ದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಗಳು ನಡಿತಿರೊ ನಡುವೆ ಜೂನ್ 23ರ ಭಾನುವಾರ ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನು ದಿಢೀರ್ ಆಗಿ ಮುಂದೂಡಿದೆ. ಈಗಾಗ್ಲೆ ಜೂನ್ 25ರಿಂದ 27ರ ನಡುವೆ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮುಂದೂಡಿದೆ. ಇನ್ನು 2024ರ ಜೂನ್ 18ರಂದು ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಯುಜಿಸಿ ನೆಟ್ ಪರೀಕ್ಷೆ ಬರೆದಿದ್ದರು. ಅದೆಷ್ಟೊ ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ಹಗಲಿರುಳು ಓದಿ, ಕಷ್ಟಪಟ್ಟು ತಯಾರಿ ನಡೆಸಿ ಈ ಪರೀಕ್ಷೆಯನ್ನು ಬರೆದಿದ್ದರು. ಆದರೆ ಪರೀಕ್ಷೆ ಬರೆದ ಮರುದಿನವೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಅನ್ನೊ ಶಂಕೆಯಲ್ಲಿ ಯುಜಿಸಿ ನೆಟ್ ಪರೀಕ್ಷೆಯನ್ನ ರದ್ದು ಮಾಡಲಾಗಿದೆ. ಇದರೊಂದಿಗೆ ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ಕನಸು ಕೂಡಾ ನುಚ್ಚುನೂರಾಗಿದೆ.
ಸರ್ಕಾರದ ‘ಪರೀಕ್ಷೆ ಮುಂದೂಡಿಕೆ’ ಆಟದಲ್ಲಿ ಹಾಳಾಗುತ್ತಿದೆ ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿ!
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: