- ರಾಹುಲ್, ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಬಂದಷ್ಟೂ ನಮಗೆ ಲಾಭ
- ಯಮಕನಮರಡಿ ಕ್ಷೇತ್ರದಲ್ಲಿ ಅಭ್ಯರ್ಥಿ ಬಸವರಾಜ ಹಂದ್ರಿ ಪರ ಪ್ರಚಾರ
ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬಂದಷ್ಟೂ ನಮಗೆ ಅನುಕೂಲ. ಅವರು ಹೋದಲ್ಲಿ ಕಾಂಗ್ರೆಸ್ ಸೋತಿದೆ. ಅವರು ಬಂದಷ್ಟು ನಮಗೆ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದರು.
ಬುಧವಾರ ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಲ್ಲಿ ಅಭ್ಯರ್ಥಿ ಬಸವರಾಜ ಹಂದ್ರಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.
“ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಶಾ ಅವರು ಯಾಕೆ ಬರುತ್ತಿದ್ದಾರೆ ಅಂತ ಕಾಂಗ್ರೆಸ್ ನವರು ಕೇಳುತ್ತಾರೆ. ಆದರೆ, ರಾಹುಲ್, ಪ್ರಿಯಾಂಕಾ ಇಲ್ಲಿಗೆ ಏಕೆ ಬರುತ್ತಾರೆ” ಎಂದು ಪ್ರಶ್ನಿಸಿದರು.
ಈ ಬಾರಿ ಚುನಾವಣೆ ಐತಿಹಾಸಿಕವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ದೇಶದ ಅಭಿವೃದ್ದಿ ಮಾಡುತ್ತಿದೆ. ಯಾರಿಗೆ ಕರ್ನಾಟಕದ ಅಭಿವೃದ್ಧಿ ಬೇಕಿದೆ ಅವರು ಡಬಲ್ ಎಂಜಿನ್ ಸರ್ಕಾರ ಬೆಂಬಲಿಸುತ್ತಾರೆ. ಡಬಲ್ ಎಂಜಿನ್ ಸರ್ಕಾರ ಬೇಡ ಅನ್ನುವವರು ಕಾಂಗ್ರೆಸ್ ಗೆ ಮತ ಹಾಕಲಿ” ಎಂದರು.
“ಡಬಲ್ ಎಂಜಿನ್ ಸರ್ಕಾರ ಇರುವುದರಿಂದ ರಾಜ್ಯದಲ್ಲಿ 60 ಸಾವಿರ ಕೋಟಿ ರೂ. ವೆಚ್ಚದಲ್ಲಿ 6,000 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಬೆಳಗಾವಿ ಕುಡಚಿ ರೈಲ್ವೆ ಲೈನ್ ಡಬಲ್ ಮಾಡಲಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ ಎಲ್ಲವೂ ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-6: ಬಿಜೆಪಿ ಶಾಸಕರ ವಿರುದ್ಧ ಉಳಿದವರಿಗಿಂತ ಹೆಚ್ಚು ಆಡಳಿತ ವಿರೋಧಿ ಅಲೆ
ಕಾಂಗ್ರೆಸ್ ನವರಿಗೆ ಉರಿ
“ಅಮಿತ್ ಶಾ ಅವರು, ಪ್ರಧಾನ ಮಂತ್ರಿ ನರೇಂದ್ರ ಅವರ ಹೆಸರು ಹೇಳಿದ್ದಕ್ಕೆ ಕಾಂಗ್ರೆಸ್ ನವರಿಗೆ ಉರಿ ಹತ್ತಿದೆ. ಮೋದಿಯವರು ಎಲ್ಲಿ ಹೊಗಿದ್ದಾರೆ. ಅಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ ಕಾಂಗ್ರೆಸ್. ಬಿಡಿಎ, ಹಾಸಿಗೆ ದಿಂಬಿನಲ್ಲೂ ಲಂಚ ಪಡೆದರು. ರಾಜೀವ್ ಗಾಂದಿಯೇ 85% ಭ್ರಷ್ಟಾಚಾರ ನಡೆಯುತ್ತಿದ್ದ ಬಗ್ಗೆ ಹೇಳಿದ್ದರು” ಎಂದು ತಿಳಿಸಿದರು.
“2016ರಲ್ಲಿ ಸಿದ್ದರಾಮಯ್ಯ ಆಂತರಿಕ ಮೀಸಲಾತಿ ನೀಡಲಾಗದೇ ಓಡಿ ಹೋಗಿದ್ದರು. ನಾವು ಆಂತರಿಕ ಮೀಸಲಾತಿ ನೀಡಿದ್ದೇವೆ. ಮುಸ್ಲಿಂ ಸಮುದಾಯದಲ್ಲಿ ಅನೇಕ ಉಪ ಪಂಗಡಗಳಿವೆ. ಅವರಲ್ಲಿರುವ ಆರ್ಥಿಕ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇದೆ. ಕಾಂಗ್ರೆಸ್ ನವರು ನಮ್ಮ ಮೇಲೆ ಭಾವನೆಗಳ ಜೊತೆ ಆಟ ಆಡುತ್ತೇವೆ ಎಂದು ಆರೋಪ ಮಾಡುತ್ತಾರೆ. ಎಲ್ಲರಿಗೂ ಅವರ ಬಗ್ಗೆ ಸ್ವಾಭಿಮಾನ ಇರುತ್ತದೆ. ಬಡವರಿಗೂ ಸ್ವಾಭಿಮಾನ ಇರುತ್ತದೆ” ಎಂದರು.
“ಬಸವರಾಜ ಅವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ. ಯಮಕನಮರಡಿ ಅಭಿವೃದ್ಧಿಗೆ ಅಗತ್ಯ ಅನುದಾನ ನಾವು ನೀಡುತ್ತೇವೆ” ಎಂದರು ಮತದಾರರಲ್ಲಿ ಮನವಿ ಮಾಡಿದರು.