ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅಕ್ರಮಗಳ ಕುರಿತು ತನಿಖೆಯನ್ನು ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಬಿಐ) ಜಾರ್ಖಂಡ್‌ನ ಪತ್ರಕರ್ತನ ಬಂಧನ ಮಾಡಲಾಗಿದೆ ಎಂದು ತಿಳಿಸಿದೆ.
ಬಂಧಿತ ಪತ್ರಕರ್ತನ ಜಮಾಲುದ್ದೀನ್ ಆಗಿದ್ದು, ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಬಂಧಿಸಲಾಗಿದೆ.
ಈ ನಡುವೆ ಗುಜರಾತ್‌ನ ಗೋದ್ರಾ, ಖೇಡಾ, ಆನಂದ್ ಮತ್ತು ಅಹಮದಾಬಾದ್ ಸೇರಿದಂತೆ ಏಳು ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ.
ಜೂನ್ 27 ರಂದು, ಬಿಹಾರದಲ್ಲಿ ನೀಟ್ ಯುಜಿ ಪೇಪರ್ ಸೋರಿಕೆ ಪ್ರಕರಣದಲ್ಲಿ ಸಿಬಿಐ ತನ್ನ ಮೊದಲ ಬಂಧನವನ್ನು ಮಾಡಿದೆ. ಮನೀಶ್ ಪ್ರಕಾಶ್ ಮತ್ತು ಅಶುತೋಷ್ ಎಂಬ ಇಬ್ಬರು ವ್ಯಕ್ತಿಗಳನ್ನು ಪಾಟ್ನಾದಲ್ಲಿ ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಜಾರ್ಖಂಡ್‌ನಲ್ಲಿ ಇನ್ನೂ ಐವರ ಬಂಧನ
ನೀಟ್ ಪರೀಕ್ಷೆಗೆ ಒಂದು ದಿನ ಮೊದಲು ಬಿಹಾರದ ಪಾಟ್ನಾದ ಲರ್ನ್ ಪ್ಲೇ ಸ್ಕೂಲ್‌ನ ಬಾಲಕರ ಹಾಸ್ಟೆಲ್‌ನಲ್ಲಿ ಅಶುತೋಷ್ ಸಹಾಯದಿಂದ ಮನೀಶ್ ಪ್ರಕಾಶ್ ಅಭ್ಯರ್ಥಿಗಳಿಗೆ ಸೋರಿಕೆಯಾದ ಪತ್ರಿಕೆ ಮತ್ತು ಉತ್ತರವನ್ನು ನೀಡಿದ್ದರು ಎಂದು ವರದಿಯಾಗಿದೆ.
ಇನ್ನು ಜೂನ್ 28ರಂದು, ನೀಟ್ ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಓಯಸಿಸ್ ಶಾಲೆಯ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀಟ್ ಪೇಪರ್ ಸೋರಿಕೆಗೆ ಸಂಬಂಧಿಸಿದ ಆರು ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ. ಆರು ಪ್ರಕರಣಗಳಲ್ಲಿ ಬಿಹಾರ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಪ್ರಕರಣಗಳಿದೆ. ಉಳಿದ ಮೂರು ರಾಜಸ್ಥಾನದಲ್ಲಿ ದಾಖಲಾದ ಪ್ರಕರಣಗಳಾಗಿದೆ.
The Central Bureau of Investigation on Saturday arrested a journalist in Jharkhand’s Hazaribagh in connection with the NEET-UG paper leak case.
— IndianPressTrustNagpur (@IPTNagpur) June 29, 2024