ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ಏಳನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಹುಮತ ಗಳಿಸದ ಬಿಜೆಪಿ ಮತ್ತೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಹಾಯ ಮಾಡಿದ ಎನ್ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ರಾಜ್ಯಕ್ಕೂ ಬಜೆಟ್‌ನಲ್ಲಿ ಕೆಲವು ಯೋಜನೆಗಳನ್ನು ಘೋಷಿಸಲಾಗಿದೆ.
ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ಅವರ ಆಂಧ್ರಪ್ರದೇಶ ಮತ್ತು ಜೆಡಿಯುನ ನಿತೀಶ್ ಕುಮಾರ್ ಅವರ ಬಿಹಾರಕ್ಕೆ ಪ್ರಮುಖ ಯೋಜನೆಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಜೆಡಿಯುನ ಬಹುಕಾಲದ ಬೇಡಿಕೆಯಾದ ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವ ಯಾವುದೇ ಯೋಜನೆಯನ್ನು ವಿತ್ತ ಸಚಿವೆ ಘೋಷಿಸದಿದ್ದರೂ ಬಿಹಾರಕ್ಕೆ ಇತರೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು.
ಬಿಹಾರದಲ್ಲಿ ರಸ್ತೆ ಸಂಪರ್ಕವನ್ನು ಹೆಚ್ಚಿಸುವ ಗುರಿಯೊಂದಿಗೆ, ಪಾಟ್ನಾ ಮತ್ತು ಪೂರ್ಣಿಯಾ, ಬಕ್ಸರ್ ಮತ್ತು ಭಾಗಲ್ಪುರ್, ಬೋಧಗಯಾ, ರಾಜಗೀರ್, ವೈಶಾಲಿ, ದರ್ಬಂಗಾವನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್‌ವೇಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಬಿಹಾರ ರಸ್ತೆಗಳಿಗೆ ₹26,000 ಕೋಟಿ; ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ
ಇನ್ನು ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಗಂಗಾನದಿಯ ಮೇಲೆ ಎರಡು ಪಥದ ಸೇತುವೆಯನ್ನು ಘೋಷಿಸಲಾಗಿದೆ. ಭಾಗಲ್‌ಪುರದ ಪಿರ್ಪೈಂಟಿಯಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಸ್ಥಾವರವನ್ನು ಹಣಕಾಸು ಸಚಿವೆ ಘೋಷಿಸಿದರು.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಿಹಾರದ ಗಯಾ ಮತ್ತು ರಾಜ್‌ಗೀರ್‌ನಲ್ಲಿ ದೇವಾಲಯದ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಕೇಂದ್ರವು ರೂಪಿಸಿದೆ. ಹಾಗೆಯೇ ಬಿಹಾರವನ್ನು ಪ್ರವಾಹದಿಂದ ರಕ್ಷಿಸಲು 11,500 ಕೋಟಿ ರೂಪಾಯಿಗಳ ಆರ್ಥಿಕ ಬೆಂಬಲದೊಂದಿಗೆ ಪ್ರವಾಹ ನಿಯಂತ್ರಣ ರಚನೆಯ ಭರವಸೆಯನ್ನೂ ನೀಡಿದೆ.
ಇನ್ನು ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿದ ಆಂಧ್ರಪ್ರದೇಶದಲ್ಲಿ ರೈಲ್ವೇ ಮತ್ತು ರಸ್ತೆಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
“ಆಂಧ್ರಪ್ರದೇಶದ ಬಂಡವಾಳದ ಅಗತ್ಯವನ್ನು ಗುರುತಿಸಿ, ಬಹುಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳ ಮೂಲಕ ಬೆಂಬಲವನ್ನು ಸುಲಭಗೊಳಿಸಲು, ಆಂಧ್ರಪ್ರದೇಶಕ್ಕೆ ಬಂಡವಾಳದ ಅಭಿವೃದ್ಧಿಗಾಗಿ 15,000 ಕೋಟಿ ರೂಪಾಯಿ ವ್ಯವಸ್ಥೆಗೊಳಿಸಲಾಗುವುದು” ಎಂದು ಹೇಳಿದರು.
2024ರ ಬಜೆಟ್‌ನಲ್ಲಿ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ವೆಚ್ಚ, ಬಜೆಟ್ ಹಂಚಿಕೆಯು ಬಿಜೆಪಿ ಮತ್ತೆ ಮರಳಿ ಅಧಿಕಾರಕ್ಕೆ ಬರಲು ಟಿಡಿಪಿ ಮತ್ತು ಜೆಡಿಯು ನೀಡಿದ ಬೆಂಬಲದ ಹಿನ್ನೆಲೆಯಲ್ಲಿ ಮಹತ್ವವನ್ನು ಪಡೆದಿದೆ.
#Budget2024 | Finance Minister Nirmala Sitharaman says, “PM Gram Sadak Yojana Phase 4 will be launched to provide all-weather roads to 25,000 rural habitats…Bihar has frequently suffered from floods. Plans to build flood control structures in Nepal are yet to progress. Our… pic.twitter.com/fZJwhifJNw
— ANI (@ANI) July 23, 2024