ಕಳೆದ ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ, 4 ವರ್ಷಗಳ ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ನತಾಶಾ ಸ್ಟಾಂಕೋವಿಕ್ ಹಾಗೂ ಹಾರ್ದಿಕ್ ಪಾಂಡ್ಯಾ ದಂಪತಿ ಬೇರ್ಪಟ್ಟಿದ್ದಾರೆ.
ಈ ಬಗ್ಗೆ ಜುಲೈ 18ರಂದು ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಹೀರೋ, “4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ಇರಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಆದರೆ ಅದು ಕೈಗೂಡಿಲ್ಲ. ಇದು ನಮ್ಮಿಬ್ಬರಿಗೂ ಉತ್ತಮವಾದ ನಿರ್ಧಾರವೆಂದು ಭಾವಿಸುತ್ತೇವೆ. ಇದು ನಮ್ಮ ನಡುವಿನ ಕಠಿಣ ನಿರ್ಧಾರವಾಗಿತ್ತು” ಎಂದು ತಿಳಿಸಿದ್ದಾರೆ.
Hardik Pandya and Natasha part ways. pic.twitter.com/gnTNI7Lduu
— Mufaddal Vohra (@mufaddal_vohra) July 18, 2024
“ನಮ್ಮ ದಾಂಪತ್ಯ ಜೀವನದಲ್ಲಿ ಮಗ ಅಗಸ್ತ್ಯ ಹುಟ್ಟಿದ್ದಾನೆ. ಆತ ನಮ್ಮಿಬ್ಬರ ಜೀವನದ ಕೇಂದ್ರ ಬಿಂದುವಾಗಿಯೇ ಮುಂದುವರಿಯಲಿದ್ದಾನೆ. ಆತನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನೀಡುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ನಾವಿಬ್ಬರೂ ಕೂಡ ಸಹ-ಪೋಷಕರಾಗಿ ಮುಂದುವರಿಯಲಿದ್ದೇವೆ” ಎಂದು ಹಾರ್ದಿಕ್ ಪಾಂಡ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಈ ಕಷ್ಟಕರ ಮತ್ತು ಸೂಕ್ಷ್ಮ ನಿರ್ಧಾರದ ಸಂದರ್ಭದಲ್ಲಿ ನಮ್ಮ ಖಾಸಗಿತನ ಹಾಗೂ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನಾವಿಬ್ಬರೂ ಪ್ರಾಮಾಣಿಕವಾಗಿ ವಿನಂತಿಸುವುದಾಗಿ ತಿಳಿಸುವ ಮೂಲಕ ನತಾಶಾ ಸ್ಟಾಂಕೋವಿಕ್ ಹಾಗೂ ಹಾರ್ದಿಕ್ ಪಾಂಡ್ಯ ದಂಪತಿ 4 ವರ್ಷಗಳ ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ.
ವಿದೇಶಕ್ಕೆ ಹಾರಿರುವ ನತಾಶಾ
ಈ ನಡುವೆ ಈಗ ನತಾಶಾ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹಾರ್ದಿಕ್ ಪಾಂಡ್ಯ ಮನೆ ತೊರೆದಿದ್ದಾರೆ. ತಮ್ಮ ಮಗ ಅಗಸ್ತ್ಯಾ ಜೊತೆಗೆ ವಿದೇಶಕ್ಕೆ ತೆರಳಿದ್ದಾರೆ.
