ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ಇನ್ನಿಂಗ್ಸ್ ಗೆದ್ದು, 114 ರನ್‌ಗಳೊಂದಿಗೆ ಸರಣಿಯಲ್ಲಿ 1-0 ಅಂತದಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಮೊದಲ ಇನ್ನಿಂಗ್ಸ್ ಗೆದ್ದ ಬೆನ್ನಲ್ಲೇ ತಂಡದ ವೇಗಿ ಬೌರಲ್ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಜೇಮ್ಸ್ ಆ್ಯಂಡರ್ಸನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ವೇಗಿ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅಂತರಾಷ್ಟ್ರೀಯ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವಾಡಿದ ಇಂಗ್ಲೆಂಡ್ ತಂಡದ ಗಸ್ ಅಟ್ಕಿನ್ಸನ್ ಭರ್ಜರಿ ಬೌಲಿಂಗ್ ಮಾಡಿದ್ದು, 45 ರನ್‌ಗಳನ್ನು ನೀಡಿ 7 ಟಿಕೆಟ್ ಪಡೆದುಕೊಂಡಿದ್ದಾರೆ. ಅವರ ಬೌಲಿಂಗ್‌ಗೆ ವೆಸ್ಟ್ ಇಂಡೀಸ್ ಪಡೆ ತತ್ತರಿಸಿದ್ದು, ಮೊದಲ ಇನಿಂಗ್ಸ್‌ನಲ್ಲಿ ಕೇವಲ 121ಕ್ಕೆ ಆಲೌಟ್ ಆಗಿತ್ತು. ಬಳಿಕ, ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 371 ರನ್ ಗಳಿಸಿ, ಭರ್ಜರಿ ಗೆಲುವಿನೊಂದಿಗೆ, ಮುನ್ನಡೆ ಸಾಧಿಸಿದೆ.
ದ್ವಿತೀಯ ಇನಿಂಗ್ಸ್‌ನಲ್ಲೂ ಅಟ್ಕಿನ್ಸನ್ ಅವರ ಭರ್ಜರಿ ಬೌಲಿಂಗ್‌ಗೆ (61ಕ್ಕೆ 5 ವಿಕೆಟ್) ತತ್ತರಿಸಿದ ವಿಂಡೀಸ್ ಕೇವಲ 136ಕ್ಕೆ ಆಲೌಟ್ ಆಯಿತು. ಎರಡು ಇನ್ನಿಂಗ್ಸ್‌ಗಳಲ್ಲಿ ಅಟ್ಕಿನ್ಸನ್ ಒಟ್ಟು 12 ವಿಕೆಟ್‌ಗಳನ್ನು ಗಳಿಸಿ ಮಿಂಚಿದ್ದಾರೆ.
ಇನ್ನು, ಇಂಗ್ಲೆಂಡ್ ಪಂದ್ಯದ ನಾಯಕ ಬೆನ್ ಸ್ಟೋಕ್ಸ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 6,000ಕ್ಕಿಂತ ಹೆಚ್ಚು ರನ್ ಹಾಗೂ 200 ವಿಕೆಟ್ ಗಳಿಸಿದ ವಿಶ್ವದ ಮೂರನೇ ಆಲ್‌ರೌಂಡ್ ಆಟಗಾರ ಎನಿಸಿಕೊಂಡಿದ್ದಾರೆ.