ಅಮೆರಿಕದ ಕಾಲೇಜುಗಳ ವಿದೇಶಿ ವಿದ್ಯಾರ್ಥಿಗಳಿಗೆ ಗ್ರೀನ್ ಕಾರ್ಡ್: ಡೊನಾಲ್ಡ್ ಟ್ರಂಪ್ ಭರವಸೆ

Date:

Advertisements

ವಲಸಿಗರ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೃದು ನೀತಿ ವ್ಯಕ್ತಪಡಿಸಿದ್ದಾರೆ.  ತಮ್ಮ ದೇಶದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಭಾರತ ಹಾಗೂ ಚೀನಾದಂತಹ ವಿದೇಶಿ ವಿದ್ಯಾರ್ಥಿಗಳು ತಮ್ಮ ತಾಯ್ನಡಿಗೆ ತೆರಳುವುದನ್ನು ತಡೆಯಲು ಸ್ವಯಂಚಾಲಿತವಾದಂತಹ ಗ್ರೀನ್‌ ಕಾರ್ಡ್‌ಗಳನ್ನು ನೀಡಲು ಭರವಸೆ ನೀಡಿದ್ದಾರೆ.

ನವಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆಯಿರುವ ಹಿನ್ನೆಲೆಯಲ್ಲಿ ತಮ್ಮ ವಲಸೆ ವಿರೋಧಿ ನೀತಿಯಿಂದ ಹೊರಬಂದಿದ್ದಾರೆ. ಈ ಚುನಾವಣೆಯಲ್ಲಿ ವಲಸೆ ಹಾಗೂ ಅಕ್ರಮ ವಲಸಿಗರು ಮತದಾರರಲ್ಲಿ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.

ತಾವು ಶ್ರೇಣಿ ಆಧಾರಿತ ನ್ಯಾಯಬದ್ಧ ವಲಸಿಗ ಪದ್ಧತಿಯನ್ನು ಬೆಂಬಲಿಸುವುದಾಗಿ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

Advertisements

‘ಆಲ್‌ ಇನ್‌’ ಎಂಬ ಪಾಡ್‌ಕಾಸ್ಟ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ 78 ವರ್ಷದ ಡೊನಾಲ್ಡ್‌ ಟ್ರಂಪ್‌, “ನಾನು ಏನು ಮಾಡಬೇಕು, ಮಾಡಬೇಕಿರುವುದೇನೆಂದರೆ ನೀವು ಕಾಲೇಜಿನಲ್ಲಿ ಪದವಿ ಪಡೆದರೆ, ನೀವು ಯೋಗ್ಯತಾ ಪ್ರಮಾಣ ಪತ್ರದ ಭಾಗವಾಗಿ ಸ್ವಯಂಚಾಲಿತವಾಗಿ ಈ ದೇಶದಲ್ಲಿ ಉಳಿಯಲು ಸಾಧ್ಯವಾಗಲು ಗ್ರೀನ್‌ ಕಾರ್ಡ್‌ಗಳನ್ನು ಪಡೆಯಬೇಕೆಂದು ನಾನು ಭಾವಿಸುತ್ತೇನೆ. ಜೂನಿಯರ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಕೂಡ ಇದಕ್ಕೆ ಅರ್ಹರಾಗಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅನುಮತಿ ನೀಡದ ಕೇಂದ್ರ ಗೃಹ ಇಲಾಖೆ: ಭಾರತ ತೊರೆದ ಫ್ರೆಂಚ್ ಪತ್ರಕರ್ತ

ಗ್ರೀನ್‌ ಕಾರ್ಡ್‌ ಅಮೆರಿಕದಲ್ಲಿ ವಾಸಿಸಲು ಶಾಶ್ವತವಾದ ಅರ್ಹತಾ ಪ್ರಮಾಣಪತ್ರವಾಗಿದೆ. ಅಮೆರಿಕದಲ್ಲಿ ಶಾಶ್ವತ ನಾಗರಿಕತ್ವವನ್ನು ಹೊಂದಲು ತೋರಿಸಬಹುದಾದ ದಾಖಲೆ ಇದಾಗಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್‌ ಟ್ರಂಪ್‌ “ವಿಶ್ವದಾದ್ಯಂತವಿರುವ ಅತ್ಯುತ್ತಮವಾದುದನ್ನು ಅಮೆರಿಕದಿಂದ ಪಡೆದುಕೊಳ್ಳಲು ಹೆಚ್ಚಿನ ಸಾಮರ್ಥ್ಯ ನಮಗೆ ನೀಡುತ್ತೀರಿ ಎಂಬ ಭರವಸೆಯನ್ನು ನಮಗೆ ನೀಡಿ. ಇಲ್ಲಿನ ಉನ್ನತ ಅಥವಾ ಸಾಮಾನ್ಯ ಕಾಲೇಜುಗಳಲ್ಲಿ ಪದವಿ ಪಡೆದವರು ಇಲ್ಲಿ ನೆಲೆಗೊಳ್ಳಲು ಹತಾಶರಾಗುತ್ತಾರೆ. ಅವರು ಭಾರತ ಅಥವಾ ಚೀನಾಕ್ಕೆ ವಾಪಸ್‌ ಹೋಗದೆ ಇಲ್ಲಿಯೇ ಕಂಪನಿಗಳನ್ನು ನಿರ್ಮಿಸಬೇಕೆಂಬ ಯೋಚನೆಯಿರುತ್ತದೆ” ಎಂದು ಹೇಳಿದರು.

“ಪ್ರತಿಷ್ಠಿತ ವಿವಿಗಳಲ್ಲಿ ಪದವಿ ಪಡೆದವರು ಶತ ಕೋಟ್ಯಾದೀಶರಾಗಿ ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಾರೆ ಹಾಗೂ ಅದನ್ನು ಇಲ್ಲಿಯೇ ಮಾಡಬಹುದಿತ್ತು. ಉದ್ಯಮಿಗಳಾಗಿ ಇಲ್ಲಿಯೇ ವಾಸಿಸಲು ಸಾಧ್ಯವಾಗುತ್ತದೆ” ಎಂದು ಟ್ರಂಪ್‌ ತಿಳಿಸಿದರು.

ಡೊನಾಲ್ಡ್‌ ಟ್ರಂಪ್‌ಜೊತೆ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡ ನಾಲ್ವರು ನವ್ಯೋದ್ಯಮಿಗಳಲ್ಲಿ ಮೂವರು ವಲಸಿಗರಾಗಿದ್ದರು.

ಮಾಧ್ಯಮಗಳ ವರದಿಯ ಪ್ರಕಾರ 2022-23ನೇ ಸಾಲಿನಲ್ಲಿ ಅಮೆರಿಕದಾದ್ಯಂತವಿರುವ 210 ಸ್ಥಳಗಳಲ್ಲಿ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಚೀನಾದಿಂದ 2,89,526 ವಿದ್ಯಾರ್ಥಿಗಳಿದ್ದರೆ, ಎರಡನೇ ಸ್ಥಾನದಲ್ಲಿ ಭಾರತದ 268,923 ವಿದ್ಯಾರ್ಥಿಗಳಿದ್ದಾರೆ. ವಿದೇಶಿ ವಿದ್ಯಾರ್ಥಿಗಳಲ್ಲಿ ಶೇ.25 ರಷ್ಟು ಭಾರತ ಹಾಗೂ ಶೇ.27 ರಷ್ಟು ಚೀನಾದವರು ಇದ್ದಾರೆ.

ಈಗ ವಲಸಿಗರ ಬಗ್ಗೆ ಕಾಳಜಿ ತೋರಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ 2020ರ ಚುನಾವಣೆಗೂ ಒಂದು ತಿಂಗಳು ಮುನ್ನ ಹೆಚ್‌-1ಬಿ ವೀಸಾಗೆ ನಿರ್ಭಂದ ವಿಧಿಸಿದ್ದರು

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X