ಈದಿನ.ಕಾಮ್ ಸಮೀಕ್ಷೆ-6: ಬಿಜೆಪಿ ಶಾಸಕರ ವಿರುದ್ಧ ಹೆಚ್ಚು ಆಡಳಿತ ವಿರೋಧಿ ಅಲೆ

Date:

ಆಡಳಿತ ಪಕ್ಷದ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರ ವಿರುದ್ಧದ ಅಲೆಗಿಂತ ಹೆಚ್ಚಿದೆ. ಆದರೆ, ಆಪರೇಷನ್‌ ಕಮಲ ನಡೆದ ಕ್ಷೇತ್ರಗಳಲ್ಲಿ ಅಲ್ಲಿನ ಮತದಾರರಿಗೆ ಉಳಿದ ಕ್ಷೇತ್ರಗಳಿಗಿಂತ ಹೆಚ್ಚು ಸಿಟ್ಟು ತಮ್ಮ ಶಾಸಕರ ಬಗ್ಗೆ ಇಲ್ಲ.

ಮೊದಲಿಗೆ ಈ ಸಮೀಕ್ಷೆ ಏನೆಂದು ಅರಿಯಲು ಈ ವರದಿ ಓದಿ: ಚುನಾವಣೆ 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ ‘ಈ ದಿನ.ಕಾಮ್‌’ನ ಸಮೀಕ್ಷೆ

ಈದಿನ.ಕಾಮ್‌ ನಡೆಸಿದ ಈ ಸಮೀಕ್ಷೆಯು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾದ ಆಡಳಿತ ವಿರೋಧಿ ಅಲೆ ಇರುವುದನ್ನು ಗಮನಿಸಿದೆ. ಈ ವಿಚಾರದ ನಮ್ಮ ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿಗಳಲ್ಲಿ ಮೂರನೇ ಎರಡು ಭಾಗದಷ್ಟು ಮತದಾರರು ಈ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂದಿದ್ದಾರೆ. ಹಾಗಾದರೆ ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚಿದೆಯೋ, ಕಡಿಮೆ ಇದೆಯೋ? ಅದು ಸರ್ಕಾರದ ವಿರುದ್ಧ ಇರುವ ಅಲೆಯನ್ನು ತಣ್ಣಗೆ ಮಾಡುತ್ತದೋ ಅಥವಾ ಮತದಾರರ ಕೋಪವನ್ನು ಹೆಚ್ಚು ಮಾಡುತ್ತದೋ? ವಿರೋಧ ಪಕ್ಷಗಳ ಶಾಸಕರ ಮೇಲೆ ಎಷ್ಟು ಕೋಪ ಇದೆ? ಇದರಿಂದ ಆ ಪಕ್ಷಗಳ ಮೇಲೆ ಬೀರುವ ಪರಿಣಾಮ ಎಷ್ಟು? ಕುಖ್ಯಾತ ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿದ ಶಾಸಕರ ಬಗ್ಗೆ ಆ ಕ್ಷೇತ್ರಗಳ ಜನರಿಗೆ ಏನು ಅಭಿಪ್ರಾಯವಿದೆ? ಈ ಪ್ರಶ್ನೆಗಳಿಗೆ ನಮ್ಮ ಸಮೀಕ್ಷೆ ಏನು ಉತ್ತರ ಕೊಟ್ಟಿದೆ ಎಂಬುದನ್ನು ನೋಡೋಣ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸಮೀಕ್ಷೆಯ ಅತ್ಯಂತ ಎದ್ದು ಕಾಣುವ ಅಂಶವೆಂದರೆ, ಆಡಳಿತ ಪಕ್ಷದ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರ ವಿರುದ್ಧದ ಅಲೆಗಿಂತ ಹೆಚ್ಚಿದೆ. ಸಮೀಕ್ಷೆಯಲ್ಲಿ ನಾವು ಈ ಸಂಬಂಧ ಕೇಳಿದ ಪ್ರಶ್ನೆ: ನಿಮ್ಮ ಹಾಲಿ ಶಾಸಕರಿಗೆ ಮತ್ತೊಂದು ಅವಕಾಶ (ಸಮೀಕ್ಷೆ ನಡೆಸಿದ ಹೊತ್ತಿನಲ್ಲಿ) ಕೊಡಬೇಕೇ ಬೇಡವೇ ಎಂಬುದಾಗಿತ್ತು. ಇಡೀ ರಾಜ್ಯದಲ್ಲಿ ಶಾಸಕರ ಪರವಾಗಿ ರಾಜ್ಯದಲ್ಲಿ ದೊಡ್ಡ ಒಲವೇನೂ ವ್ಯಕ್ತವಾಗಿಲ್ಲ. ಮೂರನೇ ಒಂದು ಭಾಗದಷ್ಟು ಜನರು ಮಾತ್ರ ತಮ್ಮ ಶಾಸಕರಿಗೆ ಇನ್ನೊಂದು ಅವಕಾಶ ಕೊಡುವುದರ ಬಗ್ಗೆ ಒಲವುಳ್ಳವರಾಗಿದ್ದರು. ಇದು ಇನ್ನೊಂದು ಅವಕಾಶ ಕೊಡಬಾರದು ಎಂದು ಹೇಳಿದವರಿಗಿಂತ ಸ್ವಲ್ಪ ಕಡಿಮೆ. ಇನ್ನುಳಿದವರು (ಹೆಚ್ಚು ಕಡಿಮೆ ಮೂರನೇ ಒಂದು ಭಾಗ) ಈ ಕುರಿತು ಏನನ್ನೂ ಹೇಳಲು ಇಚ್ಛಿಸಲಿಲ್ಲ.

ಮೌನವಾಗುಳಿದ ಈ ಮೂರನೇ ಒಂದು ಭಾಗವನ್ನು ಪಕ್ಕಕ್ಕಿಡುವುದಾದರೆ, ಶಾಸಕರ ಬಗೆಗಿನ ಮತದಾರರ ಅಭಿಪ್ರಾಯ ಎಲ್ಲ ಕ್ಷೇತ್ರಗಳಲ್ಲಿ ಒಂದೇ ತೆರನಾಗಿಲ್ಲ. ಇದನ್ನು ನಾವು ಪಕ್ಷವಾರು ವಿಭಜಿಸಿ ನೋಡುವುದಾದರೆ, ಅಂದರೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಪಕ್ಷದ ಎಂಎಲ್‌ಎಗಳಿಗೆ ಅವರವರ ಕ್ಷೇತ್ರಗಳಲ್ಲಿ ಪರಿಸ್ಥಿತಿ ಹೇಗಿದೆ ಎಂದು ವಿಭಜಿಸಿ ನೋಡಿದರೆ, ವ್ಯತ್ಯಾಸ ಗೋಚರಿಸುತ್ತದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ. ಇವುಗಳ ಪೈಕಿ ಶೇ.42ರಷ್ಟು ಕ್ಷೇತ್ರಗಳಲ್ಲಿ ಇನ್ನೊಂದು ಅವಕಾಶ ಕೊಡಬಹುದು ಎಂದರೆ, ಶೇ.58ರಷ್ಟು ಕ್ಷೇತ್ರಗಳಲ್ಲಿ ಕೊಡಬಾರದು ಎಂದಿದ್ದಾರೆ. ಇದು ಕಾಂಗ್ರೆಸ್‌ ಶಾಸಕರ ವಿಚಾರದಲ್ಲಿ ಅಷ್ಟೇ ಪ್ರಮಾಣದಲ್ಲಿ ಉಲ್ಟಾ ಇದೆ. ಅಂದರೆ 58% ಕ್ಷೇತ್ರಗಳಲ್ಲಿ ಅವಕಾಶ ಕೊಡೋಣ ಎಂದರೆ, 42% ಕ್ಷೇತ್ರಗಳಲ್ಲಿ ಬೇಡ ಎಂದಿದೆ. ಜೆಡಿಎಸ್‌ ಶಾಸಕರ ಕ್ಷೇತ್ರಗಳಲ್ಲಿ ಹೆಚ್ಚು ಕಡಿಮೆ ಸಮಪ್ರಮಾಣದಲ್ಲಿ ಅವಕಾಶ ಕೊಡೋಣ ಅಥವಾ ಬೇಡ ಎಂದಿದ್ದಾರೆ.

ಈ ಸಮೀಕ್ಷಾ ವರದಿಯನ್ನೂ ಓದಿ: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-4: ಭ್ರಷ್ಟಾಚಾರವೇ ಚುನಾವಣೆಯ ಪ್ರಧಾನ ಸಂಗತಿ

ಅಂದರೆ, ಒಟ್ಟಾರೆ ಶಾಸಕರ ಬಗ್ಗೆ ಅಸಮಾಧಾನ ಎಲ್ಲೆಡೆಯೂ ಒಂದಲ್ಲಾ ಒಂದು ಪ್ರಮಾಣಕ್ಕೆ ಇದೆ. ಅದು ಸಾಪೇಕ್ಷವಾಗಿ ಬಿಜೆಪಿಯ ವಿಚಾರದಲ್ಲಿ ಹೆಚ್ಚಿದೆ.

ಈ ರೀತಿಯ ಭಾವನೆ ಆಪರೇಷನ್‌ ಕಮಲ ನಡೆದ ಕ್ಷೇತ್ರಗಳಲ್ಲಿ ಹೆಚ್ಚಾಗಿದೆಯೇ ಎಂದು ವಿಶೇಷವಾಗಿ ಪರಿಶೀಲಿಸಲಾಯಿತು. ಅಲ್ಲಿನ ಮತದಾರರಿಗೆ ಉಳಿದ ಕ್ಷೇತ್ರಗಳಿಗಿಂತ ಹೆಚ್ಚು ಸಿಟ್ಟು ತಮ್ಮ ಶಾಸಕರ ಬಗ್ಗೆ ಇಲ್ಲ. ಹಾಗೆ ನೋಡಿದರೆ, ಆಪರೇಷನ್‌ ಕಮಲ ವಿದ್ಯಮಾನದ ಕುರಿತು ನಾವು ಕೇಳಿದ ಪ್ರಶ್ನೆಗೆ ಇಡೀ ರಾಜ್ಯದಲ್ಲಿ ಎಷ್ಟು ಪ್ರಮಾಣದ ಸಿಟ್ಟನ್ನು ಮತದಾರರು ವ್ಯಕ್ತಪಡಿಸಿದರೋ, ಆ ಪ್ರಮಾಣದ ಸಿಟ್ಟನ್ನು ಅವರ ಕ್ಷೇತ್ರಗಳಲ್ಲಿ ವ್ಯಕ್ತಪಡಿಸಿಲ್ಲ.

ಇಡೀ ರಾಜ್ಯದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಈ ಕುರಿತಂತೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. 42% ಜನರು ಈ ಬೆಳವಣಿಗೆ (ಆಪರೇಷನ್‌ ಕಮಲ) ಸರಿ ಇಲ್ಲ ಎಂದರೆ, 21% ಜನರು ಸರಿ ಎಂದಿದ್ದಾರೆ. ಈ ವಿಚಾರದಲ್ಲಿ ಸಹಜವಾಗಿ ಬಿಜೆಪಿಯ ಮತದಾರರು ಹೆಚ್ಚಾಗಿ ಇದನ್ನು ಸರಿ ಎಂದಿದ್ದಾರೆ. ಅವರಲ್ಲಿಯೂ ಇದು ಸರಿ ಇಲ್ಲ ಎಂದವರ ಸಂಖ್ಯೆಯ ಎರಡು ಪಟ್ಟು ಜನರು ಸರಿ ಎಂದಿರುವುದು ಕಂಡುಬಂದಿದೆ. ಕುತೂಹಲಕಾರಿ ಅಂಶವೆಂದರೆ, ಅನಕ್ಷರಸ್ಥರು ಸುಶಿಕ್ಷಿತರಿಗಿಂತ ಹೆಚ್ಚು ಈ ವಿದ್ಯಮಾನವನ್ನು ತಪ್ಪು ಎಂದು ಹೇಳಿದ್ದಾರೆ. ಜೊತೆಗೆ ಯಾವ ಕ್ಷೇತ್ರಗಳಲ್ಲಿ ಆಪರೇಷನ್‌ ಕಮಲ ನಡೆದಿದೆಯೋ, ಅಲ್ಲಿ ಇದು ತಪ್ಪು ಎಂದು ಹೇಳಿದವರ ಪ್ರಮಾಣ ರಾಜ್ಯದ ಉಳಿದ ಕಡೆಗಿಂತ ಕಡಿಮೆ. 22% ಜನರು ಸರಿ ಇಲ್ಲ ಎಂದಿದ್ದರೆ, 15% ಜನ ಸರಿ ಎಂದಿದ್ದಾರೆ. 63% ಅಷ್ಟು ದೊಡ್ಡ ಪ್ರಮಾಣದ ಜನರು ತಮ್ಮಿಂದ ಆಯ್ಕೆಯಾಗಿ ಹೋದ ಶಾಸಕರು ಮಧ್ಯದಲ್ಲೆ ಪಕ್ಷ ಬಿಟ್ಟು ಹೋದ ವಿಚಾರದಲ್ಲಿ ಮೌನ ವಹಿಸಿದ್ದಾರೆ. ರಾಜ್ಯದ ಉಳಿದ ಭಾಗಗಳಲ್ಲಿ ಈ ಮೌನ 37% ಮಾತ್ರ ಇದೆ.

ಕೋಷ್ಟಕ 1: ಮತದಾರರು ತಮ್ಮ ಶಾಸಕರ ಕುರಿತು ಅಷ್ಟೊಂದು ಸಂತುಷ್ಟರಾಗಿಲ್ಲ.

ಚುನಾವಣಾ ಸಮೀಕ್ಷೆ

ಕೋಷ್ಟಕ 2: ಬಿಜೆಪಿ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಹೆಚ್ಚು

ಚುನಾವಣಾ ಸಮೀಕ್ಷೆ

ಕೋಷ್ಟಕ 3: ರಾಜ್ಯದಾದ್ಯಂತ ಆಪರೇಷನ್‌ ಕಮಲದ ಕುರಿತು ಸಿಟ್ಟಿದೆ; ಪಕ್ಷಾಂತರಿಗಳ ಕ್ಷೇತ್ರಗಳಲ್ಲಿ ಕಡಿಮೆ

ಚುನಾವಣಾ ಸಮೀಕ್ಷೆ

ಈ ಸಮೀಕ್ಷಾ ವರದಿಯನ್ನೂ ಓದಿ: ಈದಿನ.ಕಾಮ್ ಸಮೀಕ್ಷೆ-5: ಸರ್ಕಾರದ ಯೋಜನೆಗಳ ʼಫಲʼ ಬಿಜೆಪಿಗೆ ಸಿಗದು; ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಇನ್ನೂ ಇಲ್ಲ ಗ್ಯಾರಂಟಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್‌ ಪ್ರತಿಭಟನೆ | ಬರ ಪರಿಹಾರ ನೀಡಿ, ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಬರ ಪರಿಹಾರದಲ್ಲಿ ತಾರತಮ್ಯ ವಿರೋಧಿಸಿ...

ಸಕ್ಕರೆ ಪ್ರಮಾಣ ಹೆಚ್ಚಳ: ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡಲಾಗಿದೆ ಎಂದ ತಿಹಾರ್ ಜೈಲಿನ ಅಧಿಕಾರಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದ...

ಲೋಕಸಭಾ ಚುನಾವಣೆ | ಈವರೆಗೆ ಸ್ಪರ್ಧೆಯೇ ಇಲ್ಲದೆ ಗೆದ್ದಿದ್ದಾರೆ 35 ಅಭ್ಯರ್ಥಿಗಳು 

ಈ ಬಾರಿಯ ಲೋಕಸಭಾ ಚುನವಣೆಯಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್...