ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತವು ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಗೆಲುವಿನ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಟೀಮ್ ಇಂಡಿಯಾಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವಾರು ರಾಜಕಾರಣಿಗಳು, ನಟ, ನಟಿಯರು, ಸೆಲೆಬ್ರೆಟಿಗಳು ಟೀಮ್ ಇಂಡಿಯಾಕ್ಕೆ ಅಭಿನಂದಿಸಿದ್ದಾರೆ.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ ಫೈನಲ್ | ರೋಚಕ ಹಣಾಹಣಿಯಲ್ಲಿ ಟೀಮ್ ಇಂಡಿಯಾ ‘ಚಾಂಪಿಯನ್’
ಸದ್ಯ ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್) …#T20WorldCupFinal ಟ್ರೇಂಡ್ ಆಗಿದೆ. ಟಿ20 ಕ್ರಿಕೆಟ್‌ಗೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿರುವ ಕಾರಣ END OF AN ERA ಕೂಡಾ ಎಕ್ಸ್‌ನಲ್ಲಿ ಟ್ರೆಂಡ್ ಆಗಿದೆ.
Rohit Sharma and Virat Kohli have defined an era of cricket excellence. Watching them together on the field has been a privilege. Their retirement in T20,s after winning the T20 World Cup will truly mark the end of an era. #RohiRat #ViratKohli #RohitShamra pic.twitter.com/MYqwYGbkwf
— Tajamul Islam (@I_am__Shattered) June 30, 2024
“ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್ ಶ್ರೇಷ್ಠತೆಯ ಯುಗಕ್ಕೆ ವ್ಯಾಖ್ಯಾನವಾಗಿದ್ದಾರೆ. ಮೈದಾನದಲ್ಲಿ ಅವರನ್ನು ಒಟ್ಟಿಗೆ ನೋಡುವುದು ಒಂದು ವಿಶೇಷ. ಟಿ20 ವಿಶ್ವಕಪ್ ಗೆದ್ದ ನಂತರ ಟಿ20ಗೆ ಅವರ ನಿವೃತ್ತಿ ನಿಜವಾಗಿಯೂ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ” ಎಂದು ತಾಜಮ್ಮುಲ್ ಇಸ್ಲಾಂ ಎಂಬ ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.
Pulling a World Cup final from this position should be the biggest clutch in T20I cricketing history.
It was our day, we lost all of our hopes. Rohit and Virat were dejected but then our seamers rescued the ship and brought glory back to India.🇮🇳
Congrats @BCCI#T20WorldCupFinal https://t.co/NrXm5cw7Jo— Aditya (@aditya1THFC) June 30, 2024
“ಈ ಸ್ಥಾನದಿಂದ ವಿಶ್ವಕಪ್ ಫೈನಲ್ ಗೆಲ್ಲುವುದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಹಿಡಿತ ಆಗಿರಬೇಕು. ಇದು ನಮ್ಮ ದಿನವಾಗಿತ್ತು, ನಾವು ನಮ್ಮ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೆವು. ರೋಹಿತ್ ಮತ್ತು ವಿರಾಟ್ ಹತಾಶರಾದರು. ಆದರೆ ನಂತರ ನಮ್ಮ ಸೀಮರ್‌ಗಳು (ವೇಗದ ಬೌಲರ್) ಹಡಗನ್ನು ರಕ್ಷಿಸಿ ಭಾರತಕ್ಕೆ ಕೀರ್ತಿ ತಂದರು” ಎಂದು ಆದಿತ್ಯ ಎಂಬ ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.
Too Hardik Pandhya.
You will be remembered as an example that criticism is a part of life. It’s better to shut the critics with your work, rather than your words.
We’re sorry for being too harsh on youu, you’re a superstar ❤️🐐#HardikPandya @hardikpandya7 #T20WorldCupFinal
— Aditya Dogra (@adityaD_2608) June 30, 2024
ಜೊತೆಗೆ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಚಕ್ ದೆ! ಇಂಡಿಯಾ ಸಿನಿಮಾದ ದೃಶ್ಯಗಳು ಕೂಡಾ ವೈರಲ್ ಆಗುತ್ತಿದೆ.
India wins the WORLD CUP and this video of SRK from Chak De India is Trending everywhere 💥
The legacy of CHAK DE INDIA 🙏 @iamsrk @yrf#indiawins #IndVsSA #T20WorldCupFinal pic.twitter.com/TsJvV9AdOW
— Filmy Kendra (@Filmykendra) June 30, 2024
Video of the day,yeah it’s really heart touching Congratulations #TeamIndia #T20WorldCupFinal https://t.co/hujXb5X7JW
— Ishani Sinha (@theishani7774) June 30, 2024