೆ ಗೊತ್ತಾಗಿದ್ದು ಯಾವಾಗ? ಮಾರ್ಚ್‌ 15ನೇ ತಾರೀಕು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಯಡಿಯೂರಪ್ಪನವರ ವಿರುದ್ಧ ಒಂದು ತಾಯಿ ಮತ್ತು ಮಗಳು ಲೈಂಗಿಕ ದೌರ್ಜನ್ಯದ ದೂರನ್ನ ಕೊಡೋಕೆ ಹೋಗಿದ್ದಾರಂತೆ ಮತ್ತು ಪೊಲೀಸರು ಅವರ ದೂರನ್ನ ದಾಖಲಿಸಿಕೊಳ್ತಾ ಇಲ್ಲ ಅಂತ ಗೊತ್ತಾಯಿತು. ಆಗ ಸ್ಟೇಷನ್ನಿಗೆ ಹೋದಾಗ ಅದು ನಿಜ ಅಂತ ಮಾಧ್ಯಮದವರಿಗೆ ಗೊತ್ತಾಯ್ತು. ಅಷ್ಟು ಹೊತ್ತಿಗೆ ಆ ತಾಯಿ, ಮಗಳು ಸ್ಟೇಷನ್ನಿಗೆ ಹೋಗಿ ಹಲವಾರು ಗಂಟೆಗಳೇ ಆಗಿಬಿಟ್ಟಿತ್ತು.

ಮಾಧ್ಯಮದವರೂ ಹೋಗಿದ್ದರಿಂದಲೆ ಕೇಸು ದಾಖಲಾಯಿತು. ಅಷ್ಟೇ ಅಲ್ಲ, ಯಾವ ಹುಡುಗಿಯ ಮೇಲೆ ದೌರ್ಜನ್ಯ ನಡೆದಿದೆ ಎಂದು ಹೇಳಲಾಯಿತೋ, ಆ ಹುಡುಗಿ ಅಪ್ರಾಪ್ತ ವಯಸ್ಕೆಯಾದ್ದರಿಂದ ಪೋಕ್ಸೋ ಸೆಕ್ಷನ್ನುಗಳನ್ನೂ ಹಾಕಲಾಗಿತ್ತು. ಯಡಿಯೂರಪ್ಪನವರ ಮನೆ ಧವಳಗಿರಿ ಅಲ್ಲಿಂದ ಒಂದು -ಒಂದೂವರೆ ಕಿ.ಮೀ. ದೂರ ಇರಬಹುದು. ಅವತ್ತೇ ರಾತ್ರಿ ಅವರ ಬಂಧನ ಆಗಬಹುದು ಅಂತ ಎಲ್ಲರೂ ಅಂದುಕೊಂಡರು. ಅಂಥದ್ದೇನೂ ಆಗಲಿಲ್ಲ.

ಯಡಿಯೂರಪ್ಪ ವಿರುದ್ಧ ಪೋಕ್ಸೊ | 'ರೇಪ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಒಳ ಕರಕೊಂಡು  ಹೋಗಿದ್ದೆ': ಎಫ್‌ಐಆರ್‌ನಲ್ಲಿರೋದೇನು?

ಬದಲಿಗೆ ಮರುದಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಮನೆ ಮುಂದೆ ಪತ್ರಿಕಾಗೋಷ್ಠಿ ಕರೆದರು. ಅವರು ಚುನಾವಣೆಯಲ್ಲಿ ಹೇಗೆ ತಾವು ಗರಿಷ್ಠ ಸೀಟುಗಳನ್ನ ಗೆಲ್ತೀವಿ ಅನ್ನೋದರ ಬಗ್ಗೆ ಆತ್ಮವಿಶ್ವಾಸದಿಂದ ಮಾತಾಡಿದ್ರು. ಆಮೇಲೆ ಯಾರೋ ಪ್ರಶ್ನೆ ಕೇಳಿದ ಮೇಲೆ ನಗುನಗುತ್ತಾ ಉತ್ತರಿಸಿದರು. ಕಾನೂನಿನ ಪ್ರಕಾರ ನಡೆಯಲಿ, ತಾನು ಅದರಿಂದ ಹೊರಬರುತ್ತೇನೆ ಎಂದು ಹೇಳಿದರು. ಅವತ್ತು ಅಥವಾ ಮರುದಿನ ಅಥವಾ ಅದರ ಮರುದಿನ ಯಡಿಯೂರಪ್ಪನವರನ್ನು ಬಂಧಿಸಿದ ಅಥವಾ ಠಾಣೆಗೆ ಕರೆದು ವಿಚಾರಣೆ ನಡೆಸಿದ ಯಾವ ಸುದ್ದಿಯೂ ಎಲ್ಲೂ ಪ್ರಕಟವಾಗಲಿಲ್ಲ. ಬದಲಿಗೆ ಪ್ರಕಟವಾದದ್ದು ಬೇರೆ. ಅದೇನೆಂದರೆ ಆ ಅಪ್ರಾಪ್ತ ಬಾಲಕಿಯ ತಾಯಿ 59 ದೂರುಗಳನ್ನು ವಿವಿಧ ಪ್ರಭಾವಿಗಳ ವಿರುದ್ಧ ದಾಖಲಿಸಿದ್ದಾರಂತೆ. ಆಕೆಗೆ ದೂರು ಕೊಡುವುದೇ ಕೆಲಸ ಅಂತೆ.

ವಾಸ್ತವ ಏನೆಂದರೆ, ಆಕೆ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದದ್ದು ಕೇವಲ ಆರು ಮತ್ತು ಆ ಆರು ದೂರುಗಳ ಮೇಲೆ ಕ್ರಮ ಆಗದೇ ಇದ್ದಾಗ, ಮೇಲಧಿಕಾರಿಗಳಿಗೆ ಬರೆದಿದ್ದ ಪತ್ರಗಳು 53 ಅಷ್ಟೇ. ಆದರೆ, ಅದನ್ನು ಈ ರೀತಿ ಬಿಂಬಿಸಿದರು. ದುರಂತ ಏನು ಗೊತ್ತೇ? ದೂರಿನ ಸುದ್ದಿ ಎಲ್ಲಾ ಮಾಧ್ಯಮಗಳಿಗೂ ತಲುಪುವ ಮೊದಲೆ, ಈ 59 ದೂರುಗಳ ಪಟ್ಟಿ ಎಲ್ಲರಿಗೂ ತಲುಪಿತ್ತು. ಆ ರಾತ್ರಿ, ತಾಯಿ-ಮಗಳು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದೂರು ಕೊಡೋಕೆ ಒದ್ದಾಡ್ತಾ ಇದ್ದ ಸಂದರ್ಭದಲ್ಲೆ ಪೊಲೀಸ್‌ ಇಲಾಖೆಯಲ್ಲಿ ಯಡಿಯೂರಪ್ಪನವರ ಬಂಟರಿಗೆ ಈ 59 ದೂರುಗಳ ಪಟ್ಟಿಯನ್ನು ಹೆಕ್ಕಿ ತೆಗೆದು, ಅದನ್ನ ನೀಟಾಗಿ ಟೇಬಲ್‌ ಮಾಡಿ, ಡಿಸೈನ್‌ ಮಾಡಿ, ಪ್ರಿಂಟ್‌ ಔಟ್‌ ಕೊಟ್ಟವರು ಯಾರು? ಇದು ಏನನ್ನ ತೋರಿಸುತ್ತೆ?

ಇಲ್ಲೇ ನೀವು ಯೋಚಿಸಬೇಕು. ಪ್ರಬಲರು ಮತ್ತು ದುರ್ಬಲರ ನಡುವೆ ಹೀಗೆ ಕದನ ಶುರುವಾದಾಗ ಏನೇನಾಗುತ್ತೆ ಅಂತ. ಹಾಗಾಗಿಯೇ ಪೋಕ್ಸೋ ಕೇಸಿನಲ್ಲಿ ಮಕ್ಕಳ ರಕ್ಷಣೆಗೆ ಹಲವು ಸೂಚನೆಗಳಿವೆ. ಆದರೆ, ಅಂತಹ ಯಾವ ಸೂಚನೆಯೂ ಈ ಕೇಸಿನಲ್ಲಿ ಕೆಲಸಕ್ಕೆ ಬರಲ್ಲ.

ಉದಾಹರಣೆಗೆ ಇಲ್ಲಿ ನೋಡಿ. ಪೋಕ್ಸೋ ಕೇಸಿನ 9(ಕೆ)ಯಲ್ಲಿ whoever, taking advantage of a child’s mental or physical disability, commits sexual assault on the child; ಮತ್ತು
9(ಪಿ)ಯಲ್ಲಿ whoever, being in a position of trust or authority of a child, commits sexual assault on the child in an institution or home of the child or anywhere else;
is said to commit aggravated sexual assault.
ಈ ಅಗ್ರವೇಟೆಡ್‌ ಸೆಕ್ಸ್ಯುಯಲ್‌ ಅಸಾಲ್ಟ್‌ ಅಂದರೇನು ಅಂತಲೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವಿವರಿಸುತ್ತದೆ.
Where the offence sexual assault is committed by certain persons or in certain circumstances, the offence is said to become aggravated, i.e., it becomes more serious and the punishment is much greater.

ಯಾಕೆ ಹೀಗೆ? ಒಬ್ಬ ವ್ಯಕ್ತಿಯ ಮೇಲೆ ವಿಶ್ವಾಸವಿಟ್ಟಾಗ, ಆತ ತಮಗೆ ರಕ್ಷಣೆ ಕೊಡಬಹುದು ಅಂತ ಹೋದಾಗ ಆತನೇ ಲೈಂಗಿಕ ದೌರ್ಜನ್ಯ ಎಸಗಿದರೆ ಅದು ತೀವ್ರತರದ ಅಪರಾಧ ಅಂತ ಪೋಕ್ಸೋ ಹೇಳುತ್ತೆ. ಅಷ್ಟೇ ಅಲ್ಲ, ಒಂದು ವೇಳೆ ಆ ಮಗುವಿಗೆ ಮಾನಸಿಕ ಅಥವಾ ದೈಹಿಕ ದೌರ್ಬಲ್ಯ ಇದ್ದರೆ ಅಂಥದ್ದೂ ಸಹಾ ಇನ್ನೂ ಹೆಚ್ಚಿನ ಶಿಕ್ಷೆ ಆಗಬೇಕಕು ಅಂತ ಪೋಕ್ಸೋ ಹೇಳುತ್ತೆ. ಪೋಕ್ಸೋ ಕಾಯ್ದೆಯ 10ನೇ ಭಾಗದಲ್ಲಿ Whoever, commits aggravated sexual assault shall be punished with imprisonment of either description for a term which shall not be less than five years but which may extend to seven years, and shall also be liable to fine

ಈ ಕೇಸಲ್ಲಿ ಇದು ಯಾಕೆ ಮುಖ್ಯ ಅಂದರೆ, ದೂರು ದಾಖಲಾದ ಮರುದಿನ ರಾಜ್ಯದ ಗೃಹ ಸಚಿವರು ಒಂದು ಹೇಳಿಕೆ ಕೊಟ್ಟರು. ಆಕೆಗೆ ಮಾನಸಿಕ ಸ್ಥಿತಿ ಸರಿ ಇಲ್ಲವಂತೆ ಅಂತ. ಮಾನಸಿಕ ಸ್ಥಿತಿ ಸರಿ ಇಲ್ಲದಿದ್ದರೆ ಇಂತಹ ಲೈಂಗಿಕ ದೌರ್ಜನ್ಯ ಜಾಸ್ತಿ ಆಗುತ್ತೆ. ಇದು ನಿಮಗೆ ಗೊತ್ತಾಗದೇ ಇದ್ದರೆ ಹೇಗೆ? ನಂತರ ಈ ಪ್ರಕರಣವನ್ನು ಸಿಐಡಿಗೆ ನೀಡಲಾಯಿತು. ಧ್ವನಿ ಪರೀಕ್ಷೆ ಆಯಿತು ಅಂತ ಗೊತ್ತಾಯಿತು. ನಂತರ ಏನೂ ಆಗಿಲ್ಲವೇನೋ ಎಂಬಂತೆ ಚುನಾವಣೆ ಮುಗಿದು ಹೋಯಿತು. ಆ ನಂತರವೂ ಏನೂ ಆಗಲಿಲ್ಲ. ಹ್ಞಾಂ, ಆಕೆ ತೀರಿಕೊಂಡರು.
ನಂತರ ಆಕೆಯ ಮಗ ಕೋರ್ಟಿಗೆ ಹೋಗಿ ಈ ಸಂಬಂಧ ಕೇಸು ದಾಖಲಿಸಿದ ಮೇಲೆ, ಪೊಲೀಸರು ಪೋಕ್ಸೋ ನ್ಯಾಯಾಲಯಕ್ಕೆ ಹೋಗಿ ವಾರಂಟು ಪಡೆದುಕೊಂಡರು.

ಪರಮೇಶ್ವರ್‌

ವಾರಂಟು ಕೈ ಸೇರುವ ಮೊದಲೇ ಯಡಿಯೂರಪ್ಪನವರು ದೆಹಲಿಗೆ ಹೋಗಿದ್ದರು. ಅವತ್ತಾದರೂ ಕೂಡಲೇ ದೆಹಲಿಗೆ ಹೋಗಿ ಬಂಧಿಸಲಿಲ್ಲ. ದೆಹಲಿಗೆ ಹೋದ ಮೇಲೆ ಅವರನ್ನು ಅಲ್ಲಿಗೆ ಹೋಗಿ ಅರೆಸ್ಟ್ ಮಾಡಿಕೊಂಡು ಬರಬೇಕು ಎಂದರೆ ವಾರೆಂಟ್ ಬೇಕು. ಹಾಗಾಗಿ ಪೋಲಿಸರು ಪೋಕ್ಸೊ ನ್ಯಾಯಾಲಕ್ಕೆ ಹೋಗಿ ವಾರೆಂಟ್ ಪಡೆದುಕೊಂಡರು. ಅವತ್ತಿನ ದಿನ ಪೋಲಿಸರು ದೆಹಲಿಗೆ ಹೋಗಿ ಬಂಧಿಸುತ್ತಾರೆ ಎಂದು ಅಂದುಕೊಂಡಾಗ ಅದು ಕೂಡ ಪೋಲಿಸರಿಗೆ ಸಾಧ್ಯವಾಗಲಿಲ್ಲ. ಮಾರನೆಯ ದಿನ ಯಡಿಯೂರಪ್ಪನವರು ರಾಜ್ಯದ ಹೈಕೋರ್ಟ್‌ಗೆ ಹೋದರು. ಹೈಕೋರ್ಟ್‌ನಲ್ಲಿ ಇದೆಲ್ಲದರ ಬಗ್ಗೆ ಚರ್ಚೆಯಾಯಿತು. ದುರಂತ ಅಂದರೆ ಆಕೆ ತೀರಿಕೊಂಡು ಹೋಗಿದ್ದ ಆಕೆಯ ಮೇಲೆ ಮುಂಚಿತವಾಗಿಯೆ 59 ಕೇಸ್ ಕೊಟ್ಟಿದ್ದಳು ಎಂದು ಸುಳ್ಳು ಆರೋಪವನ್ನು ಮಾಡಿದ್ದರು. ಆದರೆ ಅದು ವಾಸ್ತವವಾಗಿರಲಿಲ್ಲ. ಅದು ಆರ್‌ಕೆಎಸ್‌ ಮಾತ್ರವಾಗಿತ್ತು.

ಆರ್‌ಕೆಎಸ್‌ ಆಸ್ತಿಗೆ ಮಾತ್ರ ಸಂಬಂಧಪಟ್ಟಿದ್ದು ಮತ್ತು ತನ್ನ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರವಾಗಿತ್ತು. ಆದರೆ ಮತ್ತೆ ಕೋರ್ಟ್‌ನಲ್ಲಿ ಪುನಃ ಆಕೆಯ ನಡತೆಯನ್ನು ಪರೀಕ್ಷಿಸಲಾಯಿತು. ಆ ಮಹಿಳೆ ಸುಮಾರು ಕೇಸ್‌ಗಳನ್ನು ಕೊಟ್ಟಿದ್ದಾಳೆ ಎಂದು ಆ ಎಲ್ಲಾ ವಿಚಾರಗಳು ನಡೆದವು. ಅದರಲ್ಲಿ ಈ ಕೇಸ್ ಕೂಡ ಒಂದು.ಈ ಕೇಸ್ ಒಂದು ಸಮಾಜ ಮಾನವೀಯವಾಗಿರುವುದಕ್ಕೆ ಸಾಕ್ಷಿ ಅಲ್ಲ. ಇದೆಲ್ಲ ನಡೆದ ಮೇಲೆ ಯಡಿಯೂರಪ್ಪನವರನ್ನು ಅರೆಸ್ಟ್ ಮಾಡುವಂತಹ ವಿಚಾರದಲ್ಲಿ ತಕ್ಷಣವೇ 17ನೇ ತಾರೀಖಿನವರೆಗೂ ಅರೆಸ್ಟ್ ಮಾಡಬಾರದು ಎಂದು ಆದೇಶ ಹೊರಡಿಸಲಾಯಿತು. ಹಾಗಾದರೆ ಸಮಸ್ಯೆಯೆಂದರೆ ಯಡಿಯೂರಪ್ಪನವರೂ ಎಲ್ಲೂ ಓಡಿಹೋಗುವುದಿಲ್ಲ ಎಂಬ ವಿಚಾರ ಬಂದಿತು. ಪ್ರಜ್ವಲ್ ರೇವಣ್ಣ ಕೂಡ ಠಾಂ ಡಿಕಂಡ್ ಹ್ಯಾರಿ ಆಗಿರಲಿಲ್ಲ ಮತ್ತು ಆತ ದೇಶ ಬಿಟ್ಟು ಓಡೋಗಿದ್ದು ಕೂಡ ನಮಗೆಲ್ಲರಿಗೂ ಗೊತ್ತಿದೆ.

ಪ್ರಜ್ವಲ್‌ ರೇವಣ್ಣ

ಇದು ಒಂದು ದೇಶ ಒಂದು ಸಮಾಜ ಮಾನವೀಯವಾಗಿದೆಯಾ ಇಲ್ವಾ ಎಂಬುದಕ್ಕೆ ಸಾಕ್ಷಿಯಾಗಿ ನಮ್ಮ ಸುತ್ತ ಮುತ್ತಲೂ ಕಾಣುತ್ತವೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ದೂರು ಬಂದರೆ ಒಂದು ಸಮಾಜ ಯಾವ ರೀತಿಯಲ್ಲಿ ಸಂವೇದನಾ ಶೀಲವಾಗಿ ನಡೆದುಕೊಳ್ಳಬೇಕು. ಒಂದುವೇಳೆ ನಮಗೆ ಆ ಮಗು ಮಾನಸಿಕವಾಗಿ ದುರ್ಬಲವಾಗಿದ್ದರೆ ಬಹಳಷ್ಟು ಕೇರ್‌ಪುಲ್‌ ಆಗಿ ಇರಬೇಕಾಗುತ್ತದೆ.

ದೈಹಿಕವಾಗಿ, ಮಾನಸಿಕವಾಗಿ ದುರ್ಬಲವಾಗಿರುವಂತಹ ಮಕ್ಕಳ ಮೇಲೆ ಇಂತಹ ದೌರ್ಜನ್ಯ ನಡೆಯುವಂತಹದ್ದು ಇನ್ನೂ ಜಾಸ್ತಿಯಿರುತ್ತದೆ. ಹಾಗಾಗಿ ಪೋಕ್ಸೊ ಕಾನೂನು ಯಾವ ರೀತಿಯಾಗಿ ರೂಪುಗೊಂಡಿದೆ ಎಂದರೆ what is important is the crime MUST BE REPORTED. If a person fails to report an offence under POCSO, the person can be punished with imprisonment of up to 6 months and / or with fine.

ಒಂದುವೇಳೆ ಒಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಅಂತ ಗೊತ್ತಾದರೆ ಅದನ್ನು ರಿಪೋರ್ಟ್ ಮಾಡದೇ ಇದ್ದರೆ, ಕಂಪ್ಲೇಂಟ್ ಕೊಡದೆಯಿದ್ದರೆ ಅದು ಅಪರಾಧವೆಂದು ಈ ಪೋಕ್ಸೊ ಕಾನೂನು ಹೇಳುತ್ತದೆ. ಅದು ನಾವು ಮಾನವೀಯವಾಗುತ್ತಿದ್ದೀವಿ ಎನ್ನುವಂತಹ ಸೂಚನೆ. ಅದನ್ನು ಆ ಮಗು ಹೇಳಲಿಕ್ಕೆ ಗೊತ್ತಾಗುವುದಿಲ್ಲ ಮತ್ತು ಮಗುವಿಗೆ ಹೀಗಾಗಿರುತ್ತದೆ. ಆದರೆ ತಂದೆ ತಾಯಿ ಬೇರೆ ಕಾರಣಕ್ಕಾಗಿ ನಮಗೆ ಇದನ್ನು ರಿಪೋರ್ಟ್ ಮಾಡುವುದು ಬೇಡ ಅಂತ ಅವರು ಹೇಳಿದರೆ ಆ ಮಗುವಿನ ಹಕ್ಕಿನ ಪ್ರಶ್ನೆ ಏನು? ಎಂಬುದನ್ನು ತಂದೆ ತಾಯಿ ತೀರ್ಮಾನ ಮಾಡಲಿಕ್ಕೆ ಅದು ಬರುವುದಿಲ್ಲ.

ಮಗುವಿನ ಮೇಲೆ ನಡೆದಂತಹ ಲೈಂಗಿಕ ದೌರ್ಜನ್ಯ ನಡೆಸಿದವರು ಮತ್ತೆ ಮತ್ತೆ ಬೇರೆ ಬೇರೆ ಮಕ್ಕಳ ಮೇಲೆ ದೌರ್ಜನ್ಯ ನಡೆಸಬಹುದು. ಹಾಗಾಗಿ ಈ ಮಗುವಿನ ಹಕ್ಕನ್ನು ಮತ್ತು ಬೇರೆ ಮಗುವಿನ ಹಕ್ಕನ್ನು ಕಾಪಾಡುವಂತಹದ್ದು ಈ ಸಮಾಜದ ಕರ್ತವ್ಯ. ಆ ಕರ್ತವ್ಯವನ್ನು ಯಾರಾದರೂ ಮಾಡಿದರೆ ನಾವು ಹೆಚ್ಚಾಗಿ ಸಂವೇದನಾ ಶೀಲವಂತರಿಗೆ ಕೊಡಬೇಕು.

ಯಡಿಯೂರಪ್ಪ

ಯಾರು ಯಾರ ಮೇಲೆ ಬೇಕಾದರೂ ದೂರನ್ನು ಕೊಟ್ಟ ತಕ್ಷಣ ಅವರನ್ನು ಎಳೆದುಕೊಂಡು ಬಂದು ಅರೆಸ್ಟ್ ಮಾಡಿ ಮಾರನೇ ದಿವಸವೇ ಅವರನ್ನು ಕೋರ್ಟ್‌ಗೆ ಹಾಜರುಪಡಿಸಬಹುದು. ಆದರೆ ಅದಕ್ಕೂ ಮುಂಚೆ ಸಮಾಜ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಯಾಕೆ ನೀವು ಮೂರು ತಿಂಗಳಾದರೂ ಯಡಿಯೂರಪ್ಪನವರನ್ನು ಅರೆಸ್ಟ್ ಮಾಡಲಿಲ್ಲ ಎಂದು ಬೇರೆ ಬೇರೆಯವರು ಕೇಳುತ್ತಿದ್ದಾರೆ. ಇದಕ್ಕೆ ಪೋಲಿಸ್‌ನವರು ಉತ್ತರವನ್ನು ಕೊಡಬೇಕು.ಮತ್ತು ಕಾಂಗ್ರೆಸ್ ಸರ್ಕಾರ ಕೂಡ ಇದಕ್ಕೆ ಉತ್ತರವನ್ನು ಕೊಡಬೇಕು.

ಎಲೆಕ್ಷನ್ ಹತ್ತಿರವಿದೆ ಯಡಿಯೂರಪ್ಪನಂತಹ ನಾಯಕನನ್ನು ನಾವು ಅರೆಸ್ಟ್ ಮಾಡಿಬಿಟ್ಟರೆ ರಾಜ್ಯದಲ್ಲಿರುವಂತಹ ಸಮುದಾಯ ನಮ್ಮ ವಿರುದ್ದ ಬಂದುಬಿಡುತ್ತದೆ ಎಂದು ಸರ್ಕಾರ ಅಂದುಕೊಳ್ತಾ?. ಹಾಗಾದರೆ ಆ ಸಮುದಾಯದ ಬಗ್ಗೆ ನೀವು ಏನು ಅಂದುಕೋಳ್ತೀರಾ? ಅದು ಯಾರೆ ಇರಲಿ ಬಿಜೆಪಿಯ ಸಪೋರ್ಟ್‌ರ್ಸ್‌ ಒಂದುವೇಳೆ ಯಡಿಯೂರಪ್ಪನವರು ಅಂತಹ ಅಪರಾಧವನ್ನು ಮಾಡಿದ್ದೆ ಆದರೆ ಅಂತಹ ಅಪರಾಧವನ್ನು ಯಾರು ಬೇಕಾದರು ಎಸಗಲಿಕ್ಕೆ ಸಾಧ್ಯವಿದೆ ನಮಗೆ ಅದರ ಬಗ್ಗೆ ಗೊತ್ತಿದೆ. ದೊಡ್ಡ ದೊಡ್ಡ ಸ್ಥಾನಗಳಲ್ಲಿರುವಂತಹವರೂ ಲೈಂಗಿಕ ದೌರ್ಜನ್ಯವನ್ನು ಮಾಡುತ್ತಾರೆ. ಮತ್ತು ಪರಿಚಿತರೂ ಪರಿಚಿತರ ಮಕ್ಕಳು/ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಮಾಡುತ್ತಾರೆ. ಹಾಗಾದರೆ ಈ ಸಮಾಜ ಅದನ್ನು ಸಮರ್ಥಿಸಿಕೊಂಡು ಬಿಡುತ್ತಾ?

ಯಾವುದಾದರೂ ಒಂದು ಸಮುದಾಯ ಆ ಸಮುದಾಯಕ್ಕೆ ಸೇರಿದ ಅದರಲ್ಲಿ ಹುಟ್ಟಿದ ಒಬ್ಬ ನಾಯಕ ಇಂತಹ ಅಪರಾಧವನ್ನು ಮಾಡಿದ್ದಾರೆಂದರೆ ಅವರನ್ನು ಸಮರ್ಥಿಸಿಕೊಳ್ಳುತ್ತಾ? ಹಾಗಾದರೆ ನಾವೆಲ್ಲಾ ಏನು ಅಂದುಕೊಳ್ಳುತ್ತಿದ್ದೀವಿ?

ಕರ್ನಾಟಕದ ಜನರನ್ನು ನಾವು ಏನು ಅಂದುಕೊಳ್ಳುತ್ತಿದ್ದೀವಿ? ಚುನಾವಣೆ ಹತ್ತಿರವೆ ಇದೆ ಹಾಗಾಗಿ ಆ ಕೇಸ್‌ನಲ್ಲಿ ಕೈ ಹಾಕಬಾರದು ಅಂದುಕೊಂಡ್ರಾ? ಇಲ್ಲದೆಯಿದ್ದರೆ ಇದಕ್ಕೆ ಉತ್ತರ ಕೊಡುವವರು ಯಾರು? ಯಾಕೆ ಮೂರು ತಿಂಗಳು ಕೈ ಹಾಕಲಿಲ್ಲ. ಕೈ ಹಾಕದೆಯಿದ್ದವರೂ ಈಗಲಾದರೂ ಅದಕ್ಕೆ ಕ್ರಮ ತೆಗೆದುಕೊಳ್ಳಬೇಕಲ್ಲವಾ? ಚುನಾವಣೆ ಮುಗಿದ ನಂತರವಾದರೂ ಕ್ರಮ ತೆಗೆದುಕೊಳ್ಳಬೇಕಲ್ವಾ?

ಚುನಾವಣೆ ನಂತರವೂ ಕ್ರಮ ತೆಗೆದುಕೊಳ್ಳದೆ ದೂರು ಕೊಟ್ಟ ಆ ಮಗುವಿನ ತಾಯಿ ತೀರಿಹೋಗಿ ಆಕೆಯ ಮಗ ನನಗೂ ಕಿರುಕುಳ ಆಗುತ್ತಿದೆ ನಾವು ಯಾರ ಮೇಲೆ ದೂರು ಕೊಟ್ಟಿದ್ದೀವಿ ಅವರ ಕಡೆಯಿಂದ ನಮಗೆ ಅನ್ಯಾಯವಾಗುತ್ತಿದೆ? ಕಿರುಕುಳವಾಗುತ್ತಿದೆ? ಹೈಕೋರ್ಟ್ಗೆ ಹೋದ ಮೇಲೆ ಕೇಸ್ ವಾಪಾಸ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ.

ನೀವು ಅರೆಸ್ಟ್ ಮಾಡುವಂತಹ ಪ್ರೊಸೆಸ್‌ನ್ನು ಮುಂದುವರೆಸುತ್ತೀರಿ ಎಂದರೆ ಇದಕ್ಕೆ ಅರ್ಥವೇನು?
FSL ರಿಪೋರ್ಟ್ ಬಂದಿದೆ. FSL ರಿಪೋರ್ಟ್ ನಮ್ಮ ಕೇಸಿಗೆ ಪೂರಕವಾಗಿದೆ ಎಂದು ನೀವು ಕೋರ್ಟ್‌ನಲ್ಲಿ ಹೇಳುತ್ತಿದ್ದೀರಾ? ಹಾಗಾದರೆ FSL ರಿಪೋರ್ಟ್ ಬಂದು ಏಷ್ಟು ದಿನಗಳಾಯ್ತು? ಅಲ್ಲಿಯತನಕ ನೀವು ಏನು ಮಾಡುತ್ತಿದ್ದೀರಿ? ಇದರಲ್ಲಿ ಬಹಳಷ್ಟು ರೀತಿಯಿಂದಾಗಿ ಕರ್ನಾಟಕಕ್ಕೆ ಅವಮಾನ ಮಾಡುವ ಸಂಗತಿ ಇದರಲ್ಲಿದೆ. ಹಾಗಾಗಿ ನಾವೆಲ್ಲ ತಲೆತಗ್ಗಿಸುವ ವಿಚಾರವಿದೆ ಎಂದು ಏಕೆ ಹೇಳಬೇಕು?

ಪ್ರಜ್ವಲ್-ಬಿಎಸ್‌ವೈ-ದರ್ಶನ್

 

ರಾಜಕೀಯ ಪಕ್ಷಗಳು ಅಧಿಕಾರದಲ್ಲಿರುವಂತಹ ಪಕ್ಷವಿರಲಿ ಅಥವಾ ಯಡಿಯೂರಪ್ಪನವರು ಇರುವಂತಹ ಪಕ್ಷದ ನಾಯಕರಿರಲಿ ಏನೆಲ್ಲಾ ಮಾತನಾಡುತ್ತಿದ್ದಾರೆ? 80 ವರ್ಷದ ಮುದುಕರನ್ನು ಈ ರೀತಿ ಕೋರ್ಟ್‌ನಲ್ಲಿ, ಜೈಲಿನಲ್ಲಿ ನಿಲ್ಲಿಸುತ್ತಿದ್ದಾರೆ ಎಂದು ಹೇಳುವವರಿಗೆ

ಏನು ಹೇಳಬೇಕು? 80 ವರ್ಷದವರೂ ಇಂತಹ ಲೈಂಗಿಕ ದೌರ್ಜನ್ಯವನ್ನು ಮಾಡಬಾರದು ಅಂತ ಇದೆಯಾ?
ಒಂದುವೇಳೆ ಹೆಣ್ಣುಮಗುವಿನ ತಾಯಿ ಆರು ಕಂಪ್ಲೆಂಟ್ ಯಾರ ಮೇಲಾದರೂ ಕೊಟ್ಟಿದ್ದರೆ, ಅಥವಾ 50 ಕಂಪ್ಲೆಂಟ್‌ನ್ನು ಯಾರ ಮೇಲಾದರೂ ಕೊಟ್ಟಿದ್ದರೆ ಆಕೆಯ ಮಗಳ ಮೇಲೆ ಯಾವುದೇ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಆಗುವುದಿಲ್ಲ ಅಂತನಾ? ಯಾರೂ ಇದನ್ನೆಲ್ಲ ತೀರ್ಮಾನ ಮಾಡುತ್ತಾರೆ? ಆ ರೀತಿಯ ತೀರ್ಮಾನವನ್ನು ಈ ದೂರು ದಾಖಲಾದ ಮರುದಿನವೆ ರಾಜ್ಯದ ಗೃಹ ಸಚಿವರು ಯಾವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡುತ್ತಾರೆ? ಈ ವಿಚಾರವಾಗಿ ನಾವು ಹೆಚ್ಚು ಮಾನವೀಯವಾಗಿರಬೇಕು. ಯಾರನ್ನೂ ಕೂಡ ಅಪರಾಧಿ ಎಂದು ಈಗಲೇ ತೀರ್ಮಾನ ಮಾಡಬೇಕಾಗಿಲ್ಲ.

ಆದರೆ, ಪೋಕ್ಸೊದಂತಹ ಕಾನೂನು ಯಾವ ಉದ್ದೇಶದಿಂದ ಬಂದಿದೆ? ಅಂತರಾಷ್ಟ್ರೀಯ ಸನ್ನದು ಎಂಬುವುದು ಏಕೆ ಬಂದಿದೆ? ಅದಕ್ಕೆ ನಮ್ಮ ದೇಶದ ಸರ್ಕಾರ ಯಾಕೆ ಸಹಿ ಹಾಕಿತು? ಇದನ್ನು ನಾವೆಲ್ಲ ಅರ್ಥ ಮಾಡಿಕೊಂಡು ಮನುಷ್ಯರಾಗುವ ಕಡೆಗೆ ಹೋಗಬೇಕಾಗಿದೆ.

ಅದರಲ್ಲೂ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ತಡೆ ಮಾಡಬೇಕಂದರೆ ನಾವಿನ್ನೂ ಹೆಚ್ಚು ಸಂವೇದನಾ ಶೀಲವಾಗಿ ನಡೆದುಕೊಳ್ಳಬೇಕಾಗಿದೆ. ಆ ಸಂವೇದನಾಶೀಲತೆ ಈ ವಿಚಾರದಲ್ಲಿ ಸಂಬಂಧಪಟ್ಟ ಯಾರ ಕಡೆಯಿಂದಲೂ ಕೂಡ ನಡೆದಿಲ್ಲ. ಹಾಗಾಗಿ ಕರ್ನಾಟಕದವರೂ ತಲೆತಗ್ಗಿಸಬೇಕಾಗಿರುವ ವಿಚಾರವಾಗಿದೆ.
ಇನ್ನೂ ಮುಂದೆಯಾದರೂ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಆ ರೀತಿಯಾಗಿ ಕರ್ನಾಟಕ ಈ ಕೇಸನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿತು ಅಂತ ಕೂಡನೂ ಆಗಬೇಕು.

ಸಾಮಾಜಿಕ ಜಾಲತಾಣ

ಬೆಂಗಳೂರಿನ ಪೋಲಿಸರು ದರ್ಶನ್ ಕೇಸ್‌ನಲ್ಲಿ ತಾವು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀವಿ ಎಂದು ತಮ್ಮ ಬೆನ್ನನ್ನು ತಟ್ಟಿಕೊಳ್ಳುತ್ತಿದ್ದಾರೆ ಆದರೆ ಇದು ಎಲ್ಲ ಕೇಸ್‌ಗಳಲ್ಲೂ ಕೂಡ ಆಗಬೇಕು. ಯಡಿಯೂರಪ್ಪನವರು ಠಾಂ ಡಿಕನ್ ಡ್ಯಾರಿ ಅಲ್ಲ ಓಡಿಹೋಗಿಬಿಡುತ್ತಾರೆ. ಅರವಿಂದ್ ಕೇಜ್ರಿವಾಲ್ರವರು ಠಾಂ, ಹೇಮಂತ್ ಸೂರಯ್ಯನವರು ಡಿಕನ್ ಡ್ಯಾರಿ.

ಈ ರೀತಿಯಾಗಿ ನಡೆದುಕೊಳ್ಳುವ ಬೇರೆ ಬೇರೆ ರೀತಿಯಾಗಿ ನಮ್ಮ ಕಣ್ಣು ಮುಂದೆ ಕಾಣುತ್ತಿರುವ ಅನ್ಯಾಯ. ಇದು ಕೂಡ ಸಮಾಜವನ್ನು ಗಾಬರಿಗೊಳಿಸುತ್ತದೆ. ಆ ರೀತಿಯಲ್ಲಿ ಗಾಬರಿಗೊಳಗಾಗದ ಈ ಸಮಾಜ ಮನುಷ್ಯತ್ವವನ್ನು ಮತ್ತು ನ್ಯಾಯವನ್ನು ಎಲ್ಲರಿಗೂ ಸರಿಸಮಾನವಾಗಿ ಹಂಚಲಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ: ಮುತ್ತಪ್ಪ ಎಸ್ ಆಕ್ರೋಶ

ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗುತ್ತಿದ್ದು, ಪ್ರವೇಶ ಶುಲ್ಕದ ಹೆಸರಿನಲ್ಲಿ...

ರೈತನಿಗೆ ಅವಮಾನ | ಏಳು ದಿನ ಜಿ ಟಿ ಮಾಲ್‌ ಮುಚ್ಚಿಸಲು ರಾಜ್ಯ ಸರ್ಕಾರ ಕ್ರಮ

ರೈತರ ವಿಷಯದಲ್ಲಿ ಯಾರೇ ಅವಮಾನ ಮಾಡಿದರೂ ಸಹಿಸುವುದಿಲ್ಲ ಎಂದು ವಾರದ ಹಿಂದೆ...

ಯುಪಿ ಬಿಜೆಪಿಯಲ್ಲಿ ಯೋಗಿ-ಮೌರ್ಯ ನಡುವೆ ಗುದ್ದಾಟ; ಮೋದಿ-ಶಾ ಚರ್ಚೆ

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ತೀರಾ ಕಳಪೆ ಪ್ರದರ್ಶನ ನೀಡಿದೆ....

ಕನ್ನಡಿಗರಿಗೆ ಉದ್ಯೋಗ | ‘ಅಸ್ತು’ ಎಂದು ಹೆಜ್ಜೆ ಇಟ್ಟ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’: ವಿಜಯೇಂದ್ರ ವ್ಯಂಗ್ಯ

ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?...