ಯಾದಗಿರಿ | ನಾಲೆಗಳಲ್ಲಿ ಜಂಗಲ್ ಕಟಿಂಗ್‌ಗೆ ಒತ್ತಾಯ

Date:

Advertisements

2023ರ ಬರಗಾಲದ ಬಳಿಕ, ಇತ್ತೀಚೆಗೆ ಮಳೆಯಾಗುತ್ತಿದೆ. ಜಲಾಶಯಗಳಿಗೆ ನೀರು ಬರುತ್ತಿದೆ. ಆದರೆ, ನಾರಾಯಣಪೂರ ಜಲಾಶಯದ ಎಡ ಮತ್ತ ಬಲದಂಡ ಕಾಲುವೆಗಳು ಶಿಥಿಲಗೊಂಡಿದ್ದು, ಅವುಗಳನ್ನು ದುರಸ್ತಿ ಮಾಡಬೇಕಿದೆ. ಜಲಾಶಯದಿಂದ ನಾಲೆಗಳಿಗೆ ನೀರನ್ನು ಹರಿಸುವ ಡಿಸ್ಟ್ರುಬ್ಯೂಟರಗಳು, ಲ್ಯಾಟರಲ್‌ಗಳಲ್ಲಿ ಹೂಳು ತುಂಬಿಕೊಂಡಿದೆ. ಹೂಳು ತೆಗೆಯುವ ಕೆಲಸವೂ ಆಗಿಲ್ಲ. ಇದೆಲ್ಲದರಿಂದ ರೈತರಿಗೆ ಸರಿಯಾಗಿ ನೀರು ದೊರೆಯದೆ ಸಮಸ್ಯೆ ಎದುರಾಗುತ್ತಿದೆ ಎಂದು ರೈತ ಸಂಘದ ಕಾರ್ಯಕರ್ತರು ಆರೋಪಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಪ್ರತಿಭಟನೆ ನಡೆಸಿದ ರೈತಸಂಘದ ಕಾರ್ಯಕರ್ತರು ನಾರಾಯಣಪುರ ಜಲಾಶಯದ ಮುಖ್ಯ ಅಭಿಯಂತರರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಕಾಲುವೆಗಳಲ್ಲಿ ಸಿಲ್ವ, ಜಂಗಲ್ ಕಟಿಂಗ್ ಕೆಲಸಗಳು ನಡೆದಿಲ್ಲ. ಈ ಬಗ್ಗೆ ರೈತರು ಅಧಿಕಾರಿಗಳನ್ನು ಕೇಳಿದರ, ಇಲ್ಲಸಲ್ಲದ ನೆಪ ಹೇಳುತ್ತಾರೆ. ಈ ಕಲಸಗಳಿಗೆ ಹಣವಿಲ್ಲವೆಂದು ಸಬೂಬು ಹೇಳುತ್ತಾರೆ. ಕಳೆದ ವರ್ಷ ಕೂಡ ನಾಲೆಯಲ್ಲಿ ಯಾವುದೇ ಕೆಲಸ ನಡೆದಿಲ್ಲ. ಜಂಗಲ್ ಕಟಿಂಗ್ ಕೆಲಸ ಮಾಡದೆ, ನೀರು ಹರಿಸಿದ್ದಾರೆ. ಈಗಾಗಲೇ ಈ ಕಾಲುವೆಗಳ ಕೊನೆಯ ಬಾಗದ ರೈತರಿಗೆ ನೀರು ದೊರೆಯದೆ, ವಂಚಿತರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪ್ರತಿ ವರ್ಷ ಎರಡು ಬಾರಿ ಸಲಹಾ ಸಮಿತಿ ಮೀಟಿಂಗ್ ಕರೆಯುತ್ತಾರೆ. ಸಭೆಯಲ್ಲೂ ಕೂಡಾ ತಾರತಮ್ಯ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಕರೆಯದೆ ತಮ್ಮ ಮನಸಿಗೆ ಬಂದಂತೆ ದಿನಾಂಕ ನಿಗದಿ ಮಾಡುತ್ತಾರೆ. ಇದರಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಇಬ್ಬರೇ ಇರುತ್ತಾರೆ. ಸಭೆಗೆ ರೈತರನ್ನೂ ಕರೆಯಬೇಕು. ಅವರ ಸಲಹೆಗಳನ್ನು ಪಡೆಯಬೇಕು ಎಂದರೂ ನಿರ್ಲಕ್ಷ್ಯಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

Advertisements

ಪ್ರತಿಭಟನೆಯಲ್ಲಿಹಣಮಗೌಡ, ಗದ್ದೆಪ್ಪ ನಾಗನೇನಾಗಳ, ಜಂಗಿನಗಾದ್ದೆ, ಸಾಹೇಬಗೌಡ ಮದಲಿಂಗನಾಳ, ಹಣಮಂತ್ರಾಯ ಚಂದಲಾಪೂರ, ತಿಪ್ಪಣ್ಣ ಜಂಪಾ ಕಕ್ಕೇರಿ, ನಿಂಗನಗೌಡ ಗೂಳಬಾಳ, ‎‫ಅವಿನಾಶ ನಾಯಕ, ಅಮರೇಶ ಕಾಮನಕೇರಿ, ,ಮಲ್ಲಣ್ಣ ಹಲಬಾವಿ, ಗದ್ದೆಪ್ಪ, ತಿಪಣ್ಣ, ಸಾಹೇಬ್ ಗೌಡ, ಹಣಮೇಗೌಡ ಇನ್ನಿತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X