ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ವಿಸರ್ಜಿಸಿದ್ದಾರೆ.
ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಪಿಸಿಸಿ, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ, ಜಿಲ್ಲಾ/ ಬ್ಲಾಕ್/ ಮಂಡಲ್ ಕಾಂಗ್ರೆಸ್ ಸಮಿತಿಗಳನ್ನು ವಿಸರ್ಜಿಸಲಾಗಿದೆ.
ಜೊತೆಗೆ ಕಾಂಗ್ರೆಸ್ನ ಇತರೆ ಅಂಗ ಸಂಘಟನೆಗಳು, ಇಲಾಖೆಗಳು ಸೇರಿದಂತೆ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಪೂರ್ಣ ವಿಸರ್ಜನೆಯ ಪ್ರಸ್ತಾಪವನ್ನು ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ, ಆಂಧ್ರ, ಒಡಿಶಾಗೆ ವಿಶೇಷ ಸ್ಥಾನಮಾನಕ್ಕೆ ಜೆಡಿಯು, ವೈಎಸ್ಆರ್ಸಿಪಿ, ಬಿಜೆಡಿ ಬೇಡಿಕೆ
“ಹೊಸ ಡಿಸಿಸಿ ಅಧ್ಯಕ್ಷರ ನೇಮಕವಾಗುವವರೆಗೆ ಹಾಲಿ ಡಿಸಿಸಿ ಅಧ್ಯಕ್ಷರು ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಗ ವಿಸರ್ಜನೆಯಾಗಿರುವ ಒಡಿಶಾ ಪಿಸಿಸಿ ಅಧ್ಯಕ್ಷ ಶರತ್ ಪಟ್ಟನಾಯಕ್ ಆಗಿದ್ದಾರೆ.
Hon’ble Congress President has approved the proposal of the complete dissolution of the Odisha Pradesh Congress Committee, with immediate effect.
The current DCC Presidents will serve as acting Presidents until new DCC Presidents are appointed. pic.twitter.com/AC2GiS2GNS
— INC Sandesh (@INCSandesh) July 21, 2024