ಯೂರೋ ಕಪ್ | ನೆದರ್‌ಲೆಂಡ್ಸ್ ಮಣಿಸಿ ಇಂಗ್ಲೆಂಡ್ ಫೈನಲ್‌ಗೆ; ಸ್ಪೇನ್ ವಿರುದ್ಧ ಪೈಪೋಟಿ

Date:

Advertisements

ನೆದರ್​ಲೆಂಡ್ಸ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಹೆಚ್ಚುವರಿ 91ನೇ ನಿಮಿಷದಲ್ಲಿ ಬದಲಿ ಆಟಗಾರ ಆಲ್ಲೆ ವಾಟ್ಕಿನ್ಸ್ ಹೊಡೆದ ಎರಡನೇ ಗೋಲಿನಿಂದ ಇಂಗ್ಲೆಂಡ್ ತಂಡ 2-1 ಗೋಲುಗಳ ಮೂಲಕ ಸತತ ಎರಡನೇ ಬಾರಿ ಯೂರೋ ಕಪ್ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿದೆ.

ವಾಟ್ಕಿನ್ಸ್ ಅವರು ಹೆಚ್ಚುವರಿ ಸಮಯದಲ್ಲಿ ನಾಯಕ ಹ್ಯಾರಿ ಕೇನ್‌ ಬದಲಾಗಿ ಕೋಚ್‌ ಗರೇತ್‌ ಸೌತ್‌ಗೇಟ್‌ ಅವರ ಕರೆಯ ಮೇರೆಗೆ ಮೈದಾನಕ್ಕಿಳಿದು ಎದುರಾಳಿ ಗೋಲ್‌ ಕೀಪರ್‌ ಬಳಿಯ ಬಾಟಮ್‌ ಕಾರ್ನರ್‌ನಿಂದ ಅದ್ಭುತವಾಗಿ ಗೋಲ್‌ಗಳಿಸಿ ತಂಡಕ್ಕೆ ಜಯತಂದುಕೊಟ್ಟರು.

ಜರ್ಮನಿಯ ಸಿಗ್ನಲ್ ಇಡುನಾ ಪಾರ್ಕ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದ ನೆದರ್​ಲೆಂಡ್ಸ್ ತಂಡದ ಮುನ್ಪಡೆ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೇ ವೇಳೆ ಇಂಗ್ಲೆಂಡ್ ತಂಡದ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು.

Advertisements

ಇದರ ನಡುವೆ ಪಂದ್ಯದ 7ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಕ್ಸೇವಿ ಸೈಮನ್ಸ್ ಯಶಸ್ವಿಯಾದರು. ಆರಂಭದಲ್ಲೇ ಸಿಕ್ಕ ಮುನ್ನಡೆಯಿಂದ ಹಿಗ್ಗಿದ ನೆದರ್​ಲೆಂಡ್ಸ್ ತಂಡವು ಭರ್ಜರಿ ಪ್ರದರ್ಶನ ಮುಂದುವರೆಸಿತು.

ಈ ಸುದ್ದಿ ಓದಿದ್ದೀರಾ? ಗೌತಮ್ ಗಂಭೀರ್: ಖ್ಯಾತಿಗಿಂತ ಹೆಚ್ಚು ವಿವಾದಗಳನ್ನೇ ಉಸಿರಾಡಿದ ಕ್ರಿಕೆಟಿಗನಿಗೆ ಹೊಣೆಗಾರಿಕೆಯ ಹುದ್ದೆ

ಇತ್ತ ಆರಂಭದಲ್ಲೇ ಹಿನ್ನಡೆ ಅನುಭವಿಸಿದರೂ ಇಂಗ್ಲೆಂಡ್ ತಂಡ ಒತ್ತಡಕ್ಕೆ ಒಳಗಾಗಲಿಲ್ಲ. ಬದಲಾಗಿ ತಂಡದ ಮುನ್ಪಡೆ ಆಟಗಾರರಾದ ಹ್ಯಾರಿ ಕೇನ್, ಆಲಿ ವಾಟ್ಕಿನ್ಸ್, ಸಾಕಾ ಮತ್ತು ಬೆಲ್ಲಿಂಗ್​ಹ್ಯಾಮ್ ಉತ್ತಮ ಹೊಂದಾಣಿಕೆ ಪ್ರದರ್ಶನ ಮುಂದುವರೆಸಿದ್ದರು.

ಪರಿಣಾಮ 18ನೇ ನಿಮಿಷದಲ್ಲಿ ತಂಡಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಗೋಲು ಹೊಡೆಯುವಲ್ಲಿ ಯಶಸ್ವಿಯಾದರು. ಅದರಂತೆ ಮೊದಲಾರ್ಧ 1-1 ಅಂತರದಲ್ಲಿ ಕೊನೆಗೊಂಡಿತು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳಿಂದಲೂ ಭರ್ಜರಿ ಪೈಪೋಟಿ ಕಂಡು ಬಂದರೂ, 90ನೇ ನಿಮಿಷದವರೆಗೆ ಗೋಲು ದಾಖಲಿಸುವಲ್ಲಿ ಎರಡೂ ತಂಡಗಳ ಆಟಗಾರರು ವಿಫಲರಾದರು. ಆದರೆ ಇನ್ನೇನು ಪಂದ್ಯ ಮುಗಿಯಲಿದೆ ಎನ್ನುವಷ್ಟರಲ್ಲಿ 91ನೇ ನಿಮಿಷದಲ್ಲಿ ಇಂಗ್ಲೆಂಡ್​ನ ಆಲಿ ವಾಟ್ಕಿನ್ಸ್ ಅತ್ಯುತ್ತಮ ಡ್ರಿಬ್ಲಿಂಗ್ ಮೂಲಕ ಚೆಂಡನ್ನು ಗೋಲು ಪರದೆಗೆ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಈ ಗೆಲುವಿನ ಮೂಲಕ ಇಂಗ್ಲೆಂಡ್ ಜುಲೈ 14 ರಂದು ಬರ್ಲಿನ್‌ನಲ್ಲಿ ನಡೆಯುತ್ತಿರುವ ಯೂರೋ ಕಪ್‌ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಟ್ರೋಫಿಗಾಗಿ ಸೆಣಸಲಿದೆ. ಕಳೆದ ಬಾರಿ 2020ರಲ್ಲಿ ಫೈನಲ್‌ ಪ್ರವೇಶಿಸಿದ್ದ ಇಂಗ್ಲೆಂಡ್ ಇಟಲಿ ವಿರುದ್ಧ ಪೆನಾಲ್ಟಿ ಶೂಟ್‌ ಸಮಯದಲ್ಲಿ 3-2 ಗೋಲುಗಳಿಂದ ಪರಾಭವಗೊಂಡಿತ್ತು.

ಯುರೋ ಕಪ್​ ಇತಿಹಾಸದಲ್ಲಿ ಸ್ಪೇನ್ ತಂಡವು ಕೇವಲ 3 ಬಾರಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. 1964 ರಲ್ಲಿ ಚೊಚ್ಚಲ ಬಾರಿ ಟ್ರೋಫಿ ಗೆದ್ದಿದ್ದ ಸ್ಪೇನ್ ಆ ಬಳಿಕ 2008 ಮತ್ತು 2012 ರಲ್ಲಿ ಯುರೋ ಕಪ್ ಗೆದ್ದುಕೊಂಡಿದ್ದರು. ಆದರೆ ಇಂಗ್ಲೆಂಡ್ ತಂಡ ಇಲ್ಲಿಯವರೆಗೆ ಯುರೋ ಕಪ್ ಗೆದ್ದಿಲ್ಲ. ಸತತ ಎರಡನೇ ಬಾರಿ ಫೈನಲ್‌ ಪ್ರವೇಶಿಸಿರುವ ಆಂಗ್ಲರು ಚೊಚ್ಚಲ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X